ನ್ಯಾಯಾಂಗ ವ್ಯವಸ್ಥೆಯಲ್ಲಿ ದಲಿತರಿಗೆ ಮೀಸಲಾತಿ ಅಗತ್ಯ ಎಂದು ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಅಭಿಪ್ರಾಯವ್ಯಕ್ತಪಡಿಸಿದ್ದಾರೆ. ನ್ಯಾಯಾಧೀಶರ ನೇಮಕಾತಿಯಲ್ಲಿ ಈ ಸಮುದಾಯದವರಿಗೆ ಮೀಸಲಾತಿ ನೀಡಲು ತಮ್ಮ ಸಹಮತ ಇದೆ ಎಂದು ಅವರು ಹೇಳಿದರು.
ಭಾರತ ವಿಶ್ವವಿದ್ಯಾಲಯ ರಾಷ್ಟ್ರೀಯ ಕಾನೂನು ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಭಾರತೀಯ ಸಂವಿಧಾನಕ್ಕೆ 60ವರ್ಷ, ಸಾಮಾಜಿಕ ನ್ಯಾಯ ನಡೆದು ಬಂದ ದಾರಿ, ನಿನ್ನೆ-ಇಂದು-ನಾಳೆ ಕುರಿತ ವಿಚಾರಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ಅಸ್ಪ್ರಶ್ಯತೆ ನಿವಾರಣೆಗಾಗಿ ಇರುವ ಕಾನೂನು ನೀತಿ, ನಿಯಮಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ದಲಿತರನ್ನು ಊರಾಚೆ ಇರುವ ದೇವಸ್ಥಾನಗಳಿಗೆ ಪ್ರವೇಶ ನಿರಾಕರಿಸುವ ಪ್ರವೃತ್ತಿ ಇಂದೂ ಮುಂದುವರಿಯುತ್ತಿರುವುದು ಖಂಡನಾರ್ಹ, ಇಂತಹ ತಾರತಮ್ಯ ಹೋಗಲಾಡಿಸುವ ಅಗತ್ಯವಿದೆ ಎಂದರು.
ದಲಿತರು, ಹಿಂದುಳಿದ ವರ್ಗದವರಿಗೆ ಆಗುತ್ತಿರುವ ಅನ್ಯಾಯ ಮತ್ತು ತಾರತಮ್ಯಗಳನ್ನು ಪ್ರತಿಭಟಿಸಲು ಸಂಘಟನೆಗಳು ಒಂದುಗೂಡದಿರುವುದು ವಿಪರ್ಯಾಸ ಎಂದು ಈ ಸಂದರ್ಭದಲ್ಲಿ ಹೇಳಿದರು.