ಮುಸ್ಲಿಮರು ವಾಸಿಸಲು 57ರಾಷ್ಟ್ರಗಳಿವೆ, ಕ್ರಿಶ್ಚಿಯನ್ನರಿಗೆ 113 ದೇಶಗಳಿದ್ದರೆ, ಹಿಂದೂಗಳಿಗೆ ಜಗತ್ತಿನಲ್ಲಿರುವುದು ಭಾರತ ಮಾತ್ರ. ಆದರೆ ಇಲ್ಲಿ ಹಿಂದೂಗಳು ಶಾಂತಿ,ಸುಖ, ನೆಮ್ಮದಿಯಿಂದ ಇರಲು ಹಲವು ಅಡ್ಡಿ ಆತಂಕವಿದೆ. ಇದನ್ನು ವಿವಾರಿಸಲು ರಾಜಕಾರಣಿಗಳು,ಪೊಲೀಸರು ಅಡ್ಡಗಾಲು ಹಾಕುತ್ತಿರುವುದು ಖಂಡನೇಯ ಎಂದು ಶ್ರೀರಾಮಸೇನೆಯ ವರಿಷ್ಠ ಪ್ರಮೋದ್ ಮುತಾಲಿಕ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಹಿಂದೂ ಜನಜಾಗೃತಿ ಸಮಿತಿ ನಗರದಲ್ಲಿ ಭಾನುವಾರ ಆಯೋಜಿಸಿದ್ದ ಹಿಂದೂ ಧರ್ಮ ಜಾಗೃತಿ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಹಿಂದೂ ಧರ್ಮ ಜಾಗೃತಿ ಸಭೆ ನಡೆಸಲು ರಾಜಕಾರಣಿಗಳು,ಪೊಲೀಸರು ಅಡ್ಡಿ ಉಂಟು ಮಾಡುತ್ತಿರುವುದು ಸರಿಯಲ್ಲ ಎಂದು ಈ ಸಂದರ್ಭದಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.
ಅಲ್ಲದೇ ಹಿಂದೂ ಜಾಗೃತಿ ಮೂಡಿಸಲು ಹೊರಟ ಮುತಾಲಿಕ್ ಮೇಲೆ ಈಗಾಗಲೇ 70ಪ್ರಕರಣ ದಾಖಲಾಗಿವೆ. ಇಂತಹ ನೂರು ಕೇಸುಗಳನ್ನು ಬೇಕಾದರೆ ಹಾಕಿ, ಆದರೆ ನಮ್ಮ ಹಿಂದೂಪರ ಹೋರಾಟ ನಿಲ್ಲುವುದಿಲ್ಲ ಎಂದು ಸವಾಲು ಹಾಕಿದರು.