ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಸುಂದರವಾಗಿಲ್ಲ ಎಂದು ಪತ್ನಿಯನ್ನೇ ಕೊಂದ ಗಂಡ! (Bangalore | Police | Wedding | Karnataka)
Bookmark and Share Feedback Print
 
ವರದಕ್ಷಿಣೆಗಾಗಿ ಹೆಂಡತಿಯನ್ನು ಕೊಲ್ಲುವುದು, ಇನ್ನೊಂದು ಸಂಬಂಧಕ್ಕಾಗಿ ಪತ್ನಿಯನ್ನು ಮನೆಯಿಂದ ಹೊರಗಟ್ಟುವುದು, ಸಾಯಿಸುವುದನ್ನು ಕೇಳಿದ್ದೇವೆ. ಆದರೆ ಇಲ್ಲೊಬ್ಬ ಕ್ರೂರ ಪತಿ ಮದುವೆಯಾದ ಎರಡೇ ತಿಂಗಳಲ್ಲಿ ಹೆಂಡತಿ ಚೆಂದವಿಲ್ಲ ಎಂಬ ಕಾರಣಕ್ಕಾಗಿ ಆಕೆಯನ್ನು ಉಸಿರುಗಟ್ಟಿಸಿ ಕೊಂದ ಅಮಾನವೀಯ ಘಟನೆ ನಡೆದಿದೆ!

ಸಿರಾ ತಾಲೂಕಿನ ತಾಯಿಗೊಂಡನಹಳ್ಳಿ ನಿವಾಸಿ ಮುದ್ದಮ್ಮ (20) ಕೊಲೆಯಾದ ನತದೃಷ್ಟೆಯಾಗಿದ್ದಾಳೆ. ಪ್ರಕರಣದ ಕುರಿತು ಮುದ್ದಮ್ಮ ಮನೆಯವರು ರಾಜಗೋಪಾಲ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಖದೀಮ ಪತಿ ಮಧುಗಿರಿ ತಾಲೂಕು ಮರಿತಿಮ್ಮನಹಳ್ಳಿ ನಿವಾಸಿ ಗೋವಿಂದರಾಜು ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

ಪತ್ನಿ ಸುಂದರವಾಗಿಲ್ಲ ಎಂಬ ಕಾರಣಕ್ಕೆ ಆಕೆಯನ್ನು ತಾನೇ ಕೊಲೆ ಮಾಡಿರುವುದಾಗಿ ಭೂಪ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ.

ಗಾರ್ಮೆಂಟ್ಸ್‌ವೊಂದರಲ್ಲಿ ಬಟ್ಟೆ ಇಸ್ತ್ರಿ ಮಾಡುವ ಕೆಲಸ ಮಾಡುತ್ತಿದ್ದ ಗೋವಿಂದರಾಜು ಹಾಗೂ ಮುದ್ದಮ್ಮ ಫೆಬ್ರುವರಿ ತಿಂಗಳಲ್ಲಿ ಹಸೆಮಣೆ ಏರಿದ್ದರು. ಹೆಂಡತಿ ಚೆಂದವಿಲ್ಲ ಎಂಬ ವಿಷಯವನ್ನೇ ನೆಪವಾಗಿಟ್ಟು ಆಗಾಗ ಜಗಳ ತೆಗೆಯುತ್ತಿದ್ದ ಎಂದು ಮುದ್ದಮ್ಮ ಮನೆಯವರು ದೂರಿನಲ್ಲಿ ತಿಳಿಸಿದ್ದಾರೆ.

ಸಂಬಂಧಿಕರ ಮನೆಯಲ್ಲಿದ್ದ ಮುದ್ದಮ್ಮ ಚುನಾವಣೆಯಲ್ಲಿ ಮತದಾನ ಮುಗಿಸಿ ಭಾನುವಾರ ಬೆಂಗಳೂರಿಗೆ ಹಿಂತಿರುಗಿದ್ದರು. ಆದರೆ ಬುಧವಾರ ಗಂಡ ಆಕೆಯನ್ನು ಉಸಿರುಗಟ್ಟಿಸಿ ಸಾಯಿಸಿದ್ದ ಎಂದು ದೂರಿನಲ್ಲಿ ಹೇಳಲಾಗಿದೆ. ಹೆಂಡತಿಯನ್ನು ಸೀರೆಯಿಂದ ಬಿಗಿದು ಉಸಿರುಗಟ್ಟಿಸಿ ಹತ್ಯೆಗೈದು, ನಂತರ ಮನೆಗೆ ಬೀಗ ಹಾಕಿಕೊಂಡು ಕೆಲಸಕ್ಕೆ ತೆರಳಿದ್ದ!

ಆದರೆ ಗಂಡನ ಗ್ರಹಚಾರ ಕೆಟ್ಟಿತ್ತು, ಮನೆಗೆ ಸಂಜೆ ವಾಪಸಾಗುವಾಗ ಮನೆ ಬೀಗ ಕಳೆದುಕೊಂಡು ಬಂದಿದ್ದ. ಅನಿವಾರ್ಯವಾಗಿ ಮನೆ ಮಾಲೀಕ ಶಿವಣ್ಣ ಅವರು ಮನೆ ಬೀಗ ತೆಗೆದಿದ್ದರು. ಆಗ ಮನೆಯೊಳಗೆ ಕೊಲೆಯಾಗಿ ಬಿದ್ದ ಮುದ್ದಮ್ಮಳನ್ನು ಗಮನಿಸಿ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದರು. ನಂತರ ಮನೆಗೆ ಪೊಲೀಸರು ಬಂದು ವಿಚಾರಣೆ ನಡೆಸಿದಾಗ ಕೊಲೆ ಮಾಡಿದ ವಿಷಯ ಒಪ್ಪಿಕೊಂಡಿದ್ದ. ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