ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಕ್ಷುದ್ರ ದೇವತೆಗೆ ಪೂಜೆ; ರೆಡ್ಡಿ ಬ್ರದರ್ಸ್ ಜತೆ ಮುನಿಯಪ್ಪ ಸಾಥ್! (Muniyappa | Janardana Reddy | Andhra Pradesh | Yeddyurappa)
ಕ್ಷುದ್ರ ದೇವತೆಗೆ ಪೂಜೆ; ರೆಡ್ಡಿ ಬ್ರದರ್ಸ್ ಜತೆ ಮುನಿಯಪ್ಪ ಸಾಥ್!
ಹೈದರಾಬಾದ್, ಸೋಮವಾರ, 26 ಏಪ್ರಿಲ್ 2010( 16:00 IST )
ಪ್ರವಾಸೋದ್ಯಮ ಸಚಿವ ಜನಾರ್ದನ ರೆಡ್ಡಿ, ಕಂದಾಯ ಸಚಿವ ಕರುಣಾಕರ ರೆಡ್ಡಿ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಆಂಧ್ರಪ್ರದೇಶದಲ್ಲಿ ತಮ್ಮ ಇಷ್ಟಾರ್ಥ ನೆರವೇರಿಕೆ, ತೊಡಕು ನಿವಾರಣೆಗೆ ಕ್ಷುದ್ರ ದೇವತೆಗಳ ಪೂಜೆ ನಡೆಸಿದ್ದು, ಇದಕ್ಕೆ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಕೆ.ಎಚ್.ಮುನಿಯಪ್ಪ ಕೂಡ ಸಾಥ್ ನೀಡಿರುವ ಅಂಶ ಬಯಲಾಗಿದೆ.
ಇಲ್ಲಿನ ಪ್ರಕಾಶಂ ಜಿಲ್ಲೆಯ ಚೇವೂರಿನಲ್ಲಿರುವ ರಾಮದುರ್ಗ ಸ್ವಾಮಿಯ ಆಶ್ರಮಕ್ಕೆ ಭೇಟಿ ನೀಡಿರುವ ಈ ಘಟಾನುಘಟಿಗಳು ಸದ್ದಿಲ್ಲದೆ ನಡೆಸಿರುವ ರಹಸ್ಯ ಹೋಮ-ಹವನದ ಹಿಂದಿನ ಒಳಮರ್ಮವೇನು ಎಂಬುದು ಮಾತ್ರ ತಿಳಿದುಬಂದಿಲ್ಲ.
ರೆಡ್ಡಿ ಬ್ರದರ್ಸ್‌ಗಳಾದ ಕರುಣಾಕರ ರೆಡ್ಡಿ, ಜನಾರ್ದನ ರೆಡ್ಡಿ ಹಾಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭಾನುವಾರ ರಾತ್ರಿ 10-30 ರಿಂದ 12-30ರವರೆಗೆ ರಾಮದೂತ ಸ್ವಾಮಿಯ ನೇತೃತ್ವದಲ್ಲಿ ಕ್ಷುದ್ರ ದೇವತೆಗಳ ಪೂಜೆಯನ್ನು ನೆರವೇರಿಸಿರುವುದಾಗಿ ಹೇಳಲಾಗುತ್ತಿದೆ. ಆದರೆ ಅವೆಲ್ಲಕ್ಕಿಂತ ಹೆಚ್ಚಿನ ಕುತೂಹಲಕ್ಕೆ ಎಡೆಮಾಡಿಕೊಟ್ಟಿರುವುದು ಮಾತ್ರ ಕಾಂಗ್ರೆಸ್‌ನ ಕೆ.ಎಚ್.ಮುನಿಯಪ್ಪನವರೂ ಸಾಥ್ ನೀಡಿರುವುದು!
ಮುಖ್ಯಮಂತ್ರಿಗಳು, ಸಚಿವರು ಭೇಟಿ ನೀಡುವ ವಿಷಯ ನಗರದ ಪೊಲೀಸರು ಗೊತ್ತಿರಲಿಲ್ಲವಂತೆ, ಅವರೆಲ್ಲ ದಿಢೀರನೆ ಆಗಮಿಸಿದ ನಂತರವೇ ಪೊಲೀಸರು ರಾಮದುರ್ಗ ಸ್ವಾಮಿ ಆಶ್ರಮಕ್ಕೆ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು. ಆದರೂ ಗುಪ್ತ್, ಗುಪ್ತ್ ಆಗಿ ನಡೆಯುತ್ತಿದ್ದ ಪೂಜೆ ಮಾಧ್ಯಮದವರಿಗೂ ತಿಳಿದು ವಿಷಯ ಬಹಿರಂಗಗೊಳ್ಳುವಂತಾಗಿದೆ.
ಇವೆಲ್ಲದರ ನಡುವೆ ಮುನಿಯಪ್ಪ, ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ರೆಡ್ಡಿ ಸಹೋದರರು ಯಾವ ಪೂಜೆ ಮಾಡಿದ್ರು, ಯಾಕಾಗಿ ಮಾಡಿದ್ರು, ಯಾವ ದುಷ್ಟ ಶಕ್ತಿ ನಿವಾರಣೆಗಾಗಿ ಕ್ಷುದ್ರ ಶಕ್ತಿಗಳಿಗೆ ಪೂಜೆ ಸಲ್ಲಿಸಿದ್ದಾರೆಂಬ ವಿವರ ಚಿದಂಬರ ರಹಸ್ಯವಾಗಿಯೇ ಉಳಿದಿದ್ದರೆ, ಕಾಂಗ್ರೆಸ್‌ನ ಮುನಿಯಪ್ಪ ಕೂಡ ಸಾಥ್ ನೀಡಿದ್ದು ಯಕ್ಷಪ್ರಶ್ನೆಯಾಗಿದೆ.