ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಬಜೆಟ್: ಕೃಷಿ ಮತ್ತು ಗ್ರಾಮೀಣಾಭಿವೃದ್ಧಿಗೆ ಆದ್ಯತೆ (State Budget 2010 | Karnataka Budget 2010 | Yeddyurappa | BJP)
Bookmark and Share Feedback Print
 
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮಂಡಿಸಿದ್ದ 2010-11ರ ಸಾಲಿನ ಮುಂಗಡ ಪತ್ರದಲ್ಲಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ.

ಕೃಷಿ ಅಭಿವೃದ್ಧಿ ಆದ್ಯತೆಯ ಮುಖ್ಯಾಂಶ:

ಒಣಭೂಮಿಯಲ್ಲಿ ಜಲಪೂರಣ: ರಾಜ್ಯದ ಕೃಷಿ ಕ್ಷೇತ್ರದಲ್ಲಿ 2ನೆಯ ಹಸಿರು ಕ್ರಾಂತಿಯನ್ನು ಉಂಟು ಮಾಡಲು ಒಣಭೂಮಿ ಪ್ರದೇಶಗಳಲ್ಲಿ ಕೃಷಿ ಉತ್ಪಾದನೆ ಹೆಚ್ಚಳ ಮಾಡುವ ನಿಟ್ಟಿನಲ್ಲಿ ಪ್ರತಿವರ್ಷ 2ಲಕ್ಷ ಚೆಕ್ ಡ್ಯಾಂ, ಬಾಂದಾರ, ಮುಂತಾದವುಗಳ ರೂಪದಲ್ಲಿ ಜಲಪೂರಣ ಸ್ಥಾವರ ಸ್ಥಾಪನೆ.

ನೀರಾವರಿ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ: ನೀರಾವರಿ ಪ್ರದೇಶವನ್ನು ಮುಂದಿನ ಮೂರು ವರ್ಷಗಳಲ್ಲಿ 2.11ಲಕ್ಷ ಹೆಕ್ಟೇರಿನಷ್ಟು ವಿಸ್ತರಿಸಲು ಕೃಷ್ಣಾಕೊಳ್ಳದ ಯೋಜನೆ ಪೂರ್ಣಗೊಳಿಸುವುದಲ್ಲದೆ, ಭದ್ರಾ ಮೇಲ್ದಂಡೆ ಮುಂತಾದ ಯೋಜನೆ ತ್ವರಿತಗೊಳಿಸಲಾಗುವುದು. ಅಲ್ಲದೆ ಸಣ್ಣ ಕೆರೆಗಳ ಜೀರ್ಣೋದ್ಧಾರ ಮತ್ತು ಸಣ್ಣ ನೀರಾವರಿ ಕಾಮಗಾರಿಗಳಿಗೆ ವಿಶೇಷ ಆದ್ಯತೆ.

ಕೃಷಿ ಮಾರುಕಟ್ಟೆ ಆಧುನೀಕರಣ: ಕೃಷಿ ಹಾಗೂ ತೋಟಗಾರಿಕೆ ಉತ್ಪನ್ನಗಳ ಮಾರಾಟಕ್ಕೆ ವೈಜ್ಞಾನಿಕವಾದ ವ್ಯವಸ್ಥೆಯನ್ನು ಕಲ್ಪಿಸಲು ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲಿಯೂ ಕೃಷಿ ಉತ್ಪನ್ನಗಳ ಎಕ್ಸ್‌ಚೇಂಚ್‌ಗಳ ನಿರ್ಮಾಣ. ಹಣ್ಣು ಮತ್ತು ತರಕಾರಿ ಬೆಳೆಗಳ ವ್ಯವಸ್ಥಿತ ಮಾರುಕಟ್ಟೆ ಸೌಲಭ್ಯವನ್ನು ಕಲ್ಪಿಸಲು ಜಿಲ್ಲಾ ಕೇಂದ್ರಗಲಲ್ಲಿ ದೈನಂದಿನ ಸಂಗ್ರಹ ವ್ಯವಸ್ಥೆ ಮಾಡಲು 5ಕೋಟಿ ಒದಗಿಸುವುದು.

ಮೈಸೂರು, ಹಿರಿಯೂರು, ಶಿರಸಿ, ಕೊಪ್ಪಳದಲ್ಲಿ ತೋಟಗಾರಿಕೆ ಕಾಲೇಜು ಸ್ಥಾಪನೆಗೆ ತಲಾ 5ಕೋಟಿ ಒದಗಿಸುವುದು. ರಾಜ್ಯದ ಯಾವುದೇ ಭಾಗದಲ್ಲಿ ಹಣ್ಣು ಮತ್ತು ತರಕಾರಿ ಸಂಸ್ಕರಣಾ ಘಟಕಗಳನ್ನು ಕನಿಷ್ಟ 10ಲಕ್ಷ ಬಂಡವಾಳದೊಡನೆ ಸ್ಥಾಪಿಸುವ ಉದ್ಯಮಿಗಳಿಗೆ ಶೇ.25ರಷ್ಟು ಸಹಾಯಧನ ನೀಡುವುದು. ಇದಕ್ಕಾಗಿ 10ಕೋಟಿ ಒದಗಿಸಲಾಗುವುದು.

