ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಎಸ್.ಕೆ.ನಟರಾಜ್ ಬಿಬಿಎಂಪಿ ನೂತನ ಮೇಯರ್ (BBMP | BJP | Congress | JDS | Sk Nataraj)
Bookmark and Share Feedback Print
 
PR
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಗೆ ನಿರೀಕ್ಷೆಯಂತೆ ಎಸ್.ಕೆ.ನಟರಾಜ್ ಮೇಯರ್ ಆಗಿ, ಉಪಮೇಯರ್ ಆಗಿ ದಯಾನಂದ್ ಅವರು ಶುಕ್ರವಾರ ಅವಿರೋಧವಾಗಿ ಆಯ್ಕೆಯಾಗಿ ಪ್ರಮಾಣವಚನ ಸ್ವೀಕರಿಸುವ ಮೂಲಕ ಪ್ರಥಮ ಬಾರಿಗೆ ಬಿಬಿಎಂಪಿಯಲ್ಲಿ ಬಿಜೆಪಿ ಆಡಳಿತಕ್ಕೆ ಚಾಲನೆ ದೊರೆತಂತಾಗಿದೆ.

ಸತತ ಮೂರು ಬಾರಿ ಗೆಲುವು ಸಾಧಿಸಿದ್ದ ಬಿಜೆಪಿಯ ಪ್ರಭಾವಿ ಮುಖಂಡ ಸಾರಕ್ಕಿ ವಾರ್ಡ್‌ನ ಎಸ್.ಕೆ.ನಟರಾಜ್ ಅವರನ್ನು ಮೇಯರನ್ನಾಗಿ ಹಾಗೂ ಕಿರಿಯ ವಯಸ್ಸಿನ ಬೆಳ್ಳಿಗಾನ ಹಳ್ಳಿಯ ದಯಾನಂದ್ ಉಪಮೇಯರನ್ನಾಗಿ ಬಿಜೆಪಿ ಸಭೆಯಲ್ಲಿ ಅಧಿಕೃತವಾಗಿ ಆಯ್ಕೆ ಮಾಡಲಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ, ಸಂಸದ ಅನಂತ್ ಕುಮಾರ್, ಸಚಿವ ಆರ್.ಅಶೋಕ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮೇಯರ್, ಉಪಮೇಯರ್ ಆಯ್ಕೆ ಮಾಡಲಾಯಿತು.

ತಾಜಾ ಸುದ್ದಿಗಳು ತಕ್ಷಣ ಲಭ್ಯವಾಗಲು ಟ್ವಿಟ್ಟರ್‌ನಲ್ಲಿ ನಮ್ಮನ್ನು ಫಾಲೋ ಮಾಡಿ

ಕಾರ್ಪೋರೇಟರ್‌ಗಳಿಂದ ಪ್ರಮಾಣವಚನ ಸ್ವೀಕಾರ: ಇಂದು ಬೆಳಿಗ್ಗೆ ಬಿಬಿಎಂಪಿಯ ಕೆಂಪೇಗೌಡ ಸಭಾಂಗಣದಲ್ಲಿ ಬಿಬಿಎಂಪಿಗೆ ನೂತನವಾಗಿ ಆಯ್ಕೆಯಾದ 198ಕಾರ್ಪೊರೇಟರ್‌ಗಳಿಗೆ ಪ್ರಾದೇಶಿಕ ಚುನಾವಣಾಧಿಕಾರಿ ಧನಂಜಯ್ ಅವರು ಪ್ರಮಾಣವಚನ ಬೋಧಿಸಿದರು.

ತಲಾ ಐದು ಮಂದಿಯಂತೆ ದೇವರು, ಕ್ಷೇತ್ರ, ತಂದೆ-ತಾಯಿಯ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಇಡೀ ಸಭಾಂಗಣ ಕೆಸರಿಮಯವಾಗಿದ್ದು, ಈ ಸಂದರ್ಭದಲ್ಲಿ ಪಕ್ಷದ ವರಿಷ್ಠರು ಹಾಜರಿದ್ದರು.

ಕೆಂಪೇಗೌಡ ವೇಷಧಾರಿಯಾಗಿ ಪ್ರಮಾಣವಚನ: 198ಮಂದಿ ಕಾರ್ಪೊರೇಟರ್‌ಗಳ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಕೆಂಪೇಗೌಡ ವಾರ್ಡ್‌ನಿಂದ ಗೆಲುವು ಸಾಧಿಸಿದ್ದ ಬಿಜೆಪಿ ಅಭ್ಯರ್ಥಿ ಅಶ್ವತ್ಥ್ ಅವರು ಕೆಂಪೇಗೌಡ ವೇಷಧಾರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದು ಎಲ್ಲರ ಗಮನ ಸೆಳೆಯಿತು.

ಉದ್ಯಾನನಗರಿ ಮೂಲ ಸೌಕರ್ಯಕ್ಕೆ ಒತ್ತು-ನಟರಾಜ್: ಬೆಂಗಳೂರು ನಗರದ ಮೂಲ ಸೌಕರ್ಯ, ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ನೂತನವಾಗಿ ಆಯ್ಕೆಯಾದ ಮೇಯರ್ ಎಸ್.ಕೆ.ನಟರಾಜ್ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದರು.

ಬೆಂಗಳೂರನ್ನು ಪ್ಲ್ಯಾಸ್ಟಿಕ್ ರಹಿತನಗರವನ್ನಾಗಿ ಮಾಡಲು ಯೋಜನೆ ಹೊಂದಿದ್ದು, ಸುಮಾರು ಐದು ಸಾವಿರ ಗಿಡಗಳನ್ನು ನೆಡುವ ಚಿಂತನೆ ಕೂಡ ಹೊಂದಲಾಗಿದೆ ಎಂದು ಈ ಸಂದರ್ಭದಲ್ಲಿ ಹೇಳಿದರು.
ಸಂಬಂಧಿತ ಮಾಹಿತಿ ಹುಡುಕಿ