ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ತನಿಖೆ ತಪ್ಪಿಸಿಕೊಳ್ಳಲು ನಿತ್ಯಾನಂದ ನಿದ್ದೆ, ಧ್ಯಾನದ ನಾಟಕ! (Nithyananda | Sex scandal | Bidadi | Tamil nadu | Karnataka)
Bookmark and Share Feedback Print
 
PTI
ಚಿತ್ರನಟಿ ರಂಜಿತಾಳೊಂದಿಗೆ ರಾಸಲೀಲೆ ನಡೆಸಿ ಇದೀಗ ನಾಲ್ಕು ದಿನಗಳ ಕಾಲ ಸಿಐಡಿ ಪೊಲೀಸರ ವಶದಲ್ಲಿರುವ ಕಾಮಿ ನಿತ್ಯಾನಂದ ಸ್ವಾಮಿ ನಿದ್ದೆ, ಧ್ಯಾನದ ನೆಪ ಒಡ್ಡಿ ತನಿಖೆಗೆ ಅಸಹಕಾರ ನೀಡುತ್ತಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಶುಕ್ರವಾರ ಸಿಐಡಿ ಕೊಠಡಿಯೊಂದರಲ್ಲಿ ನಿದ್ದೆಗೆ ಜಾರಿದ್ದ ಸ್ವಾಮಿ ಜಪ್ಪಯ್ಯ ಅಂದ್ರೂ ಬೆಳಿಗ್ಗೆ 11 ರಿಂದ ಸಂಜೆ 5ಗಂಟೆ ತನಕ ಸತಾಯಿಸಿದ್ದ. ಆ ನಿಟ್ಟಿನಲ್ಲಿ ತನಿಖೆ ನಡೆಸಲು ಸಿಐಡಿ ಅಧಿಕಾರಿಗಳು ಏನೇ ಕರಸತ್ತು ನಡೆಸಿದರೂ ಸಹ ಈ ಅಸಾಮಿ ನಿದ್ದೆಗೆ ಶರಣಾಗುತ್ತಿರುವುದು ದೊಡ್ಡ ತಲೆನೋವಾಗಿ ಪರಿಣಮಿಸಿದೆ ಎಂಬ ಅಳಲು ಅಧಿಕಾರಿಗಳದ್ದು! ಆದರೂ ಪಟ್ಟು ಬಿಡದ ಅಧಿಕಾರಿಗಳು ಸ್ವಾಮಿಯ ವಿಚಾರಣೆ ನಡೆಸಿ ಕೆಲವೊಂದು ಮಾಹಿತಿಯನ್ನು ಪಡೆದಿದ್ದಾರೆ.

ತಾಜಾ ಸುದ್ದಿಗಳು ತಕ್ಷಣ ಲಭ್ಯವಾಗಲು ಟ್ವಿಟ್ಟರ್‌ನಲ್ಲಿ ನಮ್ಮನ್ನು ಫಾಲೋ ಮಾಡಿ

ತನಿಖೆ ಮಾಡಲು ಮುಂದಾದ ತಕ್ಷಣ ತನಗೆ ಧ್ಯಾನ ಮಾಡಲು ಅವಕಾಶ ಕೊಡಿ ಎಂದು ಸ್ವಾಮಿ ರಾಗ ಎಳೆಯುತ್ತಿದ್ದಾನಂತೆ. ಒಟ್ಟಾರೆ ಕಾಮಿ ಸ್ವಾಮಿಯ ವರ್ತನೆ ಅಧಿಕಾರಿಗಳು ಸೇರಿದಂತೆ ಸಾರ್ವಜನಿಕ ಆಕ್ರೋಶಕ್ಕೂ ಕಾರಣವಾಗಿದೆ. ಏತನ್ಮಧ್ಯೆ ಸ್ವಾಮಿಯ ಶಿಷ್ಯ ನಿತ್ಯಾ ಭಕ್ತಾನಂದನನ್ನೂ ಕೂಡ ತನಿಖೆಗೆ ಒಳಪಡಿಸಿದ್ದು, ಆತ ತನಿಖೆಗೆ ಸಹಕರಿಸುತ್ತಿದ್ದಾನೆ ಎನ್ನಲಾಗಿದೆ.

ಸ್ವಾಮಿಗಾಗಿ ವಿಶೇಷ ಕಾಳಜಿ: ತನಿಖೆಗೆ ಅಸಹಕಾರ ನೀಡುತ್ತಿರುವ ಸ್ವಾಮಿ ಎಲ್ಲಿಯಾದ್ರೂ ಜೀವಕ್ಕೆ ಅಪಾಯ ಮಾಡಿಕೊಳ್ಳುವ ಸಾಧ್ಯತೆ ಇದೆ ಎಂದು ಆತಂಕಗೊಂಡಿರುವ ಸಿಐಡಿ ಅಧಿಕಾರಿಗಳು, ನಿತ್ಯಾನಂದ ಸ್ವಾಮಿಯನ್ನು ಕೂಡಿಟ್ಟಿರುವ ಕೊಠಡಿಯಲ್ಲಿ ಜೀವಕ್ಕೆ ಅಪಾಯವಾಗುವಂತಹ ಯಾವುದೇ ವಸ್ತು ಇರದಂತೆ ಎಚ್ಚರ ವಹಿಸಲಾಗಿದೆಯಂತೆ. ಅಲ್ಲದೇ ಸ್ವಾಮಿಯ ಬಗ್ಗೆ ವಿಶೇಷ ಎಚ್ಚರಿಕೆಯನ್ನೂ ವಹಿಸಲಾಗಿದೆಯಂತೆ.

