ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಇದು ರೈತ ಮತ್ತು ಜನವಿರೋಧಿ ಬಜೆಟ್: ಸಿದ್ದರಾಮಯ್ಯ (State Budget | Karnataka Budget 2010-11 | Yaddyurappa | BJP)
Bookmark and Share Feedback Print
 
NRB
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಮಂಡಿಸಿದ್ದ ಪ್ರಸಕ್ತ ಸಾಲಿನ ಮುಂಗಡ ಪತ್ರ, ರೈತ ಬಜೆಟ್ ಎಂಬ ನಿರೀಕ್ಷೆ ಹುಸಿಯಾಗಿದೆ. ಆ ನಿಟ್ಟಿನಲ್ಲಿ ರಾಜ್ಯದ ರೈತರ ನಿರೀಕ್ಷೆ ಠುಸ್ಸಾಗಿದೆ ಎಂದು ವಿಧಾನಸಭೆಯ ಪ್ರತಿಪಕ್ಷಯ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.

ಶುಕ್ರವಾರ ವಿತ್ತ ಖಾತೆಯ ಹೊಣೆ ಹೊತ್ತಿರುವ ಮುಖ್ಯಮಂತ್ರಿಗಳು ರಾಜ್ಯ ಬಜೆಟ್ ಮಂಡಿಸಿದ್ದು, ಅದಕ್ಕೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ಕೇಂದ್ರ ಸರ್ಕಾರ ಬಡ್ಡಿದರವನ್ನು ಶೇ.7ರಿಂದ 5ಕ್ಕೆ ಇಳಿಸಿತ್ತು. ಹಾಗೆಯೇ ರಾಜ್ಯ ಸರ್ಕಾರ ಕೂಡ ಶೇ.3ರಿಂದ 1ಕ್ಕೆ ಇಳಿಸಬಹುದಿತ್ತು. ಅದನ್ನೂ ಕೂಡ ರಾಜ್ಯ ಮಾಡಿಲ್ಲ ಎಂದು ದೂರಿದರು.

ವ್ಯಾಟ್ ಹೆಚ್ಚಳದಿಂದ ಶ್ರೀಸಾಮಾನ್ಯರ ಮೇಲೆ ಮತ್ತಷ್ಟು ಹೊರೆ ಬಿದ್ದಂತಾಗಿದೆ. ಇದರಿಂದ ದೈನಂದಿನ ಆಹಾರಗಳ ಬೆಲೆ ಏರಲಿದೆ. ಸುವರ್ಣ ಗ್ರಾಮ ಯೋಜನೆ ಕೇವಲ ಬುರುಡೆ ಎಂದು ವಾಗ್ದಾಳಿ ನಡೆಸಿದ ಅವರು, ಇದೊಂದು ಜನ ವಿರೋಧಿ ಬಜೆಟ್. ನೀರಾವರಿ, ವಿದ್ಯುತ್ ಉತ್ಪಾದನೆಗೆ ಬಜೆಟ್‌ನಲ್ಲಿ ಆದ್ಯತೆ ಇಲ್ಲ ಎಂದು ದೂರಿದರು.

ಡಿ.ಕೆ.ಶಿವಕುಮಾರ್: ಇದು ದೂರದೃಷ್ಟಿ ಇಲ್ಲದ ಬಜೆಟ್ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಟೀಕಿಸಿದ್ದು, ಮುಖ್ಯಮಂತ್ರಿ ಯಡಿಯೂರಪ್ಪನವರು ಸಾಲಗಾರರ ರಾಜ್ಯ ಮಾಡಲು ಹೊರಟಿದ್ದಾರೆ ಎಂದು ಆರೋಪಿಸಿದರು. ಕೃಷಿ ಕ್ಷೇತ್ರಕ್ಕೂ ಸರಿಯಾದ ಆದ್ಯತೆ ನೀಡಿಲ್ಲ ಎಂದು ಹೇಳಿದರು.

ಎಂ.ಸಿ.ನಾಣಯ್ಯ: ಪ್ರಸಕ್ತ ಸಾಲಿನ ಆಯವ್ಯಯ ಮಂಡನೆಯಲ್ಲಿ ಮುಖ್ಯಮಂತ್ರಿಗಳು ಹೊಸ ಆಯಾಮಕ್ಕೆ ಚಾಲನೆ ನೀಡಿದ್ದಾರೆ. ಮುಂಗಡ ಪತ್ರಕ್ಕೆ ತನ್ನದೇ ಆದ ಚೌಕಟ್ಟು ಇದೆ. ಅದನ್ನು ಬಿಟ್ಟು ಪ್ರತಿಯೊಂದು ಇಲಾಖೆಯ ಕೆಲಸವನ್ನು ಮುಖ್ಯಮಂತ್ರಿಗಳೇ ಮಾಡಿದ್ದಾರೆ ಎಂದು ಜೆಡಿಎಸ್ ಹಿರಿಯ ಮುಖಂಡ ಎಂ.ಸಿ.ನಾಣಯ್ಯ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

NRB
ಯಾವ ಇಲಾಖೆ ಮೂಲಕ ಆರ್ಥಿಕ ನೆರವು ನೀಡಬೇಕಿತ್ತೋ ಅದನ್ನು ಬಿಟ್ಟು ತಾವೇ ಎಲ್ಲದಕ್ಕೂ ಆರ್ಥಿಕ ನೆರವನ್ನು ಘೋಷಿಸಿದ್ದಾರೆ. ಮಠ-ಮಂದಿರಗಳಿಗೆ ಆರ್ಥಿಕ ನೆರವು ನೀಡುವ ಸಂಪ್ರದಾಯವನ್ನೂ ಮುಂದುವರಿಸಿದ್ದಾರೆ. ವಿವಿಧ ಜಾತಿ, ಮಠಗಳ ಮುಂಗಡ ಪತ್ರದಂತೆ ಇದು ಭಾಸವಾಗುತ್ತದೆ ಎಂದು ಕಿಡಿಕಾರಿದರು.

ವೈ.ಎಸ್.ವಿ.ದತ್ತಾ: ರಾಜ್ಯ ಮುಂಗಡ ಪತ್ರದಲ್ಲಿ ಹಳ್ಳಿಗಳನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಲಾಗಿದೆ ಎಂದು ಜೆಡಿಎಸ್ ವಕ್ತಾರ ವೈ.ಎಸ್.ವಿ.ದತ್ತಾ ಟೀಕಿಸಿದ್ದು, ತೆರಿಗಾಗಿ ಬಡವರ ಜೇಬಿಗೆ ಕತ್ತರಿ ಹಾಕುವ ಕೆಲಸ ಮಾಡಿದ್ದಾರೆ. ರೈತರು ಹಾಗೂ ಇಂಧನ ಕ್ಷೇತ್ರಕ್ಕೆ ಆದ್ಯತೆ ಕೊಟ್ಟಿಲ್ಲ ಎಂದು ಹೇಳಿದರು.

ರಾಜ್ಯ ಬಜೆಟ್ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಸಂಬಂಧಿತ ಮಾಹಿತಿ ಹುಡುಕಿ