ರಾಷ್ಟ್ರೀಯ ಸ್ವಾಸ್ತ್ಯ ಭೀಮಾ ಯೋಜನೆ ವಿಸ್ತರಣೆ: ಸಚಿವ ಖರ್ಗೆ
ಬೆಂಗಳೂರು, ಭಾನುವಾರ, 2 ಮೇ 2010( 15:34 IST )
ರಾಜ್ಯದ ಆರೋಗ್ಯ ಕಾಳಜಿ ಬಗ್ಗೆ ಕೇಂದ್ರ ಜಾಗೃತವಾದಂತಿದೆ. ಇದನ್ನು ಕೇಂದ್ರ ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಪಾಲ್ಗೊಂಡಿದ್ದ ಸಮಾರಂಭವೊಂದರಲ್ಲಿ `ರಾಷ್ಟ್ರೀಯ ಸ್ವಾಸ್ತ್ಯ ಭೀಮಾ ಯೋಜನೆಯನ್ನು ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ವಿಸ್ತರಿಸಲಾಗುವುದು' ಎಂದು ಹೇಳುವ ಮೂಲಕ ಈ ಬಗ್ಗೆ ಬೆಳಕು ಚೆಲ್ಲಿದ್ದಾರೆ.
ಆದರೆ ಇವರು ಆಡಿದ ಮಾತಿನಲ್ಲಿ ಹೇಳಿದ್ದೇನು ಅಂದರೆ, ಕೇಂದ್ರದ ಈ ಕಾರ್ಯದಲ್ಲಿ ರಾಜ್ಯ ಸರಕಾರದ ಸಹಕಾರ ದೊರೆತರೆ ಯೋಜನೆಯನ್ನು ಎಲ್ಲಾ ಜಿಲ್ಲೆಗಳ ಅರ್ಹ ಫಲಾನುಭವಿಗಳಿಗೆ ತಲುಪಿಸಲು ಸಾಧ್ಯ. ಈಗಾಗಲೇ 1.60 ಕೋಟಿ ಕುಟುಂಬಗಳಿಗೆ ವಿಮಾ ಸೌಲಭ್ಯ ಒದಗಿಸಲಾಗಿದ್ದು, ಶೀಘ್ರದಲ್ಲೇ 50 ಲಕ್ಷ ಕುಟುಂಬಗಳಿಗೆ ವಿಸ್ತರಿಸಲಾಗುತ್ತದೆ ಎಂದಿದ್ದಾರೆ.
ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ಕೇಂದ್ರ ಸರಕಾರ ಬಜೆಟ್‌ನಲ್ಲಿ 1 ಸಾವಿರ ಕೋಟಿ ರೂ. ಮೀಸಲಿಟ್ಟಿದೆ. ಕಾರ್ಮಿಕರಿಗೆ ನೀಡಲಾಗುವ ಪರಿಹಾರದ ನಿ ಮೊತ್ತವನ್ನು ಎರಡು ಪಟ್ಟು ಹೆಚ್ಚಿಸಿದೆ. ಎಲ್ಲಾ ಅನುದಾನಿತ ಮತ್ತು ಅನುದಾನರಹಿತ ಶಾಲಾ ಶಿಕ್ಷಕರಿಗೆ ಹೆಚ್ಚಿನ ಗ್ರಾಚುವಿಟಿ ನೀಡಲಾಗುತ್ತಿದೆ. ಕಾರ್ಮಿಕರ ಪಿಂಚಣಿ ನಿಯನ್ನು 3.50 ಲಕ್ಷ ರೂ ಗಳಿಂದ 10 ಲಕ್ಷ ರೂ ಗಳಿಗೆ ಹೆಚ್ಚಿಸಲಾಗಿದೆ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಅವರು ಇನ್ನೊಂದು ವಿಷಯವನ್ನು ತಿಳಿಸಿದರು. ಇಎಸ್ ಐ ಸೌಲಭ್ಯ ಒದಗಿಸಲು ಕಾರ್ಮಿಕರ ವೇತನದ ಮಿತಿಯನ್ನು 10 ಸಾವಿರ ರೂ.ಗಳಿಂದ 15 ಸಾವಿರಕ್ಕೆ ಹೆಚ್ಚಿಸಿ ಆದೇಶ ಹೊರಡಿಸಲಾಗಿದೆ ಎಂದರು.
ವೇತನ ಮಿತಿ ಹೆಚ್ಚಳದ ಆದೇಶ ಇಂದಿನಿಂದಲೇ ಜಾರಿಗೆ ಬರಲಿದೆ. ಜತೆಗೆ ಯಾವುದೇ ಕಾರ್ಖಾನೆಯಲ್ಲಿ 20 ಜನ ಕಾರ್ಮಿಕರಿದ್ದರೆ ಮಾತ್ರ ಇಎಸ್ಐ ಸೌಲಭ್ಯ ಪಡೆಯಬಹುದಿತ್ತು. ಆದರೆ, ಈಗ ಆ ಮಿತಿಯನ್ನು 10ಕ್ಕೆ ಇಳಿಸಲಾಗಿದೆ ಎಂದು ಸಹ ಹೇಳಿದ್ದಾರೆ.