ಹಾಲಪ್ಪ ಪ್ರಕರಣ-ಆರ್ಎಸ್ಎಸ್ ಯಾಕೆ ಮೌನವಾಗಿದೆ?: ಕಾಂಗ್ರೆಸ್
ಶಿರಸಿ, ಶುಕ್ರವಾರ, 7 ಮೇ 2010( 11:26 IST )
NRB
ಅಲ್ಪಸಂಖ್ಯಾತ ಸಮುದಾಯವರಿಂದ ಅನ್ಯಾಯವಾದಾಗ ಬೊಬ್ಬೆ ಹೊಡೆಯುವ ಆರ್ಎಸ್ಎಸ್,ವಿಶ್ವಹಿಂದೂ ಪರಿಷತ್‌ನವರು ಹಾಲಪ್ಪ ವಿಚಾರದಲ್ಲಿ ಯಾಕೆ ಮೌನವಾಗಿದೆ. ಇವರ ನಾಟಕ ಎಲ್ಲರಿಗೂ ಅರ್ಥವಾಗುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಆರ್.ವಿ.ದೇಶಪಾಂಡೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹರತಾಳು ಹಾಲಪ್ಪ ಅತ್ಯಾಚಾರದ ಆರೋಪದ ಎದುರಿಸುತ್ತಿದ್ದರು ಕೂಡ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ಸಚಿವರು ಮುಗ್ದರು ಎಂದು ಹೇಳುವ ಮೂಲಕ ಬೆಂಬಲಕ್ಕೆ ನಿಂತಿದ್ದಾರೆ ಎಂದು ಅಸಮಧಾನ ವ್ಯಕ್ತಪಡಿಸಿದರು.
ಅತ್ಯಾಚಾರದಂತಹ ಗಂಭೀರ ಆರೋಪ ಎದುರಿಸುತ್ತಿದ್ದರು ಕೂಡ ಹಾಲಪ್ಪ ಅವರನ್ನು ಈವರೆಗೂ ಬಂಧಿಸಿಲ್ಲ, ಸಚಿವರನ್ನು ಸರ್ಕಾರ ವ್ಯವಸ್ಥಿತವಾಗಿ ರಕ್ಷಿಸಲು ಹೊರಟಿದೆ ಎಂದು ಆರೋಪಿಸಿದರು.
ಸರ್ಕಾರದ ಭ್ರಷ್ಟಾಚಾರ ಸೇರಿದಂತೆ ಇಂತಹ ಘಟನೆಗಳನ್ನು ಖಂಡಿಸಿ ವಿರೋಧ ಪಕ್ಷಗಳು ಪ್ರತಿಭಟನೆ ನಡೆಸಿದರೆ, ಅಭಿವೃದ್ಧಿ ಸಹಿಸದೆ ಅನಾವಶ್ಯಕವಾಗಿ ಬೊಬ್ಬೆ ಹೊಡೆಯುತ್ತಾರೆ ಎಂದು ಮುಖ್ಯಮಂತ್ರಿಗಳು ತಿರುಗೇಟು ನೀಡುತ್ತಾರೆ. ಒಟ್ಟಾರೆ ಬಿಜೆಪಿ ಸರ್ಕಾರಕ್ಕೆ ಯಾವ ರೀತಿ ಬುದ್ದಿ ಕಲಿಸಬೇಕೆಂದು ಆಲೋಚಿಸುತ್ತಿರುವುದಾಗಿಯೂ ಈ ಸಂದರ್ಭದಲ್ಲಿ ಹೇಳಿದರು.