ಮುಖ್ಯಮಂತ್ರಿ ಯಡಿಯೂರಪ್ಪ ವಿಧಾನಸಭೆಯಲ್ಲಿ ಶುಕ್ರವಾರ ಮಂಡಿಸಿದ 2010-11ನೇ ಸಾಲಿನ ಆಯವ್ಯಯ ಪತ್ರವು ಸಿಹಿ ಕಹಿಗಳ ಸಮ್ಮಿಶ್ರಣವಾಗಿದ್ದರೆ, ದ್ವಿಚಕ್ರ ವಾಹನ ಖರೀದಿಸುವವರೊಂದಿಗೆ, ಸಿಗರೇಟು, ಸಕ್ಕರೆಯು ಕಹಿಯಾಗಿದ್ದರೆ, ಶಾಲಾ ಬ್ಯಾಗ್ ಅಗ್ಗವಾಗಿದೆ ಮತ್ತು ಆಹಾರ ಧಾನ್ಯಗಳ ಮೇಲಿನ ತೆರಿಗೆ ರಿಯಾಯಿತಿ ಈ ವರ್ಷವೂ ಮುಂದುವರಿಯುವ ಸಮಾಧಾನವಿದೆ.
ಏರಿಕೆಯಾಗಿದ್ದು... * ವ್ಯಾಟ್ ದರವನ್ನು ಏಪ್ರಿಲ್ 1, 2010ರಿಂದ ಜಾರಿಗೆ ಬರುವಂತೆ ಶೇ.12.5ರಿಂದ ಶೇ.13.5ಕ್ಕೆ ಹಾಗೂ ಶೇ.4 ಇದ್ದದ್ದು ಶೇ.5ಕ್ಕೆ ಏರಿಸಲಾಗುತ್ತದೆ. * ಹೊಸ ವಾಹನ ಖರೀದಿಸುವವರಿಗೆ ಕಹಿ ಸುದ್ದಿ: ಕಾರು-ಜೀಪು ತ್ರೈಮಾಸಿಕ ತೆರಿಗೆ ರೂ. 187.50ರಿಂದ 500 ರೂ.ಗೆ ಏರಿಕೆ * ತಂಬಾಕು ಉತ್ಪನ್ನ ಮೇಲಿನ ವ್ಯಾಟ್ ಶೇ.12.5ರಿಂದ ಶೇ.15ಕ್ಕೆ ಏರಿಕೆ, ಇದರೊಂದಿಗೆ ಸಿಗರೇಟು ಬೆಲೆ ಏರಿಕೆ * ಸರಕು ವಾಹನಗಳಿಗೆ ಸಂಚಾರಿ ಶುಲ್ಕ: 16 ಟನ್‌ಗಿಂತ ಅಧಿಕಾರ ಭಾರದ ವಸ್ತುಗಳ ಮೇಲೆ ಪ್ರತಿ ಸಂಚಾರಕ್ಕೆ 500 ರೂ. ತೆರಿಗೆ * ಲಘು ವಾಹನಗಳ ಜೀವಾವಧಿ ತೆರಿಗೆ ಏರಿಕೆ * ಸಕ್ಕರೆ ಮೇಲಿನ ಶೇ.1ರ ಪ್ರವೇಶ ತೆರಿಗೆಯನ್ನು ವಿತರಣೆದಾರರ ಹಂತಕ್ಕೆ ಬದಲಾಗಿ ಕಾರ್ಖಾನೆಗಳ ಹಂತದಲ್ಲಿ ಸಂಗ್ರಹಿಸಲು ಕಾನೂನು ತಿದ್ದುಪಡಿ * ಹೋಟೆಲ್ ಕೊಠಡಿಗಳ ವಿಲಾಸಿ ತೆರಿಗೆ ಹೆಚ್ಚಳ * ಬೈಕ್ ಬೆಲೆ ಹೆಚ್ಚಳವಾಗಲಿದೆ: 50 ಸಾವಿರಕ್ಕಿಂತ ಕಡಿಮೆ ಬೆಲೆ ಬೈಕ್‌ಗಳ ನೋಂದಣಿ ಶುಲ್ಕ ಶೇ.8ರಿಂದ ಶೇ.10ಕ್ಕೆ, ಅದಕ್ಕಿಂತ ಹೆಚ್ಚಿನ ಬೆಲೆಯ ದ್ವಿಚಕ್ರ ವಾಹನಗಳಿಗೆ ನೋಂದಣಿ ಶುಲ್ಕವನ್ನು ಶೇ.10ರಿಂದ ಶೇ.12ಕ್ಕೆ ಏರಿಸಲಾಗಿದೆ.
ಇಳಿಕೆಯಾಗಿದ್ದು... * ಆಹಾರಧಾನ್ಯಗಳಾದ ಭತ್ತ, ಅಕ್ಕಿ, ಗೋಧಿ, ಬೇಳೆಕಾಳುಗಳು, ಅಕ್ಕಿ ಮತ್ತು ಗೋಧಿಯ ಪದಾರ್ಥಗಳ ಮೇಲಿನ ತೆರಿಗೆ ವಿನಾಯಿತಿ ಇನ್ನೂ ಒಂದು ವರ್ಷ ಮುಂದುವರಿಕೆ * ವ್ಯಾಟ್ ವ್ಯಾಪ್ತಿಯ ಕನಿಷ್ಠ ಮಿತಿ 2 ಲಕ್ಷದಿಂದ 5 ಲಕ್ಷಕ್ಕೆ ಏರಿಕೆ * 200 ರೂ. ಮೀರದ ಶಾಲಾ ಬ್ಯಾಗ್ ಮೇಲಿನ ತೆರಿಗೆ ಶೇ.5ಕ್ಕೆ ಇಳಿಕೆ. * ನಿರುಪಯುಕ್ತ ವಸ್ತುಗಳ ವ್ಯಾಟ್ ಶೇ.12.5ರಿಂದ ಶೇ.5ಕ್ಕೆ ಇಳಿಕೆ * ಶೇ.12.5ರ ತೆರಿಗೆ ಗುಂಪಿನಲ್ಲಿರುವ ಸಾಂಬಾರ ಪದಾರ್ಥಗಳು, ಮಸಾಲೆ ಪುಡಿ ಮಿಶ್ರಣಗಳು, ಗೋಧಿಯ ಉತ್ಪನ್ನವಾದ ಶಾವಿಗೆಗೆ ಸಮನಾದ ಮ್ಯಾಕ್ರೋನಿ ಶೇ.5 ವ್ಯಾಟ್ ವ್ಯಾಪ್ತಿಗೆ * ಕ್ರೀಡಾ ಪಾರಿತೋಷಕ ಟ್ರೋಫಿ, ಫಲಕ, ಪದಕ, 15ಕೆವಿಎಗಿಂತ ಕಡಿಮೆ ಸಾಮರ್ಥ್ಯದ ಜನರೇಟರ್, ರೈಲ್ವೇ ಕಾಂಕ್ರೀಟ್ ಸ್ಲೀಪರ್ ಮೇಲಿನ ವ್ಯಾಟ್ ತೆರಿಗೆಯೂ ಶೇ.12.5ರಿಂದ ಶೇ.5ರ ವ್ಯಾಪ್ತಿಗೆ ಇಳಿಕೆ.