ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಗಣಿ ಲೂಟಿಗೆ ಬಗ್ಗೆ ಇನ್ನೂ ಆಧಾರ ಬೇಕೆ?: ದೇವೇಗೌಡ ಪ್ರಶ್ನೆ
(HD Deve Gowda | Janardhana Reddy | OMC mining | Karnataka Minister)
ಗಣಿ ಲೂಟಿಗೆ ಬಗ್ಗೆ ಇನ್ನೂ ಆಧಾರ ಬೇಕೆ?: ದೇವೇಗೌಡ ಪ್ರಶ್ನೆ
ಬೆಂಗಳೂರು, ಭಾನುವಾರ, 2 ಮೇ 2010( 11:11 IST )
ರಾಜ್ಯದಲ್ಲಿ ನಿಸರ್ಗ ಸಂಪತ್ತು ಲೂಟಿಯಾಗುತ್ತಿದೆ ಎಂಬುದಕ್ಕೆ ಲೋಕಾಯುಕ್ತರ ವರದಿಗಿಂತ ಇನ್ನೇನು ವರದಿ ಬೇಕು? ಹೀಗೆಂದು ಗುಡುಗಿದವರು, ಮಾಜಿ ಪ್ರಧಾನ ಮಂತ್ರಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ.
ನಗರದಲ್ಲಿ ಇಂದು ಗಣಿ ಮಾಲೀಕತ್ವದ ಕುರಿತಾದ ಚಿತ್ರ 'ಪೃಥ್ವಿ' ವೀಕ್ಷಣೆಯ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಕ್ರಮ ಗಣಿಗಾರಿಕೆಯಲ್ಲಿ ಉನ್ನತ ಅಧಿಕಾರಿಗಳು ಭಾಗಿಯಾಗಿದ್ದಾರೆಂದು ಲೋಕಾಯುಕ್ತ ವರದಿ ತಿಳಿಸಿದೆ. ಹೀಗಿದ್ದರೂ, ಸರ್ಕಾರ ಅಕ್ರಮ ಗಣಿಗಾರಿಕೆ ಮಾಡುತ್ತಿರುವವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಹೇಳಿ ನಮಗೇ ಸಾಕಾಗಿ ಹೋಗಿದೆ ಎಂದು ಹೇಳಿದ್ದಾರೆ.
ರಾಜ್ಯದ ಬಿಜೆಪಿ ಸರ್ಕಾರ ಎಮ್ಮೆ ಧರ್ಮ ಬೆಳೆಸಿಕೊಂಡಿದೆ. ರಾಜಕಾರಣಿಗಳ ಆರೋಪವನ್ನು ನಿರ್ಲಕ್ಷ್ಯ ಮಾಡಿದರೂ ಚಿಂತೆಯಿಲ್ಲ. ಈಗಾಲಾದರೂ ಅಕ್ರಮ ಗಣಿಗಾರಿಕೆ ಮಟ್ಟ ಹಾಕಲು ಸರ್ಕಾರ ಧೈರ್ಯ ತೋರಲಿ ಎಂದು ಅವರು ಹೇಳಿದ್ದಾರೆ.
ಈ ನಿಟ್ಟಿನಲ್ಲಿ ಲೋಕಾಯುಕ್ತ ತನಿಖೆ ವರದಿಯನ್ನು ಶೀಘ್ರವೇ ಪ್ರಕಟಿಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.