ತನಿಖೆಯಿಂದ ತಪ್ಪಿಸಿಕೊಳ್ಳುವ ನಾಟಕವೇ?: ಕಾಮಿ ನಿತ್ಯಾನಂದ ರಾಸಲೀಲೆಗೆ ಸಂಬಂಧಿಸಿದಂತೆ ಸಿಐಡಿ ಪೊಲೀಸರು ಬಿಡದಿ ಧ್ಯಾನಪೀಠದ ಆಶ್ರಮದಿಂದ ಹಲವು ಮಹತ್ವದ ದಾಖಲೆ, ಹಾರ್ಡ್ ಡಿಸ್ಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಿದಾಗ ಎಲ್ಲಾ ವಿವರಣೆ ನೀಡಬೇಕಾಗುತ್ತದೆ ಎಂಬುದು ಸ್ವಾಮಿಗೆ ತಿಳಿದ ವಿಚಾರವಾದ್ದರಿಂದ, ಸಿಐಡಿ ಅಧಿಕಾರಿಗಳು ತನಿಖೆಗೆ ಮುಂದಾದ ಕೂಡಲೇ ನಿದ್ದೆ, ಧ್ಯಾನದ ನಾಟಕವಾಡುವ ಮೂಲಕ ತಪ್ಪಿಸಿಕೊಳ್ಳುವ ಯತ್ನ ನಡೆಸುತ್ತಿದ್ದಾನೆಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಜಾಮೀನು ಅರ್ಜಿ ವಿಚಾರಣೆ ಮುಂದಕ್ಕೆ: ಏತನ್ಮಧ್ಯೆ ರಾಮನಗರ ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ನಿತ್ಯಾನಂದ ಸ್ವಾಮಿಗೆ ಜಾಮೀನು ನೀಡುವಂತೆ ಕೋರಿ ಶುಕ್ರವಾರ ಮತ್ತೊಮ್ಮೆ ಸ್ವಾಮಿ ಪರ ವಕೀಲ ಚಂದ್ರಶೇಖರ್ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯ ವಿಚಾರಣೆ ನ್ಯಾಯಾಲಯ ಏಪ್ರಿಲ್ 29ಕ್ಕೆ ಮುಂದೂಡಿದೆ. ಹಾಗಾಗಿ ತನಗೆ ಜಾಮೀನು ಸಿಗುವ ತನಕ ಏನಾದರೊಂದು ನೆಪ ಹೇಳಿ ತನಿಖೆಯಿಂದ ತಪ್ಪಿಸಿಕೊಳ್ಳಬೇಕೆಂಬ ಹುನ್ನಾರ ಕಾಮಿ ಸ್ವಾಮಿಯದ್ದು!

ನಿತ್ಯಾನಂದ ತಾಂತ್ರಿಕ ಸೆಕ್ಸ್ ನಡೆಸುತ್ತಿದ್ದ!: ನಿತ್ಯಾನಂದ ಧ್ಯಾನಪೀಠದ ಆಶ್ರಮದಲ್ಲಿ ವಿದೇಶಿ ಭಕ್ತೆಯರು, ಸಂಸಾರದ ಜಂಜಾಟದಿಂದ ಬೇಸತ್ತು ಮಠಕ್ಕೆ ಸೇರಿದ್ದ ಯುವ ಸಾದ್ವಿಯರು ಹಾಗೂ ಅಪ್ರಾಪ್ತ ವಯಸ್ಕ ಬಾಲಕರೊಂದಿಗೆ ತಾಂತ್ರಿಕ ಸೆಕ್ಸ್ ನಡೆಸುತ್ತಿದ್ದ ಮಾಹಿತಿ ಸಿಐಡಿ ಪೊಲೀಸರಿಗೆ ಲಭ್ಯವಾಗಿತ್ತು.

ತಾಂತ್ರಿಕ ಸೆಕ್ಸ್ ನಡೆಸಲು ಭಕ್ತರು, ಸಾದ್ವಿಯರು ವಿದೇಶಿಯರ ಜೊತೆ ಸ್ವಾಮಿ ಮಾಡಿಕೊಂಡ ರಹಸ್ಯ ಒಪ್ಪಂದದ ಪ್ರತಿಗಳನ್ನು ಸಿಐಡಿ ಪೊಲೀಸರು ವಶಪಡಿಸಿಕೊಂಡಿದ್ದರು. ಅಲ್ಲದೇ ಬಿಡದಿ ನಿತ್ಯಾನಂದ ಆಶ್ರಮಕ್ಕೆ ದಾಳಿ ನಡೆಸಿದ ವೇಳೆ ದೊರೆತ ಅಪಾರ ಪ್ರಮಾಣದ ದಾಖಲೆ, ಕಂಪ್ಯೂಟರ್ ಹಾರ್ಡ್ ಡಿಸ್ಕ್‌ಗಳನ್ನು ಕೂಡ ವಶಪಡಿಸಿಕೊಂಡಿದ್ದರು.

ನಿತ್ಯಾನಂದ ಕಾಮಲೀಲೆಯಲ್ಲಿ ಕನ್ನಡ ನಟಿಯರೂ ಭಾಗಿ!
ಸಂಬಂಧಿತ ಮಾಹಿತಿ ಹುಡುಕಿ