ದೆಹಲಿಯಲ್ಲಿ ನೈಸ್ ವಿರುದ್ಧ ಪ್ರತಿಭಟನೆ ನಡೆಸಲು ರೈತರು ತೆರಳುತ್ತಿದ್ದ ರೈಲಿಗೆ ನಾಗ್ಪುರ ಬಳಿ ಕಲ್ಲು ಹೊಡೆದಿರುವ ಘಟನೆ ಖಂಡಿಸಿ ಆಕ್ರೋಶಗೊಂಡಿರುವ ರೈತರು ನೈಸ್ ರಸ್ತೆಯಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.
ಬೆಂಗಳೂರು ದಕ್ಷಿಣ ತಾಲ್ಲೂಕು ರೈತ ಹಿತರಕ್ಷಣಾ ವೇದಿಕೆ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆ ಸಂದರ್ಭದಲ್ಲಿ ರಸ್ತೆಗಿಳಿದ ರೈತರು ವಾಹನಗಳನ್ನು ತಡೆದು ಕಲ್ಲು ಎಸೆದು ಆಕ್ರೋಶ ವ್ಯಕ್ತಪಡಿಸಿದರು.
ಮುಂದಿನ ದಿನಗಳಲ್ಲಿ ರೈತರ ಮೇಲೆ ಈ ರೀತಿ ಹಲ್ಲೆ ನಡೆಸಿದಲ್ಲಿ ನೈಸ್ ರಸ್ತೆಯನ್ನು ಅಗೆದು, ಟೋಲ್ ಸಂಗ್ರಹ ಕೇಂದ್ರಗಳನ್ನು ಒಡೆಯುವುದಾಗಿ ರೈತ ಮುಖಂಡರು ಎಚ್ಚರಿಕೆ ನೀಡಿದ್ದಾರೆ.
ಈ ಘಟನೆಯ ಹಿಂದೆ ನೈಸ್ ಮುಖ್ಯಸ್ಥ ಖೇಣಿ ಅವರ ಕೈವಾಡವಿದ್ದು, ಅವರ ಬೆಂಬಲಿಗರೇ ಗೂಂಡಾಗಿರಿ ಪ್ರದರ್ಶಿಸಿ ರೈಲಿನ ಮೇಲೆ ಕಲ್ಲು ಎಸೆದು ಕೆಲ ಮುಖಂಡರನ್ನು ಗಾಯಗೊಳಿಸಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದ್ದಾರೆ.