ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಕೆಎಂಫ್ ಅವ್ಯವಹಾರ-ರೇವಣ್ಣಗೆ ನೇರ ನೋಟಿಸ್: ಸವದಿ (KMF | Revanna | BJP | Yeddyurappa | Election | Bangalore)
Bookmark and Share Feedback Print
 
ಕರ್ನಾಟಕ ಹಾಲು ಮಂಡಲ ಒಕ್ಕೂಟದಲ್ಲಿ ನಡೆದಿರುವ ಅವ್ಯವಹಾರದ ಕುರಿತು ಲೆಕ್ಕ ತಪಾಸಣೆ ವರದಿಯ ಹಿನ್ನೆಲೆಯಲ್ಲಿ ವಿವರಣೆ ಕೋರಿ ಆರು ಬಾರಿ ನೀಡಿದ್ದ ನೋಟಿಸ್ ಅನ್ನು ಮಾಜಿ ಅಧ್ಯಕ್ಷ ಎಚ್.ಡಿ. ರೇವಣ್ಣ ತಿರಸ್ಕರಿಸಿರುವ ಹಿನ್ನೆಲೆಯಲ್ಲಿ ನೇರವಾಗಿ ನೋಟಿಸ್ ನೀಡಲು ನಿರ್ಧರಿಸಲಾಗಿದೆ ಎಂದು ಸಹಕಾರ ಸಚಿವ ಲಕ್ಷ್ಮಣ ಸವದಿ ತಿಳಿಸಿದ್ದಾರೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೇವಣ್ಣ ಅವರಿಗೆ ನೀಡಿದ ನೋಟಿಸ್‌ಗೆ ಉತ್ತರ ಬಂದ ಬಳಿಕವೇ ಪ್ರಕರಣದ ಬಗ್ಗೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.

ಆದರೆ ಇದುವರೆಗೆ ಯಾವುದೇ ನೋಟಿಸ್‌ಗೂ ರೇವಣ್ಣ ವಿವರಣೆ ನೀಡಿಲ್ಲ. ಆ ಕಾರಣದಿಂದಾಗಿ ಮುಂದಿನ ಕೆಎಂಎಫ್ ಆಡಳಿತ ಸಭೆಗೆ ಅವರು ಹಾಜರಾಗುವ ಸಂದರ್ಭದಲ್ಲಿ ಅವರಿಗೆ ನೇರವಾಗಿ ನೋಟಿಸ್ ನೀಡಲು ನಿರ್ಧರಿಸಲಾಗುವುದು ಎಂದು ಸ್ಪಷ್ಟಪಡಿಸಿದರು.

ಇದೇ ವೇಳೆ ರಾಜ್ಯದ ಒಟ್ಟು 13 ಮಹಾಮಂಡಳಗಳ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆಯಲ್ಲಿ ಬಿಜೆಪಿ 12 ಮಹಾಮಂಡಳಗಳಲ್ಲಿ ಜಯಭೇರಿ ಬಾರಿಸಿದೆ. ಒಂದು ಮಹಾಮಂಡಳದಲ್ಲಿ ಮಾತ್ರ ಕಾಂಗ್ರೆಸ್ ಜಯಗಳಿಸಿದೆ ಎಂದು ಅವರು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