ರಾಜ್ಯದ ರೈತರಿಗೆ ಸಹಕಾರ ಸಂಘಗಳ ಮೂಲಕ ಶೇ.3ರ ಬಡ್ಡಿ ದರದಲ್ಲಿ ಕೃಷಿ ಸಾಲ ಒದಗಿಸುವ ಪದ್ದತಿಯನ್ನು ಸರ್ಕಾರ ನಾಲ್ಕು ವರ್ಷಗಳಿಂದ ಜಾರಿಗೆ ತಂದಿದ್ದು, ಈ ಯೋಜನೆ ಮುಂದುವರಿಸಲು 2010-11ರಲ್ಲಿ ಸುಮಾರು 120ಕೋಟಿ ರೂ. ವಿನಿಯೋಗಿಸಲಾಗುವುದು.

ಪ್ರತಿಯೊಂದು ಗ್ರಾ.ಪಂ.ವ್ಯಾಪ್ತಿಯಲ್ಲಿ ಮತ್ತು ಪ್ರತಿ ಗ್ರಾಮದಲ್ಲಿ ಜಲಪೂರಣ ವ್ಯವಸ್ಥೆ ಕಲ್ಪಿಸಲು ಉದ್ಯೋಗ ಖಾತರಿ ಯೋಜನೆಯ ಅನುದಾನದೊಡನೆ ವಿಶೇಷ ಅನುದಾನ ನೀಡಲಾಗುವುದು.ರಾಜ್ಯದಲ್ಲಿ ಅಂತರ್‌ಗಂಗಾ ಸೂಕ್ಷ್ಮ ನೀರಾವರಿ ನಿಗಮ ಸ್ಥಾಪಿಸಲು 100ಕೋಟಿ ರೂ.ಬಂಡವಾಳ.

ಉತ್ತಮ ತಳಿಯ ಬೀಜಗಳು, ಸುಧಾರಿತ ಕೃಷಿ ಉಪಕರಣಗಳು, ಮುಂತಾದವುಗಳನ್ನು ಪರಿಚಯಿಸಲು ಜಿಲ್ಲಾ ಮಟ್ಟದಲ್ಲಿ ಒಂದು ತಿಂಗಳ ಕಾಲ ಕೃಷಿ ಮೇಳ ಏರ್ಪಡಿಸಲು 15ಕೋಟಿ ರೂ. ಅನುದಾನ.ಮಲೆನಾಡು ಪ್ರದೇಶದಲ್ಲಿ ವಿಶಿಷ್ಟ ಬೆಳೆಗಳ ಕುರಿತು ಅಧ್ಯಯನ ಹಾಗೂ ಸಂಶೋಧನೆಗಳನ್ನು ನಡೆಸಲು ಶಿವಮೊಗ್ಗದಲ್ಲಿ ಪ್ರತ್ಯೇಕ ಕೃಷಿ ವಿವಿ ಸ್ಥಾಪಿಸಲು 10ಕೋಟಿ.

ರೈತರು ಪಹಣಿ ಪತ್ರ ಪಡೆಯಲು ನೀಡಬೇಕಾದ ಶುಲ್ಕವನ್ನು 15ರೂ.ನಿಂದ 10ಕ್ಕೆ ಇಳಿಸಲಾಗಿದೆ.ಪ್ರತಿಯೊಂದು ಹೋಬಳಿ ಕೇಂದ್ರದಲ್ಲಿ ಸ್ಥಾಪಿಸಿರುವ ರೈತ ಸಂಪರ್ಕ ಕೇಂದ್ರಗಳಿಗೆ ಸೂಕ್ತ ಕಟ್ಟಡ ಒದಗಿಸಲು 25ಕೋಟಿ ರೂ. ಅನುದಾನ.

2010-11ರಲ್ಲಿ 70ತಾಲೂಕುಗಳಲ್ಲಿ ನಿರಂತರ ಜ್ಯೋತಿ ಯೋಜನೆಯನ್ನು 1200ಕೋಟಿ ರೂ.ವೆಚ್ಚದಲ್ಲಿ ಜಾರಿ ಮಾಡಲು ವಿದ್ಯುತ್ ಪ್ರಸರಣ ಕಂಪನಿಗಳಿಗೆ ಅಗತ್ಯವಿರುವ ಬಂಡವಾಳದ ನೆರವು ನೀಡಲಾಗುವುದು.

ಹಾವು ಕಡಿತದಿಂದ, ತೆಂಗು ಅಡಿಕೆ ಮರಗಳಿಂದ ಬಿದ್ದು ಆಕಸ್ಮಿಕ ಮರಣ ಹೊಂದಿದ ರೈತರು ಮತ್ತು ಕೃಷಿ ಕಾರ್ಮಿಕ ಕುಟುಂಬಗಳಿಗೆ 1ಲಕ್ಷ ರೂ. ನೆರವು ಹಾಗೂ ಹುಲ್ಲು ಮೆದೆ, ಬಣವೆಗಳಿಗೆ ಆಕಸ್ಮಿಕ ಬೆಂಕಿಯಿಂದ ನಷ್ಟವುಂಟಾದರೆ 10ಸಾವಿರ ರೂ.ಪರಿಹಾರ ನೀಡಲಾಗುವುದು.

