ಕಾಮಿ ನಿತ್ಯಾನಂದ ಸ್ವಾಮಿ ರಾಸಲೀಲೆ ಪ್ರಕರಣದ ಪ್ರಮುಖ ಸಾಕ್ಷಿ ಎಂದು ಪರಿಗಣಿಸಿರುವ ನಟಿ ರಂಜಿತಾಗೆ ಎರಡು ಬಾರಿ ನೋಟಿಸ್ ಕಳುಹಿಸಿದ್ದು ಆಕೆಯಿಂದ ಈವರೆಗೂ ಯಾವುದೇ ಉತ್ತರ ಬಂದಿಲ್ಲ ಎಂದು ಡಿಐಜಿ ಚರಣ್ ರೆಡ್ಡಿ ತಿಳಿಸಿದ್ದಾರೆ.
ಪತ್ರಿಕೆಯೊಂದರ ಜೊತೆ ಮಾತನಾಡಿದ ಅವರು, ರಾಸಲೀಲೆ ಪ್ರಕರಣ ಬಯಲಾದ ನಂತರ ನಾಪತ್ತೆಯಾಗಿರುವ ರಂಜಿತಾ ಪತ್ತೆಗಾಗಿ ತಮಿಳುನಾಡು ಪೊಲೀಸರ ಸಹಾಯ ಪಡೆಯಲಾಗಿದೆ. ಆದರೆ ಈವರೆಗೂ ಆಕೆಯ ಸುಳಿವು ದೊರೆತಿಲ್ಲ. ಆ ನಿಟ್ಟಿನಲ್ಲಿ ಈ ಬಗ್ಗೆ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ಹೇಳಿದರು.
ಅಲ್ಲದೇ ರಂಜಿತಾ ಸಿಐಡಿ ಪೊಲೀಸರಿಗೆ ಕರೆ ಮಾಡಿ ಸೋಮವಾರದೊಳಗೆ ವಿಚಾರಣೆಗೆ ಹಾಜರಾಗುವುದಾಗಿ ತಿಳಿಸಿದ್ದಾರೆಂಬ ವರದಿ ಸತ್ಯಕ್ಕೆ ದೂರವಾದದ್ದು. ಆಕೆ ಇನ್ನೂ ಪೊಲೀಸರಿಗೆ ಸಿಕ್ಕಿಲ್ಲ, ರಂಜಿತಾ ಎಲ್ಲಿದ್ದಾಳೆಂಬ ಬಗ್ಗೆ ತೀವ್ರ ಶೋಧದಲ್ಲಿ ಇರುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.
ರಾಸಲೀಲೆಯಲ್ಲಿ ಬಂಧಿತನಾಗಿದ್ದ ನಿತ್ಯಾನಂದನ ವಿಚಾರಣೆ ಮುಗಿದಿದ್ದು, ರಾಮನಗರ ಜಿಲ್ಲಾ ಸತ್ರ ನ್ಯಾಯಾಲಯಕ ಮೇ 12ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.