ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ರಾಜ್ಯ ಬಜೆಟ್: ಶಿಕ್ಷಣ ಕ್ಷೇತ್ರ, ಆರೋಗ್ಯ ರಕ್ಷಣೆಗೆ ಒತ್ತು (State Budget | Karnataka Budget 2010-11 | Yaddyurappa | BJP Government | Education | Health)
Bookmark and Share Feedback Print
 
ವಿಧಾನಸಭೆಯಲ್ಲಿ ಶುಕ್ರವಾರ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮಂಡಿಸಿದ 2010-11ನೇ ಸಾಲಿನ ಆಯವ್ಯಯ ಪತ್ರದಲ್ಲಿ ಸಾಕ್ಷರತೆ ಹಾಗೂ ಗ್ರಾಮೀಣ ಆರೋಗ್ಯಕ್ಕೆ ಹೆಚ್ಚು ಒತ್ತು ನೀಡುವ ಸಂಕಲ್ಪ ಮಾಡಲಾಗಿದ್ದು, ಈ ವರ್ಷದಿಂದಲೇ ಜಾರಿಗೆ ಬರುವಂತೆ ಪ್ರೌಢ ಶಾಲಾ ಶಿಕ್ಷಣವನ್ನು ಕಡ್ಡಾಯ ಮಾಡಲಾಗುತ್ತದೆ ಎಂದು ಘೋಷಿಸಲಾಗಿದೆ.

ಮೂಲ ಶಿಕ್ಷಣ ಹಾಗೂ ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದಂತೆ ಬಜೆಟ್‌ನ ಪ್ರಸ್ತಾವನೆಗಳು ಇಂತಿವೆ:
* ರಾಜ್ಯದ ಪ್ರತಿಯೊಂದು ಶಾಲೆಯ ಮಕ್ಕಳು ಕನಿಷ್ಠ 10ನೇ ತರಗತಿವರೆಗೆ ಶಿಕ್ಷಣ ಪಡೆಯಲು ಅಗತ್ಯವಿರುವ ಎಲ್ಲ ಸೌಕರ್ಯಗಳನ್ನು 3 ವರ್ಷದೊಳಗೆ ಒದಗಿಸಲಾಗುತ್ತದೆ
* ಎಲ್ಲ ಪ್ರಾಥಮಿಕ, ಪ್ರೌಢ ಶಾಲೆಗಳಲ್ಲಿ ಮಧ್ಯಾಹ್ನದೂಟ, ಉಚಿತ ಸಮವಸ್ತ್ರ, ಪಠ್ಯ ಪುಸ್ತಕ ವಿತರಣೆ.
* 2010-11ರಲ್ಲಿ ಪ್ರಾಥಮಿಕ, ಪ್ರೌಢ ಶಿಕ್ಷಣ ವ್ಯವಸ್ಥೆಗಾಗಿ 8830 ಕೋಟಿ ರೂ. ವ್ಯಯಿಸಲಾಗುತ್ತದೆ
* ಪ್ರೌಢ ಶಾಲಾ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಉಚಿತ ಸೈಕಲ್ ವಿತರಣೆ ಯೋಜನೆ ಮುಂದುವರಿಕೆಗೆ 200 ಕೋಟಿ ರೂ.
* ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಾ ಅಭಿಯಾನದಡಿ 545 ಪ್ರೌಢಶಾಲೆಗಳ ಸರ್ವಾಂಗೀಣ ಅಭಿವೃದ್ಧಿಗೆ 700 ಕೋಟಿ, 74 ಮಾದರಿ ಪ್ರೌಢ ಶಾಲೆಗಳ ಸ್ಥಾಪನೆ
* ಸರಕಾರಿ ಶಾಲೆಗಳು, ಪದವಿಪೂರ್ವ ಕಾಲೇಜುಗಳಲ್ಲಿ ಕೊಠಡಿ, ಪೀಠೋಪಕರಣ, ಕುಡಿಯುವ ನೀರು, ಶೌಚಾಲಯಕ್ಕೆ 100 ಕೋಟಿ ರೂ. ನಿಧಿ
* ಶಿಕ್ಷಣದ ಗುಣಮಟ್ಟ ಹೆಚ್ಚಿಸಲು, ಪದವಿ, ಸ್ನಾತಕೋತ್ತರ ಅಧ್ಯಯನ ಮುಂದುವರಿಸುವ ಶಿಕ್ಷಕರಿಗೆ 2 ವರ್ಷ ತರಬೇತಿಗಾಗಿ 5 ಕೋಟಿ ವಿಶೇಷಾನುದಾನ.
* ಸುಮಾರು 250 ಪದವಿಪೂರ್ವ ಕಾಲೇಜುಗಳ ಕಟ್ಟಡಗಳಿಗಾಗಿ 80 ಕೋಟಿ

