ಜಿಲ್ಲೆಯ ನಾಗಮಂಗಲ ತಾಲೂಕಿನಲ್ಲಿ ಇದೀಗ ಮಾರಣಾಂತಿಕ ಕಾಲರಾ ಸೋಂಕು ವ್ಯಾಪಿಸಿದೆ. ಶನಿವಾರ ಸಂಜೆ ತೀವ್ರ ವಾಂತಿ ಬೇಧಿಯಿಂದ ಇಲ್ಲಿನ ಆದಿಚುಂಚನಗಿರಿ ಆಸ್ಪತ್ರೆಗೆ ರೋಗಿಗಳನ್ನು ತಪಾಸಣೆಗೆ ಒಳಪಡಿಸಿದ್ದು, ವೈದ್ಯರು ಇದು ಕಾಲರಾ ಎಂದು ದೃಢಪಡಿಸಿದ್ದಾರೆ.
ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ನಾನಾ ಗ್ರಾಮದ ಒಟ್ಟು ಆರು ಮಂದಿಗೆ ಕಾಲರಾ ತಗುಲಿದೆ ಎಂಬುದು ದೃಢಪಟ್ಟಿದೆ. ಮಂಗರವಳ್ಳಿಯ ಮಂಜುಳಾ (30), ಬೆಟ್ಟದ ಮಲ್ಲೇನಹಳ್ಳಿಯ ಮಂಜುಳಾ (20), ಬೋರೇಗೌಡ (25), ನರಸಿಂಹ (6), ಜುಟ್ಟಹಳ್ಳಿಯ ಪ್ರೇಮಾ (25), ರಾಮು (25) ಹಾಗೂ ಅಗಚಹಳ್ಳಿಯ ವಿಜಯಲಕ್ಷ್ಮಿ (25) ಕಾಲರಾ ಗೋಗ ಪೀಡಿತರಾಗಿದ್ದಾರೆ.
ಇವರೆಲ್ಲರಿಗೂ ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಯಾವುದೇ ಅಪಾಯ ಇಲ್ಲ ಎಂದು ತಿಳಿಸಲಾಗಿದೆ. ಒಟ್ಟಾರೆ ಬೇಸಿಗೆ ಬಹು ದೊಡ್ಡ ಮಾರಿ ಕಾಲರಾ ರಾಜ್ಯವನ್ನು ಪ್ರವೇಶಿಸಿದಂತೆ ಅಗಿದ್ದು, ಎಲ್ಲರಿಗೂ ಎಚ್ಚರಿಕೆಯಿಂದ ಇರಲು ಆರೋಗ್ಯ ಇಲಾಖೆ ಸೂಚಿಸಿದೆ.