ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » 'ದಂಪತಿ ವಿಚಾರಣೆ ಮೊದ್ಲು, ಹಾಲಪ್ಪ ಬಂಧನ ನಂತ್ರ' (Halappa BJP | Rape case | Yeddyurappa | Karnataka)
Bookmark and Share Feedback Print
 
NRB
ಅತ್ಯಾಚಾರ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲು ದೂರು ಕೊಟ್ಟ ವೆಂಕಟೇಶ್ ಮೂರ್ತಿ ದಂಪತಿಗಳ ವಿಚಾರಣೆ ನಡೆಸಿ ನಂತರ ಮಾಜಿ ಸಚಿವ ಹಾಲಪ್ಪ ಅವರ ಬಂಧನ ಎಂದು ಸಿಐಡಿ ಡಿಐಜಿ ಚರಣ್ ರೆಡ್ಡಿ ಬುಧವಾರ ತಿಳಿಸಿದ್ದಾರೆ.

ಮೊದಲು ದಂಪತಿಗಳ ವಿಚಾರಣೆಯನ್ನು ನಡೆಸುತ್ತೇವೆ. ಆ ನಿಟ್ಟಿನಲ್ಲಿ ಸಿಐಡಿ ಎಸ್ಪಿ ಲೋಕೇಶ್ ನೇತೃತ್ವದ ತಂಡ ತನಿಖೆ ನಡೆಸುತ್ತಿದ್ದು, ವಿಚಾರಣೆ ಪ್ರಗತಿಯಲ್ಲಿದೆ. ಅಲ್ಲಿಯವರೆಗೂ ಹಾಲಪ್ಪ ಅವರ ಬಂಧನದ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಳು ತಕ್ಷಣ ಲಭ್ಯವಾಗಲು ಟ್ವಿಟ್ಟರ್‌ನಲ್ಲಿ ನಮ್ಮನ್ನು ಫಾಲೋ ಮಾಡಿ

ಅತ್ಯಾಚಾರ ಪ್ರಕರಣದ ತನಿಖೆ ಮುಗಿದ ನಂತರ ಹಾಲಪ್ಪ ಅವರನ್ನು ವಿಚಾರಿಸಲಾಗುವುದು, ಅಲ್ಲದೇ ಪ್ರಕರಣದ ವಿಚಾರಣೆಯಲ್ಲಿ ಯಾವುದೇ ರೀತಿಯ ರಾಜಕೀಯ ಒತ್ತಡಗಳಿಲ್ಲ ಎಂದು ಈ ಸಂದರ್ಭದಲ್ಲಿ ಹೇಳಿದರು.

ಏತನ್ಮಧ್ಯೆ ನಿನ್ನೆ ತಡರಾತ್ರಿ ಮಹತ್ವದ ಬೆಳವಣಿಗೆಯೊಂದರಲ್ಲಿ ಮಾಜಿ ಸಚಿವ ಹಾಲಪ್ಪ ಬಂಧನಕ್ಕೆ ಸಿಐಡಿ ಪೊಲೀಸರು ತೀವ್ರ ಶೋಧ ನಡೆಸಿದ್ದು, ರಾಜಕೀಯ ಒತ್ತಡ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹಾಲಪ್ಪ ಬಂಧನಕ್ಕಾಗಿ ಇದೀಗ ಅಧಿಕಾರಿಗಳು ಹುಡುಕಾಟದಲ್ಲಿ ತೊಡಗಿದ್ದಾರೆನ್ನಲಾಗಿದೆ.