ಉನ್ನತ ಶಿಕ್ಷ
* ತುಮಕೂರು, ದಾವಣಗೆರೆ ವಿವಿ, ಬಿಜಾಪುರ ಮಹಿಳಾ ವಿವಿ ಅಭಿವೃದ್ಧಿಗೆ ತಲಾ 10 ಕೋಟಿ, ಹಂಪಿ ವಿವಿಗೆ 5 ಕೋಟಿ
* ಇಂಜಿನಿಯರಿಂಗ್ ಕಾಲೇಜು ಮೂಲ ಸೌಕರ್ಯ ಅಭಿವೃದ್ಧಿಗೆ 80 ಕೋಟಿ.
* 10 ನೂತನ ಸರಕಾರಿ ಇಂಜಿನಿಯರಿಂಗ್ ಕಾಲೇಜು ಮತ್ತು 22 ಪಾಲಿಟೆಕ್ನಿಕ್‌ಗಳ ಕಟ್ಟಡ, ಯಂತ್ರೋಪಕರಣಗಳಿಗಾಗಿ 76 ಕೋಟಿ ವಿನಿಯೋಗ
* 100 ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಿಗೆ ವಿಜ್ಞಾನ ಮತ್ತು ವಾಣಿಜ್ಯ ವಿಭಾಗ ಸೇರ್ಪಡೆಗೆ 50 ಕೋಟಿ ರೂ.
* ಸರಕಾರಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಉದ್ಯೋಗಾರ್ಹತೆ ಹೆಚ್ಚಿಸಲು, ಭಾಷಾ ಜ್ಞಾನ, ಸಂವಹನ ಚಾತುರ್ಯ ಇತ್ಯಾದಿ ತರಬೇತಿಗೆ ಹೊಸ ಯೋಜನೆಗೆ 10 ಕೋಟಿ.
* ಕೃಷ್ಣದೇವರಾಯ ಪಟ್ಟಾಭಿಷೇಕ 500ನೇ ವರ್ಷಾಚರಣೆ ಅಂಗವಾಗಿ ವಿಜಯನಗರ ವಿವಿ ಸ್ಥಾಪನೆಗೆ 10 ಕೋಟಿ
* ಧಾರವಾಡ ಕರ್ನಾಟಕ ವಿವಿಯ ಡಿಎನ್ಎ ಡಯಾಗ್ನಾಸ್ಟಿಕ್ ಸಂಸ್ಥೆಯ ಸಂಶೋಧನಾ ಚಟುವಟಿಕೆಗೆ 4 ಕೋಟಿ
* ಬೆಂಗಳೂರಲ್ಲಿ ರಾಷ್ಟ್ರೀಯ ಕಾನೂನು ವಿವಿ ಅನುದಾನ 1 ಕೋಟಿಗೆ ಏರಿಕೆ
* ಬೆಂಗಳೂರಿನಲ್ಲಿ ಸಂಸ್ಕೃತ ವಿವಿ ಸ್ಥಾಪನೆಗೆ 5 ಕೋಟಿ
* ಪಾಲಿ ಭಾಷೆ ಅಧ್ಯಯನಕ್ಕೆ ಗುಲ್ಬರ್ಗಾ ವಿವಿಯಲ್ಲಿ ವಿಶೇಷ ಪೀಠ ಸ್ಥಾಪಿಸಲು 1 ಕೋಟಿ ರೂ.

ವೈದ್ಯಕೀಯ ಶಿಕ್ಷ
* ಹುಬ್ಬಳ್ಳಿಯಲ್ಲಿ ಕ್ಯಾನ್ಸರ್ ಚಿಕಿತ್ಸೆ ಸೌಲಭ್ಯಕ್ಕೆ ಕಿದ್ವಾಯಿ ಆಸ್ಪತ್ರೆ ಶಾಖೆ ತೆರೆಯಲು 5 ಕೋಟಿ ರೂ.
* ಆಯ್ದ ವೈದ್ಯಕೀಯ ಕಾಲೇಜುಗಳ ಪ್ರವೇಶಾವಕಾಶ ವಿಸ್ತರಿಸಲು 20 ಕೋಟಿ ರೂ.
* ಬಳ್ಳಾರಿಯಲ್ಲಿ ವಿಮ್ಸ್ ಸಂಸ್ಥೆಯಲ್ಲಿ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಯನ್ನು ಖಾಸಗಿ ಸಹಭಾಗಿತ್ವದೊಡನೆ ಸ್ಥಾಪಿಸಲು 10 ಕೋಟಿ
* ಶಿವಮೊಗ್ಗದಲ್ಲಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಕಾಮಗಾರಿ ಪೂರ್ಣಗೊಳಿಸಲು 20 ಕೋಟಿ ವಿನಿಯೋಗ

