ಹರತಾಳು ಹಾಲಪ್ಪನವರು ಶಿವಮೊಗ್ಗದ ತನ್ನ ಸ್ನೇಹಿತನ ಪತ್ನಿಯ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎಂದು ಇಂದು ರಾಜ್ಯಮಟ್ಟದ ಪತ್ರಿಕೆಯೊಂದು ವರದಿ ಮಾಡಿದ ಹಿನ್ನೆಲೆಯಲ್ಲಿ ಹಾಲಪ್ಪನವರು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಆದರೆ ಇಷ್ಟಕ್ಕೇ ಸಮಾಧಾನಗೊಳ್ಳದ ಮುತಾಲಿಕ್, ಜವಾಬ್ದಾರಿಯುತ ಸ್ಥಾನದಲ್ಲಿದ್ದುಕೊಂಡು ಹೀನ ಕೃತ್ಯ ನಡೆಸಿರುವ ಹಾಲಪ್ಪ ಕೃತ್ಯ ಖಂಡನೀಯ. ಇದನ್ನು ಕೇಳೋಕೆ ಅಸಹ್ಯ ಅನ್ನಿಸುತ್ತದೆ. ಇಂತಹವರ ರಾಜೀನಾಮೆ ಕೇಳುವುದಲ್ಲ. ಗಲ್ಲಿಗೆ ಹಾಕಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಾಲಪ್ಪ ಪ್ರಕರಣದ ಕುರಿತು ನಿಮ್ಮ ಪ್ರತಿಕ್ರಿಯೆ ಏನು ಎಂದು ಪತ್ರಕರ್ತರು ಪ್ರಶ್ನಿಸಿದಾಗ ಚಾಮರಾಜನಗರದಲ್ಲಿದ್ದ ಮುತಾಲಿಕ್, ಕೆಟ್ಟ ಪರಂಪರೆಯಲ್ಲಿರುವವರನ್ನು ಬೀದಿ ಬೀದಿಯಲ್ಲಿ ಹೊಡೆಯುವಂತಹ ಪ್ರಸಂಗಗಳು ಉದ್ಭವಿಸಬೇಕು. ಇಂತವರಿಂದಲೇ ನಮ್ಮ ಸಮಾಜ ಕೆಟ್ಟು ಹೋಗಿರುವುದು ಎಂದರು.
ಅದೇ ಹೊತ್ತಿಗೆ ಸರಕಾರ ಹಾಲಪ್ಪ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಆ ಮೂಲಕ ಸೂಕ್ತ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು ಎಂದೂ ಮುತಾಲಿಕ್ ಒತ್ತಾಯಿಸಿದ್ದಾರೆ.