ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಕನ್ನಡಕ್ಕೆ ಏನೇನು: ವಾಟಾಳ್ ಕೆಲ್ಸ ನೀವ್ ಮಾಡ್ತೀರೇನ್ರೀ? (State Budget | Karnataka Budget 2010-11 | Yaddyurappa | BJP Government | Kannada)
Bookmark and Share Feedback Print
 
ಮುಖ್ಯಮಂತ್ರಿ ಯಡಿಯೂರಪ್ಪ ವಿಧಾನಸಭೆಯಲ್ಲಿ ಶುಕ್ರವಾರ 2010-11ನೇ ಸಾಲಿನ ಆಯವ್ಯಯ ಪತ್ರ ಮಂಡಿಸಿದ ಸಂದರ್ಭ ಕನ್ನಡದ ಅಭಿವೃದ್ಧಿ ಕುರಿತು ಸಾಕಷ್ಟು ಘೋಷಣೆಗಳನ್ನು ಮಾಡಿದರು, ಈ ಸಂದರ್ಭ ಮಾತು ಮುಂದುವರಿಸುತ್ತಿದ್ದಾಗ ಶಾಸಕ ಬಿ.ಸಿ.ಪಾಟೀಲ್ ಗದ್ದಲವೆಬ್ಬಿಸಿದರು. ಆಗ ತಾಳ್ಮೆ ಕಳೆದುಕೊಂಡ ಮುಖ್ಯಮಂತ್ರಿ, "ವಾಟಾಳ್ ನಾಗರಾಜ್ ಕೆಲಸ ನೀವು ಮಾಡ್ತೀರೇನ್ರೀ" ಎಂದು ಕೇಳಿದರು.

ಬಿ.ಸಿ.ಪಾಟೀಲ್ ಅವರು ತಮ್ಮ ಗದ್ದಲ ಮುಂದುವರಿಸಿದರಾದರೂ, ಮುಖ್ಯಮಂತ್ರಿ ಅತ್ತ ಗಮನ ಕೊಡದೆ ಭಾಷಣ ಓದುತ್ತಾ ಹೋದರು.
ಕನ್ನಡದ ಸನ್ಮಾನವೆನಗದುವೆ ವರಮಾನ
ಕನ್ನಡಿಗರ ಸ್ವತಂತ್ರವದೆ ಪರಮಮಂತ್ರ
ಕನ್ನಡದ ಕೀರ್ತಿ ಎನ್ನ ಚಿತ್ತದ ಸ್ಫೂರ್ತಿ
ಕನ್ನಡದ ಒಗ್ಗೂಟವೆನಗದೆ ಕಿರೀಟ
ಎಂಬ ಬೆನಗಲ್ ರಾಮ ರಾವ್ ಅವರ ಸಾಲುಗಳನ್ನು ಉಲ್ಲೇಖಿಸಿದ ಮುಖ್ಯಮಂತ್ರಿ, ಕನ್ನಡಕ್ಕೆ ಶಾಸ್ತ್ರೀಯ ಭಾಷೆ ಸ್ಥಾನ ಗಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ಈ ಸ್ಥಾನ ನಿಮಿತ್ತ ದೊರೆಯಬೇಕಾದ ಸಕಲ ಸೌಲಭ್ಯಗಳನ್ನು ಕೇಂದ್ರದಿಂದ ಪಡೆದುಕೊಳ್ಳಲು ಸರ್ವ ಪ್ರಯತ್ನವನ್ನೂ ಮಾಡಲಿದೆ ಎಂದರು.

ಭಾಷೆಯ ಅಭಿವೃದ್ಧಿಗಾಗಿ ವಿಶೇಷ ಕಾರ್ಯಕ್ರಮಗಳಿಗಾಗಿ 50 ಕೋಟಿ ರೂ. ಒದಗಿಸಲಾಗುತ್ತದೆ. ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಉತ್ತರ ಕನ್ನಡ ಜಿಲ್ಲೆಗಳ ಪಾರಂಪರಿಕ ಕ್ಷೇತ್ರಗಳ ಅಭಿವೃದ್ಧಿಗಾಗಿ ಸಹ್ಯಾದ್ರಿ ಪಾರಂಪರಿಕ ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆಗೆ 20 ಕೋಟಿ ನೀಡಲಾಗುತ್ತದೆ ಎಂದರು.

ಬೆಳಗಾವಿಯಲ್ಲಿ ಈ ವರ್ಷಕ್ಕೆ ಮುಂದೂಡಲಾಗಿರುವ ವಿಶ್ವಕನ್ನಡ ಸಮ್ಮೇಳನಕ್ಕೆ 10 ಕೋಟಿ, ಗದಗದಲ್ಲಿ ಸಾಹಿತ್ಯ ಭವನಕ್ಕೆ 3 ಕೋಟಿ, ಕೋಳಿವಾಡದಲ್ಲಿ ಕುಮಾರವ್ಯಾಸ ಸ್ಮಾರಕಕ್ಕೆ 1 ಕೋಟಿ ನೀಡಲಾಗುವುದು ಎಂದು ಘೋಷಿಸಿದರು.

