ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಬಿಜೆಪಿ ಸರ್ಕಾರದ ಪತನ ಕಾಲ ಸನ್ನಿಹಿತ: ದೇಶಪಾಂಡೆ ಭವಿಷ್ಯ (BJP | Congress | Desh pandy | KPCC | Yeddyurappa)
Bookmark and Share Feedback Print
 
NRB
ಜನವಿರೋಧಿ ಆಡಳಿತರೂಢ ಬಿಜೆಪಿ ಸರ್ಕಾರ ಪತನವಾಗುವ ದಿನ ದೂರವಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಆರ್.ವಿ.ದೇಶಪಾಂಡೆ ಭವಿಷ್ಯ ನುಡಿದಿದ್ದಾರೆ.

ಕಾಂಗ್ರೆಸ್ ಪಕ್ಷ ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನಾ ರಾಲಿ ಉದ್ದೇಶಿಸಿ ಮಾತನಾಡಿದ ಅವರು, ವಿದ್ಯುತ್ ಸಮಸ್ಯೆ, ಕುಡಿಯುವ ನೀರಿನ ಸಮಸ್ಯೆ, ಪಡಿತರ ಚೀಟಿ ಅವ್ಯವಸ್ಥೆ ಸೇರಿದಂತೆ ಯಾವುದೇ ಸಮಸ್ಯೆಗಳನ್ನು ಬಗೆಹರಿಸದೆ ರಾಜ್ಯ ಬಿಜೆಪಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದರು.

ಭಂಡ-ಭ್ರಷ್ಟ ಬಿಜೆಪಿ ಸರ್ಕಾರ ಪತನವಾಗುವ ಕಾಲ ಸನ್ನಿಹಿತವಾಗಿದೆ ಎಂದು ಗುಡುಗಿದ ದೇಶಪಾಂಡೆ, ಕಳೆದ ಬಾರಿ ಬಜೆಟ್‌ನಲ್ಲಿ 150ಘೋಷಣೆಗಳನ್ನು ಸರ್ಕಾರ ಮಾಡಿದ್ದರೂ ಒಂದೂ ಈಡೇರಿಲ್ಲ. ಮತ್ತೆ ಈ ಬಾರಿ 200ಭರವಸೆಗಳನ್ನು ನೀಡಿದೆ. 2ರೂ.ಗೆ ಅಕ್ಕಿ ಇಲ್ಲ, ವಿದ್ಯುತ್ ಇಲ್ಲದೆ ರಾಜ್ಯವನ್ನು ಕತ್ತಲು ಮಾಡಿದೆ ಎಂದು ದೂರಿದರು.

ಕಳೆದ ವರ್ಷ ಬೆಂಗಳೂರು ಅಭಿವೃದ್ಧಿಗೆ 8ಸಾವಿರ ಕೋಟಿ ರೂ.ಮೀಸಲಿರಿಸಿದ್ದರೂ ಸಾಧನೆ ಶೂನ್ಯ. 3ಸಾವಿರ ಕೋಟಿ ರೂಪಾಯಿ ಸಾಲ ಮಾಡಿರುವುದೇ ಸರ್ಕಾರದ ಸಾಧನೆ ಎಂದು ಕಿಡಿಕಾರಿದರು.
ಸಂಬಂಧಿತ ಮಾಹಿತಿ ಹುಡುಕಿ