ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಕನ್ನಡ ಗೊತ್ತಿಲ್ಲದವರಿಗೂ ಬಿಬಿಎಂಪಿ ಟಿಕೆಟ್; ಪ್ರತಿಭಟನೆ (BBMP election | Kannada | Bangalore | Karnataka)
Bookmark and Share Feedback Print
 
ಕನ್ನಡ ಭಾಷೆ ತಿಳಿದಿರುವ ವ್ಯಕ್ತಿಗಳಿಗೆ ಮಾತ್ರ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಯ ಟಿಕೆಟ್ ನೀಡುವಂತೆ ರಾಜಕೀಯ ಪಕ್ಷಗಳಿಗೆ ಮನವಿ ಮಾಡಿಕೊಂಡಿದ್ದರೂ ಅನರ್ಹರನ್ನೇ ನಿಲ್ಲಿಸುವ ಮೂಲಕ ದ್ರೋಹ ಬಗೆದಿವೆ. ಮತದಾರರು ಕನ್ನಡ ಬಲ್ಲವರನ್ನು ಮಾತ್ರ ಆರಿಸಬೇಕು ಎಂದು ಒತ್ತಾಯಿಸಿ ಕನ್ನಡ ಅನುಷ್ಠಾನ ಮಂಡಳಿ ಸದಸ್ಯರು ಶನಿವಾರ ಪ್ರತಿಭಟನೆ ನಡೆಸಿದ್ದಾರೆ.

ಎಂ.ಜಿ. ರಸ್ತೆಯ ಮಹಾತ್ಮಾಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸಿದ ಕನ್ನಡ ಅನುಷ್ಠಾನ ಮಂಡಳಿಯ ಸದಸ್ಯರು, ನಗರಪಾಲಿಕೆಯ ಆಡಳಿತದಲ್ಲಿ ಸ್ಥಳೀಯರಿಗೆ ಸೂಕ್ತ ಸ್ಥಾನಮಾನ ಸಿಗಬೇಕಾದರೆ ಕನ್ನಡ ಅಭ್ಯರ್ಥಿಗಳು ಆಯ್ಕೆಯಾಗಬೇಕು. ಇದನ್ನು ಮತದಾರರು ಗಮನದಲ್ಲಿಟ್ಟುಕೊಳ್ಳಬೇಕು. ಆ ಮೂಲಕ ಬೆಂಗಳೂರನ್ನು ಕನ್ನಡೀಕರಣಗೊಳಿಸಲು ಸಹಕರಿಸಬೇಕು ಎಂದು ಜನತೆಗೆ ಮನವಿ ಮಾಡಿದರು.

ಕನ್ನಡ ತಿಳಿದಿರುವವರಿಗೆ ಮಾತ್ರ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಿ ಎಂದು ಎಲ್ಲಾ ಪಕ್ಷಗಳಿಗೆ ನಾವು ಮನವಿ ಮಾಡಿಕೊಂಡಿದ್ದೆವು. ಆದರೆ ಹಣ ಮತ್ತು ಒತ್ತಡಕ್ಕೆ ಮಣಿದಿರುವ ರಾಜಕೀಯ ಪಕ್ಷಗಳು ಕನ್ನಡದ ಗಂಧಗಾಳಿ ಇಲ್ಲದವರನ್ನೂ ಚುನಾವಣೆಗೆ ನಿಲ್ಲಿಸಿವೆ. ಇಂತವರಿಂದ ಕನ್ನಡ ನಾಡು-ನುಡಿಗೆ ಗೌರವವನ್ನು ನಿರೀಕ್ಷಿಸಲಾಗದು ಎಂದು ಕನ್ನಡ ಅನುಷ್ಠಾನ ಮಂಡಳಿಯ ಅಧ್ಯಕ್ಷ ಆರ್.ಎ. ಪ್ರಸಾದ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪ್ರತಿಭಟನೆಯಲ್ಲಿ ಮಂಡಳಿಯ ಅಧ್ಯಕ್ಷರು, ಸಂಚಾಲಕ ಜೆ.ಕೆ. ಬಾಬು, ಮಹಿಳಾ ಘಟಕದ ಸಂಚಾಲಕಿ ನಳಿನಾ ಸೇರಿದಂತೆ ಹಲವು ಮಂದಿ ಭಾಗವಹಿಸಿದ್ದರು.
ಸಂಬಂಧಿತ ಮಾಹಿತಿ ಹುಡುಕಿ