ಮತ್ತಷ್ಟು ಮುಖ್ಯಾಂಶಗಳು:
* ರಾಷ್ಟ್ರ ಪ್ರಶಸ್ತಿ ಪುರಸ್ಕೃತರಿಗೆ ಕೆಎಸ್ಆರ್‌ಟಿಸಿಯಲ್ಲಿ ಉಚಿತ ಪ್ರಯಾಣ
* ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರಗಳಿಗೆ 10 ಕೋಟಿ ರೂ.
* ಕೊಪ್ಪಳ ಆನೆಗುಂದಿ ಉತ್ಸವಕ್ಕೆ 2 ಕೋಟಿ.
* ಜ್ಞಾನಪೀಠ ವಿಜೇತ ಸಾಹಿತಿಗಳ ಪ್ರಾತಿನಿಧಿಕ ಕೃತಿಗಳ ಸಂಕಲನಗಳನ್ನು ಪ್ರಕಟಿಸಲು 1 ಕೋಟಿ ನೀಡಲಾಗುತ್ತದೆ.
* ಜ್ಞಾನಪೀಠ ವಿಜೇತರ ಗ್ರಂಥಗಳನ್ನು ಇಂಗ್ಲಿಷ್ ಮತ್ತು ಇತರ ಭಾಷೆಗಳಿಗೆ ಅನುವಾರಕ್ಕೆ ವ್ಯವಸ್ಥೆ
* ಸಾಹಿತಿಗಳು, ಕಲಾವಿದರಿಗೆ ಸಂಶೋಧನೆ ಹಾಗೂ ಅಧ್ಯಯನಕ್ಕಾಗಿ ಆಯಾ ಅಕಾಡೆಮಿಗಳಿಂದ ತಲಾ ಐದು ಮಂದಿಗೆ ಪ್ರತಿ ವರ್ಷ ಫೆಲೋಶಿಪ್. ಹಿರಿಯ ಸಾಹಿತಿ/ಕಲಾವಿದರಿದೆ ಮಾಸಿಕ 10 ಸಾವಿರ ರೂ.ನಂತೆ ಒಂದು ವರ್ಷ ಫೆಲೋಶಿಪ್.
* ಬೆಳಗಾವಿಯಲ್ಲಿ ಕನ್ನಡ ಸಾಂಸ್ಕೃತಿಕ ಭವನ ನಿರ್ಮಾಣಕ್ಕೆ 2 ಕೋಟಿ ರೂ.
* ನಾಡಪ್ರಭು ಕೆಂಪೇಗೌಡ ಹೆಸರಿನಲ್ಲಿ ಬೆಂಗಳೂರು ಹಬ್ಬ ಆಚರಿಸಲು 2 ಕೋಟಿ ರೂ.
* ಹುಬ್ಬಳ್ಳಿಯಲ್ಲಿ ಗಂಗೂಬಾಯಿ ಹಾನಗಲ್ ಸಂಗೀತ ವಿದ್ಯಾಲಯ ನಿರ್ವಹಣೆಗೆ 1 ಕೋಟಿ ರೂ.

ವಿಷ್ಣು, ರಾಜ್ ಸ್ಮಾರಕಕ್ಕೆ ಮತ್ತು ಪತ್ರಿಕಾ ಭವನಕ್ಕೆ ಅನುದಾನ
* ಕನ್ನಡ ಚಲನಚಿತ್ರೋದ್ಯಮ ಅಮೃತೋತ್ಸವ ಭವನ ನಿರ್ಮಾಣಕ್ಕೆ ನಿವೇಶನ ಈಗಾಗಲೇ ನೀಡಲಾಗಿದ್ದು, ಕಟ್ಟಡಕ್ಕೆ 5 ಕೋಟಿ ಅನುದಾನ.
* ದಿವಂಗತ ನಟ ವಿಷ್ಣುವರ್ಧನ್ ಸ್ಮಾರಕಕ್ಕೆ 10 ಕೋಟಿ
* ದಿ.ರಾಜ್‌ಕುಮಾರ್ ಸ್ಮಾರಕದ ಮುಂದುವರಿದ ಕಾಮಗಾರಿಕೆ 4 ಕೋಟಿ ರೂ.
* ಚಿತ್ರೋದ್ಯಮದ ಕಲಾವಿದರು, ಕಾರ್ಮಿಕರ ಕ್ಷೇಮ ನಿಧಿಗೆ 50 ಲಕ್ಷ ರೂ. ವಂತಿಗೆ
* ಬೆಂಗಳೂರಿನಲ್ಲಿ ಪತ್ರಿಕಾ/ಮಾಧ್ಯಮ ಭವನ ನಿರ್ಮಾಣಕ್ಕೆ 5 ಕೋಟಿ. ಜಿಲ್ಲಾ ಮಾಧ್ಯಮ ಕೇಂದ್ರಗಳ ನಿರ್ಮಾಣಕ್ಕೆ 3 ಕೋಟಿ ರೂ.
* ಮಾಧ್ಯಮ ಅಕಾಡೆಮಿ ವತಿಯಿಂದ ವಿವಿಧ ಚಟುವಟಿಕೆಗಳಿಗೆ 1 ಕೋಟಿ.
* ಪತ್ರ ಕರ್ತರ ಹಾಲಿ ಮಾಸಾಶನ 1000 ರೂಪಾಯಿಯನ್ನು 2000 ರೂ.ಗೆ ಏರಿಸುವುದು
ಸಂಬಂಧಿತ ಮಾಹಿತಿ ಹುಡುಕಿ