ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಬಂಧಿತ ನಿತ್ಯಾನಂದಸ್ವಾಮಿ ಬೆಂಗಳೂರಿಗೆ: ಸಾರ್ವಜನಿಕರಿಂದ ಹಲ್ಲೆ (Nityanda swamy | sex scandal | Karnataka | Bangalore | Tamil nadu)
Bookmark and Share Feedback Print
 
PTI
ಚಿತ್ರನಟಿ ರಂಜಿತಾಳದೊಂದಿಗೆ ರಾಸಲೀಲೆ ನಡೆಸಿ ನಾಪತ್ತೆಯಾಗಿದ್ದ ಪ್ರಕರಣದಲ್ಲಿ ಹಿಮಾಚಲ ಪ್ರದೇಶದಲ್ಲಿ ಬಂಧಿತರಾಗಿರುವ ಕಾಮಿ ಸ್ವಾಮಿ ನಿತ್ಯಾನಂದ ಹಾಗೂ ಶಿಷ್ಯ ನಿತ್ಯ ಭಕ್ತಾನಂದ ಅಲಿಯಾಸ್ ಬಿ.ಎಲ್.ರೆಡ್ಡಿಯನ್ನು ರಾಜ್ಯ ಸಿಐಡಿ ಡಿವೈಎಸ್ಪಿಗಳಾದ ಹುಸೇನ್, ಚಂದ್ರಶೇಖರ ನೇತೃತ್ವದಲ್ಲಿ ಗುರುವಾರ ರಾತ್ರಿ ಬೆಂಗಳೂರಿಗೆ ಕರೆತಂದಿದ್ದಾರೆ.

ಹಿಮಾಚಲ ಪ್ರದೇಶದ ಸೋಲನ್ ಜಿಲ್ಲೆಯ ವಿಕ್ರಮಪುರದಲ್ಲಿ ನಿನ್ನೆ ಬಿಡದಿ ಧ್ಯಾನಪೀಠದ ಸ್ವಾಮಿ ನಿತ್ಯಾನಂದನನ್ನು ಸೆರೆಹಿಡಿಯಲಾಗಿತ್ತು. ಅಲ್ಲಿಂದ ಶಿಮ್ಲಾ-ಚಂಡೀಗಢ-ಮುಂಬೈ ಮಾರ್ಗವಾಗಿ ವಿಮಾನದಲ್ಲಿ ಇಂದು ರಾತ್ರಿ 7ಗಂಟೆ ಸುಮಾರಿಗೆ ಬೆಂಗಳೂರಿಗೆ ಕರೆತರಲಾಯಿತು.

ನಿತ್ಯಾನಂದ ಸ್ವಾಮಿ ಮೇಲೆ ಸಾರ್ವಜನಿಕರಿಂದ ಹಲ್ಲೆ: ಬಿಐಎಎಲ್‌ಗೆ ಆಗಮಿಸಿದ ನಂತರ ನಿತ್ಯಾನಂದ ಸ್ವಾಮಿಯನ್ನು ಪೊಲೀಸರು ವಾಹನದತ್ತ ಕರೆದೊಯ್ಯುತ್ತಿದ್ದ ಸಂದರ್ಭದಲ್ಲಿ ಉದ್ರಿಕ್ತ ಸಾರ್ವಜನಿಕರು ಹಲ್ಲೆ ನಡೆಸಿದ ಘಟನೆ ಕೂಡ ನಡೆಯಿತು. ಪೊಲೀಸರ ಬಿಗಿ ಭದ್ರತೆ ನಡುವೆಯೂ ಸಾರ್ವಜನಿಕರ ನೂಕುನುಗ್ಗಲು ತಡೆಯಲು ಪೊಲೀಸರು ಹರಸಾಹಸ ಪಡುತ್ತಿದ್ದಂತೆಯೇ ಸ್ವಾಮಿ ವಿರುದ್ಧ ಘೋಷಣೆ ಕೂಗಿದ ಸಾರ್ವಜನಿಕರು, ಆತನ ಮೇಲೆ ಹಲ್ಲೆ ನಡೆಸಿದರು.

