ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಕೋಮುವಾದಿ ಶ್ರೀರಾಮಸೇನೆ ಸಂಘಟನೆ ನಿಷೇಧಿಸಿ: ಶಿವಕುಮಾರ್ (Shiv kumar | BJP | Congress | KPCC | Yeddyurappa)
Bookmark and Share Feedback Print
 
ರಾಜ್ಯದಲ್ಲಿ ಗಲಭೆ ನಡೆಸಲು ಹಣ ಪಡೆದ ಕೋಮು ಸಂಘಟನೆ ಶ್ರೀರಾಮಸೇನೆಯನ್ನು ನಿಷೇಧಿಸಿ, ಸಂಘಟನೆ ಮುಖ್ಯಸ್ಥ ಮುತಾಲಿಕ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಒತ್ತಾಯಿಸಿದ್ದಾರೆ.

ನಗರದ ರಾಜೀವ್ ಜ್ಯೋತಿ ಯಾತ್ರೆಗೆ ಚಾಲನೆ ನೀಡಿದ ನಂತರ ಮಾತನಾಡಿದ ಅವರು ಸುದ್ದಿಗಾರರ ಜೊತೆ ಮಾತನಾಡಿದರು. ಪೈಸಾ ಕಿ ದಂಧಾ ಸ್ಟಿಂಗ್ ಆಪರೇಶನ್ ಮಾಡಿರುವವರ ವಿರುದ್ಧ ಮುತಾಲಿಕ್ ನೇರ ಆರೋಪ ಮಾಡಿದ್ದಾರೆ. ಇದನ್ನು ನೋಡಿದರೆ, ಮುತಾಲಿಕ್ ಪರ ಬಿಜೆಪಿ ಸರ್ಕಾರ ನಿಂತಿದೆ ಎಂಬುದು ತಿಳಿಯುತ್ತದೆ ಎಂದರು.

ಹಣ ಪಡೆಯುತ್ತಿರುವುದನ್ನು ಚಿತ್ರೀಕರಿಸಿದವರ ವಿರುದ್ಧವೇ ಮುತಾಲಿಕ್ ತಿರುಗಿ ಬಿದ್ದಿರುವುದು ಪ್ರಜಾಪ್ರಭುತ್ವ ವಿರೋಧಿ ಕೆಲಸ. ಹೀಗಾಗಿ ಮುತಾಲಿಕ್ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸಂಬಂಧಿತ ಮಾಹಿತಿ ಹುಡುಕಿ