ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ನಿತ್ಯಾನಂದ ಕಾಮಲೀಲೆಯಲ್ಲಿ ಕನ್ನಡ ನಟಿಯರೂ ಭಾಗಿ! (Swami Nityananda | Sex Scandal | Ranjita | Bangalore)
Bookmark and Share Feedback Print
 
ಕನ್ನಡದ ಹಲವು ಸಿನಿಮಾ ನಟಿಯರೊಂದಿಗೂ ಬಿಡದಿಯಲ್ಲಿ ಆಶ್ರಮ ಹೊಂದಿರುವ ಪ್ರಸಕ್ತ ಪೊಲೀಸರ ವಶದಲ್ಲಿರುವ ಪರಮಹಂಸ ನಿತ್ಯಾನಂದ ಸ್ವಾಮಿ ರಾಸಲೀಲೆ ನಡೆಸಿದ ದಾಖಲೆಗಳು ಲಭ್ಯವಾಗಿವೆ ಎಂದು ಸಿಐಡಿ ತನಿಖಾ ತಂಡ ಹೇಳಿಕೊಂಡಿದೆ.

ತಾಜಾ ಸುದ್ದಿಗಳು ತಕ್ಷಣ ಲಭ್ಯವಾಗಲು ಟ್ವಿಟ್ಟರ್‌ನಲ್ಲಿ 'ವೆಬ್‌ದುನಿಯಾ'ವನ್ನು ಫಾಲೋ ಮಾಡಲು ಇಲ್ಲಿ ಕ್ಲಿಕ್ ಮಾಡಿ

ಈ ಹಿಂದಿನ ಮಾಹಿತಿಯ ಪ್ರಕಾರ ತಮಿಳು ನಟಿಯರಾದ ರಂಜಿತಾ ಮತ್ತು ಯುವರಾಣಿ ಎಂಬಿಬ್ಬರ ಜತೆ ಸ್ವಾಮಿ ರಾಸಲೀಲೆ ನಡೆಸಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಸಿಐಡಿ ತನಿಖಾ ತಂಡದ ಪ್ರಕಾರ ತಮಿಳಿನ ಇನ್ನೂ ಹಲವು ನಟಿಯರೊಂದಿಗೆ ನಿತ್ಯಾನಂದ ಲೈಂಗಿಕ ಚಟುವಟಿಕೆ ನಡೆಸಿದ್ದಾರೆ. ಹಲವು ಕನ್ನಡ ನಟಿಯರೂ ಇದರಲ್ಲಿ ಪಾಲ್ಗೊಂಡಿದ್ದಾರೆ.
PTI

ನಿತ್ಯಾನಂದ ಸ್ವಾಮಿ ಯಾರ ಜತೆಗೆಲ್ಲ ರಾಸಲೀಲೆ ನಡೆಸಿದ್ದಾನೆ, ಆ ನಟಿಯರು ಯಾರು ಸೇರಿದಂತೆ ಅವರ ಮೊಬೈಲ್ ಸಂಖ್ಯೆಗಳು ಮುಂತಾದ ಎಲ್ಲಾ ಮಾಹಿತಿಗಳು ಇರುವ ಹಾರ್ಡ್ ಡಿಸ್ಕ್‌ಗಳು ನಮಗೆ ಸಿಕ್ಕಿವೆ. ಆದರೆ ಆ ನಟಿಯರು ಯಾರೆಂದು ನಾವು ಬಹಿರಂಗಪಡಿಸುವುದಿಲ್ಲ. ಖಂಡಿತಾ ಅವರೆಲ್ಲರನ್ನೂ ವಿಚಾರಣೆಗೆ ಒಳಪಡಿಸುತ್ತೇವೆ ಎಂದು ಸಿಐಡಿ ಅಧಿಕಾರಿಯೊಬ್ಬರು 'ಪ್ರಜಾವಾಣಿ' ಪತ್ರಿಕೆಗೆ ತಿಳಿಸಿದ್ದಾರೆ.

ರಹಸ್ಯ ಒಪ್ಪಂದಗಳನ್ನು ಮಾಡಿಕೊಳ್ಳುತ್ತಿದ್ದ ನಿತ್ಯಾನಂದ ಸ್ವಾಮಿ ನಟಿಯರು, ಮಹಿಳಾ ಸಾಧ್ವಿಗಳು, ಅನಿವಾಸಿ ಭಾರತೀಯ ಯುವತಿಯರ ಜತೆ ಸೆಕ್ಸ್ ನಡೆಸುತ್ತಿದ್ದರು. ಇವೆಲ್ಲವನ್ನೂ ವೀಡಿಯೋ ಕ್ಯಾಮರಾಗಳಲ್ಲಿ ಚಿತ್ರೀಕರಿಸಿ ಸಿಡಿ ಮಾಡಲಾಗಿದ್ದು, ಆಶ್ರಮಗಳ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ಪತ್ತೆಯಾಗಿವೆ ಎಂದು ತನಿಖಾ ತಂಡ ಹೇಳಿಕೊಂಡಿದೆ.

ಆಶ್ರಮಕ್ಕೆ ಬರುತ್ತಿದ್ದ ನಟಿಯರು ನಿತ್ಯಾನಂದ ಸ್ವಾಮಿ ಮತ್ತು ಅವರ ಅನುಯಾಯಿಗಳ ಜತೆ ಮಾತುಕತೆ ನಡೆಸಿರುವ ಪುರಾವೆಗಳು ಕೂಡ ನಮಗೆ ಸಿಕ್ಕಿದೆ. ಆ ರೀತಿ ನಡೆದುಕೊಂಡ ತಮಿಳು ಹಾಗೂ ಕನ್ನಡ ನಟಿಯರ ಹೆಸರು, ಮೊಬೈಲ್ ಸಂಖ್ಯೆ ಮತ್ತು ಇತರ ಮಾಹಿತಿಗಳನ್ನು ಕಲೆ ಹಾಕಲಾಗಿದೆ. ಇದನ್ನು ಆಧರಿಸಿ ಮುಂದಿನ ದಿನಗಳಲ್ಲಿ ಅವರ ವಿಚಾರಣೆ ನಡೆಸಲಾಗುತ್ತದೆ ಎಂದು ಬಹಿರಂಗಪಡಿಸಿದ್ದಾರೆ.

ಆದರೂ ಒಟ್ಟಾರೆ ಲಭ್ಯ ಮಾಹಿತಿಗಳ ಪ್ರಕಾರ ಸ್ವಾಮಿ ಜತೆ ಲೈಂಗಿಕ ಕ್ರಿಯೆಯಲ್ಲಿ ಪಾಲ್ಗೊಂಡವರಲ್ಲಿ ಹೆಚ್ಚಿನವರು ತಮಿಳು ನಟಿಯರು. ಎನ್ಆರ್ಐ ಯುವತಿಯರು ಕೂಡ ಇದರಲ್ಲಿ ಹಿಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ನಿತ್ಯಾನಂದ ಸ್ವಾಮಿ ಕಾಮಕಾಂಡ ಬಯಲಾದ ಬಳಿಕ ಕನ್ನಡ ಹಾಗೂ ತಮಿಳಿನ ಕೆಲವು ನಟಿಯರು, 'ತಾವು ಸ್ವಾಮಿಯ ಭಕ್ತರಾಗಿದ್ದೆವು. ಆದರೆ ಇದೆಲ್ಲ ನಮಗೆ ಗೊತ್ತಿರಲಿಲ್ಲ' ಎಂದು ಹೇಳಿರುವುದನ್ನು ಸ್ಮರಿಸಬಹುದಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