ಪಾಠ ಬೋಧಿಸಬೇಕಾಗಿದ್ದ ಪ್ರಾಂಶುಪಾಲನೊಬ್ಬ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಪರಿಣಾಮ ಪೋಷಕರು ಸಾರ್ವಜನಿಕವಾಗಿಯೇ ಹಿಗ್ಗಾಮುಗ್ಗಾ ಥಳಿಸಿದ ಘಟನೆ ಶುಕ್ರವಾರ ನಡೆದಿದೆ.
ಇಲ್ಲಿನ ದೇವರಹಳ್ಳಿಯ ಕೇಂದ್ರ ಸರ್ಕಾರದ ನವೋದಯ ಶಾಲೆಯ ಪ್ರಾಂಶುಪಾಲ ಪ್ರಭಾಕರ್ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿರುವ ಬಗ್ಗೆ ಮಕ್ಕಳು ಪೋಷಕರಲ್ಲಿ ದೂರಿಕೊಂಡಿದ್ದರು.ಇದರಿಂದ ಕೆರಳಿದ ಪೋಷಕರು ಸಭೆ ಸೇರಿ ಮಾತುಕತೆ ನಡೆಸಿದ ನಂತರ. ಪ್ರಾಂಶುಪಾಲ ಪ್ರಭಾಕರ್‌ಗೆ ಸಾರ್ವಜನಿಕವಾಗಿಯೇ ಗೂಸಾ ನೀಡಿದರು. ಕೆಲವರು ಪೊರಕೆ ಸೇವೆಯನ್ನು ಮಾಡಿದ ಘಟನೆ ನಡೆಯಿತು.
ಶಾಲೆಯ ಪಿಯುಸಿ, ಎಸ್ಎಸ್ಎಲ್‌ಸಿ ವಿದ್ಯಾರ್ಥಿನಿಯರನ್ನು ರಾತ್ರಿ 11 ಗಂಟೆಗೆ ಮನೆಗೆ ಕರೆದುಕೊಂಡು ಹೋಗುವುದು, ರಾತ್ರಿ ಮನೆಗೆ ಬಾ ಎಂದು ಕರೆದು, ಪ್ರಾಂಶುಪಾಲರು ಲೈಂಗಿಕ ಕಿರುಕುಳ ನೀಡುತ್ತಿದ್ದರು ಎಂದು ನೊಂದು ವಿದ್ಯಾರ್ಥಿನಿಯರು ದೂರಿಕೊಂಡಿದ್ದಾರೆ. ಈ ಬಗ್ಗೆ ದೂರನ್ನು ಕೂಡ ನೀಡಿರುವುದಾಗಿ ವಿದ್ಯಾರ್ಥಿನಿಯರು ತಿಳಿಸಿದ್ದಾರೆ.