ಚಿಕ್ಕಬಳ್ಳಾಪುರ, ಬುಧವಾರ, 28 ಏಪ್ರಿಲ್ 2010( 15:36 IST )
ಕರ್ನಾಟಕವನ್ನು ನಕ್ಸಲ್ ಮುಕ್ತ ರಾಜ್ಯವನ್ನಾಗಿ ಮಾಡಲು ಬಿಜೆಪಿ ಸರ್ಕಾರ ಪಣ ತೊಟ್ಟಿರುವುದಾಗಿ ಗೃಹ ಸಚಿವ ವಿ.ಎಸ್. ಆಚಾರ್ಯ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಸ್ತುತ ದೇಶದ 9 ರಾಜ್ಯಗಳಲ್ಲಿ ನಕ್ಸಲ್ ಚಟುವಟಿಕೆ ಹೆಚ್ಚಾಗಿದ್ದು, ನಮ್ಮ ರಾಜ್ಯದಲ್ಲಿ ಈಗ ಕಡಿಮೆಯಾಗಿದೆ. ಮುಂದೆ ನಮ್ಮ ರಾಜ್ಯವನ್ನು ನಕ್ಸಲ್ ಪಟ್ಟಿಯಿಂದ ಹೊರ ಹಾಕಿ ನಕ್ಸಲ್ ಮುಕ್ತ ರಾಜ್ಯವನ್ನಾಗಿ ಮಾಡಲಾಗುವುದು ಎಂದು ಹೇಳಿದ್ದಾರೆ.
ಇದೇ ವೇಳೆ ಬೆಂಗಳೂರಿನಲ್ಲಿ ನಡೆದ ಬಾಂಬ್ ಸ್ಫೋಟದ ಕುರಿತು ಮಾತನಾಡಿದ ಅವರು, ಬಾಂಬ್ ಸ್ಫೋಟಕ್ಕೂ ನಕ್ಸಲೀಯರಿಗೂ ಸಂಬಂಧವಿಲ್ಲ. ಈ ಘಟನೆಯ ಹಿಂದೆ ಬೆಟ್ಟಿಂಗ್ ಮತ್ತು ಭೂಗತ ಜಗತ್ತಿನ ಮಾಫಿಯಾ ಕೈವಾಡವಿದೆ. ಅಲ್ಲದೇ ನಮ್ಮ ಪೊಲೀಸರಿಗೆ ಕ್ರೀಡಾಂಗಣದ ಒಳಗಡೆ ಮಾತ್ರ ಭದ್ರತೆಯನ್ನು ಕಾಪಾಡುವ ಜವಾಬ್ದಾರಿ ನೀಡಿದ್ದರು. ಅದನ್ನು ಸರಿಯಾಗಿಯೇ ನಿರ್ವಹಿಸಿದ್ದರು ಎಂದು ತಿಳಿಸಿದ್ದಾರೆ.
ಈ ಪ್ರಕರಣಕ್ಕೆ ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯನ್ನು ಸ್ಥಳಾಂತರಿಸುವುದು ಕಾರಣವಿರಬಹುದು ಎಂದ ಅವರು, ಒಟ್ಟಿನಲ್ಲಿ ಪ್ರಕರಣದ ಕುರಿತು ತನಿಖೆ ನಡೆಯುತ್ತಿದೆ. ಪೂರ್ಣಗೊಂಡ ಬಳಿಕ ವಿವರಣೆ ನೀಡಲಾಗುವುದು ಎಂದರು.