ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಹೈಕೋರ್ಟ್‌ನಲ್ಲೇ ಕುಸಿದು ಬಿದ್ದ ನಿತ್ಯಾನಂದ ಶಿಷ್ಯೆ (High court | Nithyananda | Ranjitha | Karnataka | CID)
Bookmark and Share Feedback Print
 
ಕಾಮಿ ನಿತ್ಯಾನಂದ ಸ್ವಾಮಿಯ ರಾಸಲೀಲೆ ಪ್ರಕರಣದ ವಿಚಾರಣೆಗಾಗಿ ಆಗಮಿಸಿದ್ದ ಶಿಷ್ಯೆಯೊಬ್ಬರು ಹೈಕೋರ್ಟ್ ಆವರಣದಲ್ಲಿಯೇ ಕುಸಿದು ಬಿದ್ದ ಘಟನೆ ಮಂಗಳವಾರ ನಡೆದಿದ್ದು, ಇದರಿಂದ ಕೆಲಕಾಲ ಆತಂಕದ ವಾತಾವರಣೆ ಸೃಷ್ಟಿಯಾಗಿತ್ತು.

ಪ್ರಕರಣದ ವಿಚಾರಣೆಗಾಗಿ ಶಿಷ್ಯರೆಲ್ಲ ಬೆಳಿಗ್ಗಿನಿಂದಲೇ ನಿಂತುಕೊಂಡೇ ಕಾಯುತ್ತಿದ್ದರು. ರಜಾಕಾಲದಲ್ಲಿ ತುಂಬಾ ಪ್ರಕರಣಗಳ ವಿಚಾರಣೆ ಇದ್ದಿರುವುದರಿಂದ ಸಂಜೆಯಾದರೂ ಪ್ರಕರಣ ವಿಚಾರಣೆಗೆ ಬಂದಿರಲಿಲ್ಲವಾಗಿತ್ತು. ನಿಂತು ಸುಸ್ತಾಗಿದ್ದ ಪದ್ಮಿನಿ ಕೋರ್ಟ್ ಆವರಣದಲ್ಲೇ ಕುಸಿದು ಬಿದ್ದಿದ್ದರು.

ಪ್ರಕರಣದ ವಿಚಾರಣೆ ಹಿನ್ನೆಲೆಯಲ್ಲಿ ಸುಮಾರು 11 ಮಂದಿ ಶಿಷ್ಯೆಯರು ಬಿಡದಿ ಆಶ್ರಮದಿಂದ ಹೈಕೋರ್ಟ್‌ಗೆ ಆಗಮಿಸಿದ್ದರು. ಆದರೆ ಈ ಸಂದರ್ಭದಲ್ಲಿ ನಿಂತು, ನಿಂತು ಸುಸ್ತಾದ ಪದ್ಮಿನಿ ಎಂಬ ಯುವ ಶಿಷ್ಯೆ ಕೋರ್ಟ್ ಹಾಲ್‌ 11ರಲ್ಲಿ ಕುಸಿದು ಬಿದ್ದರು. ಆಗ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ತದನಂತರ ಪದ್ಮಿನಿಯನ್ನು ಹೊರಕ್ಕೆ ಕರೆತಂದು ಶುಶ್ರೂಷೆ ನೀಡಿದಾಗ ಚೇತರಿಸಿಕೊಂಡರು.

ಅರ್ಜಿ ವಿಚಾರಣೆ ಮುಂದಕ್ಕೆ: ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಬಂಧನದಲ್ಲಿರುವ ನಿತ್ಯಾನಂದ ಸ್ವಾಮಿ ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಮೇ 26ಕ್ಕೆ ಮುಂದೂಡಿದೆ.

ಜಾಮೀನು ಕೋರಿ ನಿತ್ಯಾನಂದ ಸ್ವಾಮಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸುವಂತೆ ನಿತ್ಯಾನಂದ ಪರ ವಕೀಲರು ಮಂಗಳವಾರ ರಜಾಕಾಲದ ಏಕಸದಸ್ಯ ಪೀಠವನ್ನು ಕೋರಿದರು. ಆದರೆ ಸಮಯದ ಅಭಾವದಿಂದ ವಿಚಾರಣೆ ನಡೆಸಲು ಸಾಧ್ಯವಿಲ್ಲ ಎಂದು ರಜಾಕಾಲದ ಪೀಠದ ನ್ಯಾಯಮೂರ್ತಿಗಳು ವಿಚಾರಣೆ ಹೈಕೋರ್ಟ್ ಸಾಮಾನ್ಯ ಪೀಠದ ಮುಂದೆಯೇ ನಡೆಯಲಿ ಎಂದು ಹೇಳಿ ವಿಚಾರಣೆ ಮುಂದೂಡಿದರು.
ಸಂಬಂಧಿತ ಮಾಹಿತಿ ಹುಡುಕಿ