ವೈದ್ಯಕೀಯ ತಪಾಸಣೆ ನಂತರ ಮ್ಯಾಜಿಸ್ಟ್ರೇಟ್ ಮುಂದೆ ಹಾಜರ್ ಸಾಧ್ಯತೆ: ರಾಮನಗರದಲ್ಲಿ ಮೊದಲು ವೈದ್ಯಕೀಯ ತಪಾಸಣೆ ನಡೆಸಿದ ನಂತರ ಕಾಮಿಸ್ವಾಮಿಯನ್ನು ಸಿಓಡಿ ಎಸ್‌ಪಿ ಯೋಗಪ್ಪ ಅವರ ತಂಡ ಜಿಲ್ಲಾ ಚೀಫ್ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ಪುಷ್ಪಲತಾ ಅವರ ಮುಂದೆ ಇಂದು ರಾತ್ರಿ ಅಥವಾ ನಾಳೆ ಹಾಜರು ಪಡಿಸುವ ಸಾಧ್ಯತೆ ಇದೆ.

ಬಿಐಎಎಲ್‌ನಲ್ಲಿ ಬಿಗಿ ಬಂದೋಬಸ್ತ್: ಕಾಮಿಸ್ವಾಮಿ ನಿತ್ಯಾನಂದನನ್ನು ಕರೆತರುವ ಸಂದರ್ಭದಲ್ಲಿ ಕನ್ನಡಪರ ಸೇರಿದಂತೆ ಕೆಲವು ಸಂಘಟನೆಗಳು ಪ್ರತಿಭಟನೆ ಅಥವಾ ದಾಳಿ ನಡೆಸುವ ಸಾಧ್ಯತೆ ಇದೆ ಎಂಬ ಮುನ್ನೆಚ್ಚರಿಕೆಯ ಹಿನ್ನೆಲೆಯಲ್ಲಿ ಬಿಐಎಎಲ್‌ನಲ್ಲಿ ಭಾರೀ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ತಾಜಾ ಸುದ್ದಿಗಳು ತಕ್ಷಣ ಲಭ್ಯವಾಗಲು ಟ್ವಿಟ್ಟರ್‌ನಲ್ಲಿ ನಮ್ಮನ್ನು ಫಾಲೋ ಮಾಡಿ

ನಿತ್ಯಾನಂದನ ಸೆರೆಗೆ ಜಾಲಬೀಸಿದ್ದ ಸಿಐಡಿ ಪೊಲೀಸರು ಕಳೆದ ಏಪ್ರಿಲ್ 17ರಂದು ಹಿಮಾಚಲ ಪ್ರದೇಶದಿಂದ ಬಂದ ಮೊಬೈಲ್ ಕರೆ ಆಧರಿಸಿ ಸಂಶಯದ ಮೇಲೆ ದಾಳಿ ನಡೆಸಿ ಬಂಧಿಸಲಾಗಿತ್ತು.

ನಿತ್ಯಾನಂದ ತಾಂತ್ರಿಕ ಸೆಕ್ಸ್ ನಡೆಸುತ್ತಿದ್ದ!:ನಿತ್ಯಾನಂದ ಧ್ಯಾನಪೀಠದ ಆಶ್ರಮದಲ್ಲಿ ವಿದೇಶಿ ಭಕ್ತೆಯರು, ಸಂಸಾರದ ಜಂಜಾಟದಿಂದ ಬೇಸತ್ತು ಮಠಕ್ಕೆ ಸೇರಿದ್ದ ಯುವ ಸಾದ್ವಿಯರು ಹಾಗೂ ಅಪ್ರಾಪ್ತ ವಯಸ್ಕ ಬಾಲಕರೊಂದಿಗೆ ತಾಂತ್ರಿಕ ಸೆಕ್ಸ್ ನಡೆಸುತ್ತಿದ್ದ ಮಾಹಿತಿ ಸಿಐಡಿ ಪೊಲೀಸರಿಗೆ ಲಭ್ಯವಾಗಿರುವುದಾಗಿ ತಿಳಿಸಿದ್ದಾರೆ.