ಆರೋಗ್ಯ ಸೇವ
* ಹೃದಯ ಶಸ್ತ್ರಚಿಕಿತ್ಸೆ, ಮೂತ್ರಪಿಂಡ ಕಸಿ ಅಗತ್ಯವಿರುವ ಬಡರೋಗಿಗಳಿಗೆ ನೆರವಾಗಲು ಹೃದಯ ಸಂಜೀವಿನಿ ಮತ್ತು ಕಿಡ್ನಿ ಸುರಕ್ಷಾ ಯೋಜನೆಗಳಿಗೆ 10 ಕೋಟಿ ಅನುದಾನ
* ಮಾತಾ ಅಮೃತಾನಂದಮಯಿ ಪ್ರತಿಷ್ಠಾನದಿಂದ ಉನ್ನತ ದರ್ಜೆ ಆಸ್ಪತ್ರೆಯನ್ನು ಬೆಂಗಳೂರಿನ ಕೆಂಗೇರಿಯಲ್ಲಿ ಸ್ಥಾಪಿಸಲು 15 ಎಕರೆ ಜಮೀನು ಮತ್ತು 5 ಕೋಟಿ ಅನುದಾನ
* ಬೆಂಗಳೂರು, ಮೈಸೂರು ಹಾಗೂ ಬಳ್ಳಾರಿಯಲ್ಲಿ ಸರಕಾರಿ ಆಯುರ್ವೇದ ಆಸ್ಪತ್ರೆಗಳನ್ನು ಉನ್ನತೀಕರಿಸಲು 5 ಕೋಟಿ ರೂ.
* ಬೆಂಗಳೂರಿನಲ್ಲಿ ಆಯುಷ್ ವೈದ್ಯ ವಿಜ್ಞಾನ ಸಂಸ್ಥೆ ಸ್ಥಾಪಿಸಲು ಕೇಂದ್ರದಿಂದ 10 ಕೋಟಿ ದೊರೆತಿದೆ. ರಾಜ್ಯದಿಂದಲೂ ಅಗತ್ಯ ನೆರವು.
* ಬಡತನ ರೇಖೆ ಕೆಳಗಿರುವ ಬಡವರ ಆರೋಗ್ಯ, ಚಿಕಿತ್ಸೆಗಾಗಿ ಗುಲ್ಬರ್ಗ ವಿಭಾಗದಲ್ಲಿ ಆರಂಭಗೊಂಡ 'ವಾಜಪೇಯಿ ಆರೋಗ್ಯಶ್ರೀ' ಯೋಜನೆಯನ್ನು ರಾಜ್ಯದ ಇತರೆಡೆಗೂ ವಿಸ್ತರಿಸಲು 40 ಕೋಟಿ ರೂ.
* ರಾಜ್ಯಾದ್ಯಂತ 5021 ಅರೆ ವೈದ್ಯಕೀಯ ಸಿಬ್ಬಂದಿ ನೇಮಕಕ್ಕೆ ಕ್ರಮ
* 142 ತಾಲೂಕು ಆಸ್ಪತ್ರೆಗಳ ಉನ್ನತೀಕರಣ, ಕಟ್ಟಡ ನಿರ್ಮಾಣ ಇತ್ಯಾದಿಗಳಿಗಾಗಿ 100 ಕೋಟಿ
* ಗ್ರಾಮೀಣ ಮಹಿಳೆಯರಿಗೆ ಉಚಿತ ಹೆರಿಗೆ ಸೌಲಭ್ಯ
* ಖಾಸಗಿ ಆಸ್ಪತ್ರೆಗಳಲ್ಲಿ ಹೆರಿಗೆಯಾದ ಗ್ರಾಮೀಣ ಮಹಿಳೆಯರಿಗೆ 1000 ರೂ.
* ಭಾಗ್ಯಲಕ್ಷ್ಮಿ ಯೋಜನೆಯಲ್ಲಿ ನೋಂದಾಯಿಸಿದ ಮಹಿಳೆಯರಿಗೆ ಉಚಿತ ಆರೋಗ್ಯ ತಪಾಸಣೆ, ಅಗತ್ಯ ಬಿದ್ದಲ್ಲಿ ಉಚಿತ ಚಿಕಿತ್ಸೆ
ಸಂಬಂಧಿತ ಮಾಹಿತಿ ಹುಡುಕಿ