ವಿಪಕ್ಷಗಳಿಂದ ಹಾಲಪ್ಪ ಬಂಧನಕ್ಕೆ ಒತ್ತಾಯ: ರಾಜ್ಯ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿದ ಅತ್ಯಾಚಾರ ಆರೋಪದ ಬೆನ್ನಲ್ಲೇ ಸಚಿವ ಸ್ಥಾನಕ್ಕೆ ಹರತಾಳು ಹಾಲಪ್ಪ ರಾಜೀನಾಮೆ ಕೊಟ್ಟಿದ್ದರು. ಆದರೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ ನಂತರ ಹಾಲಪ್ಪ ನಾಪತ್ತೆಯಾಗಿದ್ದಾರೆ. ಇದೀಗ ಹಾಲಪ್ಪ ಅವರನ್ನು ಕೂಡಲೇ ಬಂಧಿಸಬೇಕೆಂದು ಕಾಂಗ್ರೆಸ್ ತೀವ್ರ ವಾಗ್ದಾಳಿ ನಡೆಸುತ್ತಿದೆ. ಆದರೆ ಅದ್ಯಾವುದಕ್ಕೂ ಸೊಪ್ಪು ಹಾಕದ ಮುಖ್ಯಮಂತ್ರಿಗಳು, ಪ್ರಕರಣ ಸಿಐಡಿ ತನಿಖೆಯಲ್ಲಿದೆ. ಸತ್ಯಾಂಶ ಕೂಡಲೇ ಹೊರಬರಲಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

ಹಾಲಪ್ಪ ರಕ್ಷಣೆಗಾಗಿ ಜೇಠ್ಮಲಾನಿಗೆ ಮೊರೆ: ಅತ್ಯಾಚಾರ ಪ್ರಕರಣದ ಆರೋಪ ಎದುರಿಸುತ್ತಿರುವ ಮಾಜಿ ಸಚಿವ ಹರತಾಳು ಹಾಲಪ್ಪ ಅವರನ್ನು ರಕ್ಷಿಸಲು ಹರಸಾಹಸಪಡುತ್ತಿರುವ ಬಿಜೆಪಿ ನಾಯಕರು ಇದೀಗ ಹಾಲಪ್ಪ ಪರವಾಗಿ ವಾದ ಮಂಡಿಸುವಂತೆ ಖ್ಯಾತ ವಕೀಲ ರಾಮ್ ಜೇಠ್ಮಲಾನಿ ಅವರಿಗೆ ದುಂಬಾಲು ಬಿದ್ದಿರುವ ಅಂಶ ಬೆಳಕಿಗೆ ಬಂದಿದೆ.

ಪ್ರಕರಣದ ಹಿನ್ನೆಲೆಯಲ್ಲಿ ಬಂಧನದ ಭಯದಲ್ಲಿರುವ ಹಾಲಪ್ಪ ಅಜ್ಞಾತ ಸ್ಥಳದಲ್ಲಿದ್ದಾರೆ ಎನ್ನಲಾಗಿದೆ. ಆ ನಿಟ್ಟಿನಲ್ಲಿ ಮುಂದೆ ನಡೆಯಲಿರುವ ಕಾನೂನು ಸಮರದಲ್ಲಿ ಬಚಾವ್ ಮಾಡಲು ಬಿಜೆಪಿ ನಾಯಕರು ಹರಸಾಹಸ ಮಾಡುತ್ತಿದ್ದಾರೆ ಎಂದು ಮೂಲವೊಂದು ಹೇಳಿದೆ.

ಒಂದು ವೇಳೆ ಜೇಠ್ಮಲಾನಿ ಅವರು ಈ ಪ್ರಕರಣವನ್ನು ಕೈಗೆತ್ತಿಕೊಳ್ಳಲು ಒಪ್ಪದೆ ಹೋದರೆ ಅದೇ ಮಟ್ಟದ ಖ್ಯಾತಿ ಹೊಂದಿರುವ ಇನ್ನೊಬ್ಬ ವಕೀಲರನ್ನು ನೇಮಕ ಮಾಡಲು ಬಿಜೆಪಿ ಚಿಂತನೆ ನಡೆಸಿದೆ.

ಸುಮಿತ್ರಾ, ಚಂದ್ರಾವತಿ, ವೆಂಕಟೇಶ್ ಮೂರ್ತಿ ಮತ್ತು ಹಾಲಪ್
ಸಂಬಂಧಿತ ಮಾಹಿತಿ ಹುಡುಕಿ