ತಾಂತ್ರಿಕ ಸೆಕ್ಸ್ ನಡೆಸಲು ಭಕ್ತರು, ಸಾದ್ವಿಯರು ವಿದೇಶಿಯರ ಜೊತೆ ಸ್ವಾಮಿ ಮಾಡಿಕೊಂಡ ರಹಸ್ಯ ಒಪ್ಪಂದದ ಪ್ರತಿಗಳನ್ನು ಸಿಐಡಿ ಪೊಲೀಸರು ವಶಪಡಿಸಿಕೊಂಡಿದ್ದು, ಅದನ್ನು ನ್ಯಾಯಾಲಯಕ್ಕೆ ಸಲ್ಲಿಸುವುದಾಗಿ ಸಿಐಡಿ ಮೂಲಗಳು ವಿವರಿಸಿವೆ. ಅಲ್ಲದೇ ಬಿಡದಿ ನಿತ್ಯಾನಂದ ಆಶ್ರಮಕ್ಕೆ ದಾಳಿ ನಡೆಸಿದ ವೇಳೆ ದೊರೆತ ಅಪಾರ ಪ್ರಮಾಣದ ದಾಖಲೆ, ಕಂಪ್ಯೂಟರ್ ಹಾರ್ಡ್ ಡಿಸ್ಕ್‌ಗಳನ್ನು ಕೂಡ ವಶಪಡಿಸಿಕೊಳ್ಳಲಾಗಿದೆ.

ತಾಂತ್ರಿಕ ಸೆಕ್ಸ್‌ನಲ್ಲಿ ಕನ್ನಡ-ತಮಿಳು ನಟಿಯರು?:ಏತನ್ಮಧ್ಯೆ ನಿತ್ಯಾನಂದನ ತಾಂತ್ರಿಕ ಸೆಕ್ಸ್‌ಗೆ ತಮಿಳು ಹಾಗೂ ಕನ್ನಡದ ಕೆಲ ನಟಿಯರು ಬಲಿಯಾಗಿದ್ದಾರೆ ಎಂದು ಸಿಐಡಿ ಪೊಲೀಸರು ಶಂಕಿಸಿದ್ದಾರೆ.

ಆಧ್ಯಾತ್ಮಕ್ಕೆ ಸಂಬಂಧಿಸಿದಂತೆ ನಿತ್ಯಾನಂದ ಮಾಡುತ್ತಿದ್ದ ಭಾಷಣ ಭಕ್ತರನ್ನು ಮಂತ್ರಮುಗ್ಧಗೊಳಿಸುತ್ತಿದ್ದು, ಇದರಿಂದಾಗಿ ಆಶ್ರಮಕ್ಕೆ ಪದೇ, ಪದೇ ಭೇಟಿ ನೀಡುವ ಕೆಲ ಚಿತ್ರನಟಿಯರಿಗೆ ವಿಶೇಷ ಯೋಗದ ಅಭ್ಯಾಸ ಮಾಡಿಸುತ್ತೇನೆ ಇದರಿಂದ ದೈವೀ ಅನುಗ್ರಹವಾಗುತ್ತದೆ ಎಂದು ಪುಸಲಾಯಿಸಿ ವಿಷಯ ಬಹಿರಂಗಗೊಳ್ಳದಂತೆ ನಿತ್ಯಾನಂದ ರಹಸ್ಯ ಒಪ್ಪಂದ ಮಾಡಿಕೊಂಡು ತಾಂತ್ರಿಕ ಸೆಕ್ಸ್ ನಡೆಸುತ್ತಿದ್ದ ಎನ್ನಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