ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯಿದೆ ಜಾರಿಗೊಂಡಲ್ಲಿ ಮುಂದೆ ಮನುಷ್ಯರು ಮನುಷ್ಯರನ್ನು ತಿನ್ನುವ ಕಾಲ ಸೃಷ್ಟಿಯಾಗಲಿದೆ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಆತಂಕ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ನಡೆದ ಖಾಸಗಿ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಾವು ತಿನ್ನುವ ಆಹಾರ ಸೇವೆನೆ ನಮಗೇ ಬಿಟ್ಟಿದ್ದು. ಇದನ್ನು ಪ್ರಶ್ನಿಸುವ ಹಕ್ಕು ಯಾರಿಗೂ ಇಲ್ಲ ಎಂದು ತಿಳಿಸಿದ್ದಾರೆ.
ಮುಖ್ಯವಾಗಿ ಮನುಷ್ಯರು, ಆಹಾರ, ಪ್ರಾಣಿಗಳು ಮತ್ತು ಮರಗಳಲ್ಲಿ ಶ್ರೇಷ್ಠತೆ ಹಾಗೂ ಅನಿಷ್ಠತೆ ಅಳೆಯಲಾಗುತ್ತಿದೆ. ಆದರೆ ಇಂದು ಆಹಾರ ಪದ್ಧತಿಯನ್ನು ಧಾರ್ಮಿಕಗೊಳಿಸಿ, ರಾಜಕೀಯ ಬಣ್ಣ ಹಚ್ಚಲಾಗುತ್ತಿದೆ ಎಂದು ಆರೋಪಿಸಿದರು.
ಅಲ್ಲದೆ, ಗೋಹತ್ಯೆ ನಿಷೇಧ ಮುಂದಿನ ದಿನಗಳಲ್ಲಿ ಭಾರಿ ಅನಾಹುತ ಸೃಷ್ಟಿಸಲಿದೆ. ಇದರಿಂದ ಮಾಂಸಕ್ಕಾಗಿ ಮನುಷ್ಯರು ಮನುಷ್ಯರನ್ನೇ ತಿನ್ನುವ ಕಾಲ ಸೃಷ್ಟಿಯಾಗುವುದರಲ್ಲಿ ಸಂಶಯವಿಲ್ಲ ಎಂದು ಅವರು ತಿಳಿಸಿದ್ದಾರೆ.