ಮರಳಿ ಹಳ್ಳಿಗೆ-ಗ್ರಾಮೀಣಾಭಿವೃದ್ಧಿ ಮುಖ್ಯಾಂಶ:

ರಾಜ್ಯದ ಗ್ರಾಮಗಳ ಸಮಗ್ರ ಅಭಿವೃದ್ಧಿಗಾಗಿ ಪ್ರಾರಂಭಿಸಿರುವ ಸುವರ್ಣಗ್ರಾಮೋದಯ ಯೋಜನೆಯ ಅನುಷ್ಠಾನಕ್ಕಾಗಿ ಈವರೆಗೆ ಸರ್ಕಾರವು ಸುಮಾರು 900ಕೋಟಿ ರೂ. ವೆಚ್ಚ ಮಾಡಿದೆ. ಈ ಯೋಜನೆಯನ್ನು 2010-11ರಲ್ಲಿ ಮುಂದುವರಿಸಲು 1000ಕೋಟಿ ವರೆಗೆ ಅನುದಾನ.

ಗ್ರಾಮೀಣ ಪ್ರದೇಶದಲ್ಲಿ ಮೂಲಭೂತ ಸೌಕರ್ಯಗಲ ಮತ್ತು ಉತ್ಪಾದಕ ಆಸ್ತಿಗಳಾದ ಕೆರೆ, ಕಾಲುವೆ ಮುಂತಾದ ಕಾಮಗಾರಿ ಯೋಜನೆ ಅನುಷ್ಠಾನಕ್ಕಾಗಿ 3000ಕೋಟಿ ರೂ.ವೆಚ್ಚ.

2009-10ರಲ್ಲಿ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯ ಅಡಿಯಲ್ಲಿ ಗ್ರಾಮೀಣ ಅಭಿವೃದ್ಧಿ ಇಲಾಖೆಯಿಂದ 2125ಕಿ.ಮೀ. ನಷ್ಟು ರಸ್ತೆಯನ್ನು 726ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಲಾಗಿದೆ. 2010-11ರ ಸಾಲಿನಲ್ಲಿ ಈ ಯೋಜನೆಯಡಿ 1,500 ಕೋಟಿ ಬಳಸಲು ಉದ್ದೇಶಿಸಿದ್ದು, ಇದಕ್ಕಾಗಿ ರಾಜ್ಯ ಸರ್ಕಾರದ ಪಾಲಿನ 100ಕೋಟಿ ರೂ.ಅನುದಾನ ಒದಗಿಸಲಾಗಿದೆ.

ಗ್ರಾಮೀಣ ರಸ್ತೆಗಳ ವಾರ್ಷಿಕ ಹಾಗೂ ವಿಶೇಷ ನಿರ್ವಹಣೆಗಾಗಿ 150ಕೋಟಿ ಒದಗಿಸಲಾಗಿದೆ. ಚಾಮರಾಜನಗರ ಜಿಲ್ಲೆಯ ಗ್ರಾಮಗಳಿಗೆ ಕಬಿನಿ ನದಿಯಿಂದ ಕುಡಿಯುವ ನೀರನ್ನು ಒದಗಿಸಲು 100ಕೋಟಿ ರೂ.ಯೋಜನೆ ರೂಪಿಸಲಾಗುವುದು. ರಾಜ್ಯದ ಗ್ರಾಮಾಂತರ ಪ್ರದೇಶಗಳ ಕುಡಿಯುವ ನೀರಿನ ಯೋಜನೆಗಳಿಗಾಗಿ ಕೇಂದ್ರದ ಅನುದಾನವೂ ಸೇರಿದಂತೆ 2010-11ರಲ್ಲಿ 1000ಕೋಟಿ ರೂ.ವಿನಿಯೋಗಿಸಲಾಗುವುದು.

ಗ್ರಾಮೀಣ ಪ್ರದೇಶಗಳಲ್ಲಿ ನಿವೇಶನ ರಹಿತ ಕುಟುಂಬಗಳಿಗೆ ಉಚಿತ ನಿವೇಶನ ಒದಗಿಸಲು 75ಕೋಟಿ ಒದಗಿಸಲಾಗುವುದು. ರಾಜ್ಯದಲ್ಲಿರುವ ಹೈದರಾಬಾದ್ ಕರ್ನಾಟಕ ಅಭಿವೃದ್ಧಿ ಮಂಡಳಿ, ಬಯಲುಸೀಮೆ ಅಭಿವೃದ್ಧಿ ಮಂಡಳಿ, ಮಲೆನಾಡು ಅಭಿವೃದ್ಧಿ ಮಂಡಳಿ, ಕರಾವಳಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರಗಳ ಅಭಿವೃದ್ಧಿಗೆ 53ಕೋಟಿ ವಿನಿಯೋಗ.
ಸಂಬಂಧಿತ ಮಾಹಿತಿ ಹುಡುಕಿ