ರಾಜಕಾರಣಿಗಳ ಬಗ್ಗೆ ಜನರಲ್ಲಿ ವಿಶ್ವಾಸವಿಲ್ಲ: ಸುರೇಶ್ ಕುಮಾರ್
ಬೆಂಗಳೂರು, ಸೋಮವಾರ, 8 ಮಾರ್ಚ್ 2010( 15:54 IST )
ಇತ್ತೀಚೆಗೆ ಜನರಲ್ಲಿ ರಾಜಕಾರಣಿ ಬಗ್ಗೆ ಜನರಲ್ಲಿ ಒಳ್ಳೆಯ ಭಾವನೆಯೇ ಇಲ್ಲದಂತಾಗಿದೆ ಎಂದು ಕಾನೂನು ಸಚಿವ ಎಸ್.ಸುರೇಶ್ ಕುಮಾರ್ ವಿಷಾದ ವ್ಯಕ್ತಪಡಿಸಿದ್ದಾರೆ.
ಪೊಲೀಸರು, ನ್ಯಾಯಾಂಗ ವ್ಯವಸ್ಥೆ ಸೇರಿದಂತೆ ರಾಜಕಾರಣಿಗಳ ಬಗ್ಗೆ ಜನರಲ್ಲಿ ಉತ್ತಮ ಭಾವನೆಯೇ ಇಲ್ಲ ಎಂದು ಭಾನುವಾರ ರಾಜ್ಯ ಅಭಿಯೋಜನಾಧಿಕಾರಿಗಳ ಸಂಘ ಆಯೋಜಿಸಿದ್ದ 9ನೇ ರಾಜ್ಯ ಮಟ್ಟದ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಹೇಳಿದರು.
ರಾಜಕಾರಣಿಗಳ ಭ್ರಷ್ಟಾಚಾರ, ಸುಳ್ಳು ಭರವಸೆಗಳಿಂದಾಗಿ ಜನರಲ್ಲಿಯೇ ರಾಜಕಾರಣಿಗಳ ಬಗ್ಗೆ ಒಳ್ಳೆಯ ಭಾವನೆಯೇ ಇಲ್ಲದಂತಾಗಿದೆ. ಆ ನಿಟ್ಟಿನಲ್ಲಿ ನಾವೆಲ್ಲರೂ ಸ್ವತಃ ಆತ್ಮವಿಮರ್ಶೆ ಮಾಡಿಕೊಳ್ಳಬೇಕಾಗಿದೆ ಎಂದರು.
ಅದೇ ರೀತಿ ಪೊಲೀಸ್ ಮತ್ತು ನ್ಯಾಯಾಂಗದಲ್ಲಿಯೂ ಜನಸಾಮಾನ್ಯರಿಗೆ ಅನ್ಯಾಯವಾಗುತ್ತಿದೆ. ಸಾಕ್ಷ್ಯಾಧಾರಗಳ ಕೊರತೆ, ಮಾಹಿತಿಯ ಕೊರತೆಯಿಂದಾಗಿ ಸತ್ಯಕ್ಕೆ ಜಯ ಸಿಗುವ ಬದಲು ಅಸತ್ಯಕ್ಕೆ ಗೆಲುವು ದೊರೆಯುತ್ತಿರುವುದು ಜನರಲ್ಲಿ ವಿಶ್ವಾಸ ಕುಂದುವಂತೆ ಮಾಡಿದೆ ಎಂದು ವಿಶ್ಲೇಷಿಸಿದರು.