ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಹುಬ್ಬಳ್ಳಿ: ಗರ್ಭಿಣಿಯನ್ನಾಗಿಸಿ ಕೈಕೊಟ್ಟ ವಂಚಕ ಪ್ರೇಮಿ (Wedding | Hubballi | Court | Police | Lover's)
Bookmark and Share Feedback Print
 
ಮದುವೆಯಾಗುತ್ತೇನೆ ಎಂದು ನಾಟಕವಾಡಿ ಯುವತಿ ಗರ್ಭಿಣಿಯಾದ ನಂತರ ಇದೀಗ ಮದುವೆಯಾಗಲು ನಿರಾಕರಿಸುತ್ತಿರುವ ವಂಚಕ ಪ್ರೇಮಿಯ ವಿರುದ್ಧ ಕೋರ್ಟ್ ಮೆಟ್ಟಿಲೇರಲು ಸಾಧನಾ ಸಂಸ್ಥೆಯೊಂದು ನಿರ್ಧರಿಸಿದೆ.

ಘಟನೆ ವಿವರ: ನವನಗರದ ವೈದ್ಯರ ಮನೆಯೊಂದರಲ್ಲಿ ದಿಲ್‌ಶಾದ್ ಎಂಬಾಕೆ ಮನೆಗೆಲಸಕ್ಕಿದ್ದಳು. ಈ ಸಂದರ್ಭದಲ್ಲಿ ವೈದ್ಯರ ಕಾರು ಚಾಲಕನಾಗಿದ್ದ ಮೆಹಬೂಬ್ ಕೋಲಕ್ ಎಂಬಾತ ಆಕೆಯೊಂದಿಗೆ ಚಕ್ಕಂದವಾಡಿ ಮದುವೆಯಾಗುವುದಾಗಿ ಮಾತು ಕೊಟ್ಟಿದ್ದ.

ತಾಜಾ ಸುದ್ದಿಗಳು ತಕ್ಷಣ ಲಭ್ಯವಾಗಲು ಟ್ವಿಟ್ಟರ್‌ನಲ್ಲಿ ನಮ್ಮನ್ನು ಫಾಲೋ ಮಾಡಿ

ಏತನ್ಮಧ್ಯೆ, ಯುವತಿ ಎರಡು ಬಾರಿ ಗರ್ಭಿಣಿಯಾಗಿದ್ದು,ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದು ಗರ್ಭಪಾತ ಕೂಡ ಮಾಡಿಸಿದ್ದ. ಮೂರನೇ ಬಾರಿ ಗರ್ಭಿಣಿಯಾದ ಕೂಡಲೇ ಯುವತಿ ಮದುವೆಯಾಗುವಂತೆ ಒತ್ತಾಯಿಸಿದ್ದಾಳೆ. ಆದರೆ ಖದೀಮ ಮೆಹಬೂಬ್ ತನಗೂ ಮದುವೆಯಾಗಿದೆ ನಿನ್ನ ಮದುವೆಯಾಗಲು ಸಾಧ್ಯವಿಲ್ಲ ಎಂದು ನಿರಾಕರಿಸಿದ್ದ. ಒಟ್ಟಾರೆ ತುಂಬು ಗರ್ಭಿಣಿಯಾಗಿರುವ ದಿಲ್‌ಶಾದ್ ಅತಂತ್ರದಲ್ಲಿ ಸಿಲುಕಿದ್ದಾಳೆ. ಆಕೆಯ ನೆರವಿಗೆ ಸಾಧನಾ ಸಂಸ್ಥೆ ಮುಂದೆ ಬಂದಿದ್ದು, ಕೋರ್ಟ್ ಮೆಟ್ಟಿಲೇರಲು ನಿರ್ಧರಿಸಿರುವುದಾಗಿ ತಿಳಿಸಿದೆ.

ನನಗೆ ಎಲ್ಲಾ ಗೊತ್ತು-ಮೆಹಬೂಬ್: ಪ್ರೀತಿಯ ನಾಟಕವಾಡಿ, ಮದುವೆಯಾಗುವುದಾಗಿ ಮಾತುಕೊಟ್ಟ ಮೆಹಬೂಬ್ ಉಲ್ಟಾ ಹೊಡೆದಿದ್ದು, ತಾನು ಗರ್ಭಿಣಿಯಾಗಿದ್ದ ಆಕೆಗೆ ಸಹಾಯ ಮಾಡಿದ್ದೇನೆ ವಿನಃ, ಮದುವೆಯಾಗುತ್ತೇನೆ ಎಂದು ಹೇಳಿಲ್ಲ, ನೀವು ಏನು ಮಾಡ್ತಿರೋ ನಾನು ನೋಡ್ತೇನೆ. ನನಗೆ ಪೊಲೀಸ್, ಜಡ್ಜ್ ಸೇರಿದಂತೆ ಎಲ್ಲರ ಪರಿಚಯವೂ ಇದೆ ಎಂದು ಉಡಾಫೆಯ ಉತ್ತರ ಕೊಟ್ಟಿದ್ದಾನೆ.
ಸಂಬಂಧಿತ ಮಾಹಿತಿ ಹುಡುಕಿ