ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ವೈದ್ಯನ ನಿರ್ಲಕ್ಷ್ಯ: ರಸ್ತೆಯಲ್ಲೇ ಗಂಡು ಮಗು ಹೆತ್ತ ಮಹಿಳೆ! (Bidar | Women | DHO | Govt Hospital | Doctor)
Bookmark and Share Feedback Print
 
ಹಕ್ಕಿಪಿಕ್ಕಿ ಜನಾಂಗಕ್ಕೆ ಸೇರಿದ್ದ ಮಹಿಳೆಯೊಬ್ಬಳಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಲು ನಿರ್ಲಕ್ಷ್ಯ ವಹಿಸಿದ ಪರಿಣಾಮ, ಮಹಿಳೆ ರಸ್ತೆ ಮಧ್ಯದಲ್ಲಿಯೇ ಗಂಡು ಮಗುವಿಗೆ ಜನನ ನೀಡಿದ ಘಟನೆ ಮಂಗಳವಾರ ಔರಾದ್‌ನಲ್ಲಿ ನಡೆದಿದೆ.

ಹಕ್ಕಿಪಿಕ್ಕಿ ಜನಾಂಗದ ರಾಧಾ ಬಾಯ್ ಎಂಬಾಕೆಗೆ ಔರಾದ್‌ನ ಸರ್ಕಾರಿ ಆಸ್ಪತ್ರೆ ವೈದ್ಯರು ಹೆರಿಗೆ ಮಾಡಿಸಲು ನಿರಾಕರಿಸಿ, ನೀವು ಖಾಸಗಿ ಆಸ್ಪತ್ರೆಗೆ ಹೋಗಿ ಎಂದು ಸೂಚಿಸಿದ್ದ. ಹೆರಿಗೆ ನೋವಿನಿಂದ ಒದ್ದಾಡುತ್ತಿದ್ದ ಆಕೆ ಕೊನೆಗೆ ರಸ್ತೆ ಮಧ್ಯೆದಲ್ಲಿಯೇ ಸ್ಥಳೀಯ ಮಹಿಳೆಯರು ಸುಸೂತ್ರವಾಗಿ ಹೆರಿಗೆ ನೆರವೇರಿಸಿದರು.

ರಸ್ತೆ ಮಧ್ಯೆ ಹೆರಿಗೆ ನೋವಿನಿಂದ ಒದ್ದಾಡುತ್ತಿದ್ದ ರಾಧಾ ಬಾಯ್‌ಯನ್ನು ಕಂಡ ಸ್ಥಳೀಯ ಮಹಿಳೆಯರು ರಸ್ತೆಯ ಮಧ್ಯೆದಲ್ಲಿಯೇ ಸುತ್ತ ಸೀರೆ ಕಟ್ಟಿ ಹೆರಿಗೆ ಮಾಡಿಸಿದ್ದರು, ನಂತರ ಅದೇ ಸರ್ಕಾರಿ ಆಸ್ಪತ್ರೆಯಲ್ಲಿ ಬಾಣಂತಿಗೆ ಚಿಕಿತ್ಸೆ ನೀಡಲಾಯಿತು.

ವೈದ್ಯನ ವಿರುದ್ಧ ಸಾರ್ವಜನಿಕ ಆಕ್ರೋಶ: ಹೆರಿಗೆ ನೋವಿನಿಂದ ಒದ್ದಾಡುತ್ತಿದ್ದ ಮಹಿಳೆಗೆ ಹೆರಿಗೆ ಮಾಡಿಸಲು ನಿರ್ಲಕ್ಷ್ಯ ತೋರಿದ ಸರ್ಕಾರಿ ವೈದ್ಯನ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಂತೂ ರಾಧಾ ಬಾಯ್ ಸುಸೂತ್ರವಾಗಿ ಹೆರಿಗೆಯಾದ ನಂತರ ಚಿಕಿತ್ಸೆ ನೀಡಲು ವೈದ್ಯ ಮುಂದಾಗಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.

ಅವರೇನೂ ತಪ್ಪು ಮಾಡಿಲ್ಲ-ಡಿಎಚ್ಒ: ಹೆರಿಗೆ ಮಾಡಿಸಲು ನಿರ್ಲಕ್ಷ್ಯ ತೋರಿದ ವೈದ್ಯ ಮೋಹನ್ ಜಾದವ್ ವಿರುದ್ಧ ಏನು ಕ್ರಮ ಕೈಗೊಳ್ಳುತ್ತೀರಿ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮದನ್ ಅವರನ್ನು ಮಾಧ್ಯಮದವರು ಪ್ರಶ್ನಿಸಿದಾಗ, ಇಲ್ಲ, ಇಲ್ಲ, ಹೆರಿಗಾಗಿ ಬಂದಾಕೆ ಬಗ್ಗೆ ಅವರು ನನಗೆ ವಿವರ ತಿಳಿಸಿದ್ದು,ಖಾಸಗಿ ಆಸ್ಪತ್ರೆಗೆ ತೆರಳಲು ಸೂಚಿಸಿರುವುದಾಗಿ ಹೇಳಿದ್ದರು. ಹಾಗಾಗಿ ಅವರು ಆಡಿರುವ ಮಾತಿನಲ್ಲೂ ಯಾವುದೇ ತಪ್ಪು ಕಂಡು ಬಂದಿಲ್ಲ. ಆದರೂ ವಿಚಾರಣೆ ನಡೆಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