ಚುನಾವಣೆಯಲ್ಲಿ ಸೋಲಿಗೆ ತಪ್ಪು ಕಾರ್ಯಕರ್ತರದ್ದಲ್ಲ,ನಾಯಕರದ್ದು ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಚುನಾವಣೆಗಳಲ್ಲಿ ಕಾಂಗ್ರೆಸ್ ಸೋಲಿಗೆ ನಾಯಕರು ಮಾಡಿರುವ ತಪ್ಪುಗಳೇ ಕಾರಣವೇ ಹೊರತು, ಕಾರ್ಯಕರ್ತರು ಹೊಣೆಯಲ್ಲ. ನಮ್ಮ ತಪ್ಪುಗಳಿಂದಾಗಿ ಪಕ್ಷ ಚುನಾವಣೆಯಲ್ಲಿ ಸೋತಿದೆ. ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡಿದ್ದಾರೆ. ಇವತ್ತಿಗೂ ಅವರು ಒಂದಾಗಿದ್ದಾರೆ. ಪಕ್ಷದ ತಳಹದಿಯೂ ಭದ್ರವಾಗಿದೆ ಎಂದು ಅವರು ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ದೀರ್ಘ ಇತಿಹಾಸ ಇರುವ ತತ್ವ, ಸಿದ್ದಾಂತಕ್ಕೆ ಬದ್ಧವಾದ ಪಕ್ಷ. ಚುನಾವಣೆಯಲ್ಲಿ ಟಿಕೆಟ್ ಸಿಗಲಿಲ್ಲ ಎಂದು ಪಕ್ಷ ಬಿಡುವುದು, ಮತ್ತೆ ವಾಪಸಾಗುವುದು ಸರಿಯಲ್ಲ ಎಂದು ಹೇಳುವುದಿಲ್ಲ. ಬಿಜೆಪಿಯಂತೆ ನಾವು ಕೋಮುವಾದಿಗಳಲ್ಲ ಎಂದರು.