ನಗರದ ಓಕುಳಿಪುರಂ ವಾರ್ಡ್‌ನಿಂದ ಲಿಂಗಪರಿವರ್ತನೆಗೊಂಡ ವೀಣಾ( ಈ ಮೊದಲು 20ವರ್ಷಗಳ ಹಿಂದೆ ವೆಂಕಟೇಶ್ ಆಗಿದ್ದರು)ನಾಮಪತ್ರ ಸಲ್ಲಿಸುವ ಮೂಲಕ ಬಿಬಿಎಂಪಿ ಚುನಾವಣಾ ಅಖಾಡದಲ್ಲಿ ಪ್ರಥಮ ಲಿಂಗಪರಿವರ್ತಿತರೊಬ್ಬರು ಸ್ಪರ್ಧೆಗೆ ಇಳಿದಂತಾಗಿದೆ.
ವೆಂಕಟೇಶ್ ಮೂಲತಃ ಓಕಳಿಪುರದ ನಿವಾಸಿ, ಕಳೆದ 20ವರ್ಷಗಳ ಹಿಂದೆ ಲಿಂಗಪರಿವರ್ತನೆಗೊಂಡು ವೀಣಾ ಆಗಿ ಬದಲಾಗಿದ್ದಳು. ಇದೀಗ ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಪ್ರಜಾರಾಜಕೀಯ ಪಕ್ಷದಿಂದ ಅಭ್ಯರ್ಥಿಯಾಗಿ ಅಖಾಡಕ್ಕಿಳಿದಿದ್ದಾಳೆ.
ಲಿಂಗಪರಿವರ್ತನೆಯನ್ನು ಕಾನೂನು ಬದ್ಧಗೊಳಿಸಬೇಕು, ಪ್ರಸ್ತುತ ರಾಜಕೀಯದಲ್ಲಿ ಭ್ರಷ್ಟಾಚಾರವೇ ಪ್ರಧಾನವಾಗಿದೆ. ಹಾಗಾಗಿ ಲೈಂಗಿಕ ಅಲ್ಪಸಂಖ್ಯಾತರಿಗೆ ಸಿಗಬೇಕಾದ ಸೌಲಭ್ಯಗಳ ಪರ ಧ್ವನಿ ಎತ್ತುವ ನಿಟ್ಟಿನಲ್ಲಿ ವೀಣಾ ಚುನಾವಣಾ ಅಖಾಡಕ್ಕಿಳಿದಿದ್ದು, ಅವರು ಗೆಲುವು ಸಾಧಿಸುವುದು ನಿಶ್ಚಿತ ಎಂಬುದು ಲೈಂಗಿಕ ಅಲ್ಪಸಂಖ್ಯಾತರ ವಿಶ್ವಾಸದ ನುಡಿಗಳಾಗಿವೆ.