ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಬಿಜೆಪಿಯಿಂದ ರಾಜ್ಯ ಅಧೋಗತಿಯತ್ತ: ಧರ್ಮಸಿಂಗ್ (BJP | Congress | KPCC | Dharam singh | Yeddyurappa)
Bookmark and Share Feedback Print
 
ರಾಜ್ಯ ರಾಜಕೀಯದಲ್ಲಿ ಹಗರಣಗಳು ಹೆಚ್ಚಾಗಿದ್ದು, ಬಿಜೆಪಿ ಸರಕಾರ ರಾಜ್ಯವನ್ನು ಅಧೋಗತಿಯತ್ತ ತಳ್ಳುತ್ತಿದೆ. ಅಲ್ಲದೇ ರಾಜ್ಯದಲ್ಲಿ ಆಡಳಿತ ಯಂತ್ರ ಸಮರ್ಪಕವಾಗಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎನ್.ಧರ್ಮಸಿಂಗ್ ಆರೋಪಿಸಿದ್ದಾರೆ.

ಸಂಪುಟದಲ್ಲಿ ಎಲ್ಲರದೂ ಒಂದೊಂದು ಹಗರಣ. ಹೀಗಾಗಿ ಇದನ್ನು ಸರಿದೂಗಿಸುವಲ್ಲಿಯೇ ಸರಕಾರದ ಹೆಚ್ಚಿನ ಸಮಯ ಮುಗಿದು ಹೋಗುತ್ತಿದೆ. ಮುಖ್ಯಮಂತ್ರಿಗಳಿಗೆ ಇದೇ ದೊಡ್ಡದಾಗಿರುವಾಗ ಆಡಳಿತ ಯಂತ್ರ ನಡೆಸಲು ಹೇಗೆ ಸಾಧ್ಯ? ರಾಜ್ಯದಲ್ಲಿ ಸರಕಾರ ಅಸ್ತಿತ್ವದಲ್ಲಿ ಇದೆಯೋ ಇಲ್ಲವೋ ಎನ್ನುವ ಅನುಮಾನ ತಮ್ಮನ್ನು ಕಾಡುತ್ತಿದೆ ಎಂದು ತಿಳಿಸಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಭೇಟಿ ನೀಡಿದಲ್ಲೆಲ್ಲಾ ಕೋಟಿ ಕೋಟಿ ರೂ. ಘೋಷಿಸುತ್ತಿದ್ದು, ಯಾವುದೂ ಸಹ ಕಾರ್ಯಗತವಾಗುತ್ತಿಲ್ಲ. ಯಾದಗಿರಿ ಜಿಲ್ಲೆಗೆ 100 ಕೋಟಿ ರೂ. ಘೋಷಿಸಿದ್ದಾರೆ. ಆದರೆ ಅದರಲ್ಲಿ ಎಷ್ಟು ಬಂದಿದೆ ಎಂಬ ಬಗ್ಗೆ ಗಮನ ಹರಿಸಿದರೆ, ಉತ್ತರ ಶೂನ್ಯ. ಎಷ್ಟು ಕಡೆ ಭರವಸೆ ನೀಡಿದ್ದೇನೆ ಎಂಬುದೇ ಯಡಿಯೂರಪ್ಪನವರಿಗೆ ಗೊತ್ತಿಲ್ಲ ಎಂದು ಲೇವಡಿ ಮಾಡಿದ್ದಾರೆ.

ರಾಜ್ಯದಲ್ಲಿ ಸಾಕಷ್ಟು ಪ್ರಮುಖ ಕಾರ್ಯಗಳು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೇ ಆಗಿವೆ. ಈ ಸರಕಾರದಿಂದ ಯಾವುದೇ ಹೇಳಿಕೊಳ್ಳುವಂತಹ ಒಂದೂ ಕೆಲಸ ನಡೆದಿಲ್ಲ. ಕೇಂದ್ರ ನೀಡಿದ ನರ್ಮ್ ಯೋಜನೆಯ ಕೋಟ್ಯಂತರ ರೂ. ಮೊತ್ತದ ಹಣ ವೆಚ್ಚ ಮಾಡಿರುವ ಕುರಿತ ವಿವರವನ್ನು ರಾಜ್ಯ ಸರಕಾರ ನೀಡಬೇಕು ಎಂದು ಆಗ್ರಹಿಸಿದರು.

ಕಬ್ಬಿಗೆ ಸಮರ್ಪಕ ದರವಿಲ್ಲದೆ ಬೆಳಗಾವಿ ಭಾಗದಲ್ಲಿ ರೈತರು ನೇಣು ಹಾಕಿಕೊಳ್ಳುತ್ತಿದ್ದಾರೆ. ಆದರೆ ರಾಜ್ಯ ಸರ್ಕಾರ ಗ್ರಾಮ ಪಂಚಾಯತಿ ಚುನಾವಣೆ ನೆಪದಲ್ಲಿ ಭತ್ತಕ್ಕೆ ಬೆಂಬಲ ಬೆಲೆ ಘೋಷಿಸಿದೆ ಎಂದು ವ್ಯಂಗ್ಯವಾಡಿದ ಅವರು, ಇದು ರಾಜಕೀಯ ದುರುದ್ದೇಶಪೂರಿತ ತೀರ್ಮಾನವಲ್ಲದೇ ಇನ್ನೇನು ಎಂದು ಪ್ರಶ್ನಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