ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » 'ದೇವನಾಗರಿ' ಕೊಂಕಣಿಗೆ ಮಾನ್ಯತೆ: ಮಾಂಡ್ ಸೋಭಾಣ್ ಕೆಂಡ (Konkani | Devanagari | Mand Sobhan | Eric Ozario | Kendra Sahitya Academy)
Bookmark and Share Feedback Print
 
ಕೊಂಕಣಿ ಕೃತಿಗಳನ್ನು ಗುರುತಿಸಲು ದೇವನಾಗರಿ ಲಿಪಿಯನ್ನು 'ಮಾತ್ರ' ಅಂಗೀಕರಿಸಿರುವ ಕೇಂದ್ರ ಸಾಹಿತ್ಯ ಅಕಾಡೆಮಿಯ ಕ್ರಮ ಇದೀಗ ಭಾರೀ ವಿವಾದಕ್ಕೆಡೆ ಮಾಡಿದ್ದು, ಖ್ಯಾತ ಕೊಂಕಣಿ ಕಲಾವಿದ ಮತ್ತು ಕೊಂಕಣಿ ಸಾಂಸ್ಕೃತಿಕ ಸಂಸ್ಥೆ ಮಾಂಡ್ ಸೋಭಾಣ್ ಅಧ್ಯಕ್ಷ ಎರಿಕ್ ಒಜಾರಿಯೋ ಈ ಕ್ರಮವನ್ನು ತೀವ್ರವಾಗಿ ಖಂಡಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಕಾಡೆಮಿಯು ದೇವನಾಗರಿ ಲಿಪಿಯಲ್ಲಿರುವ ಕೊಂಕಣಿ ಕೃತಿಗಳಿಗೆ ಮಾತ್ರವೇ ಪ್ರಶಸ್ತಿ ನೀಡಲು ನಿರ್ಧರಿಸಿದೆ. ಕನ್ನಡ ಮತ್ತು ರೋಮನ್ ಲಿಪಿಯ ಕೊಂಕಣಿ ಕೃತಿಗಳನ್ನು ನಿರ್ಲಕ್ಷಿಸಲು ನಿರ್ಧರಿಸಿರುವುದು ಖಂಡನೀಯ ಎಂದು ನುಡಿದರು.

ಇದು ಲಿಪಿ ರಾಜಕೀಯದ ಮೂಲಕ ಕೊಂಕಣಿ ಸಮುದಾಯವನ್ನು ವಿಭಜಿಸುವ ಪ್ರಯತ್ನ ಎಂದವರು ಆರೋಪಿಸಿದರು.ಈ ವಿಷಯದ ಕುರಿತು ಅಕಾಡೆಮಿಯ ಕೊಂಕಣಿ ಪ್ರತಿನಿಧಿಯಾಗಿರುವ ಸಾಹಿತಿ, ಎಡ್ವಿನ್ ಜೆ.ಎಫ್.ಡಿಸೋಜ ಅವರು ಭಾರತೀಯ ಭಾಷಾ ಅಭಿವೃದ್ಧಿ ಮಂಡಳಿ ಜೊತೆ ಮಾತುಕತೆ ನಡೆಸಿದ್ದಾರೆ ಎಂದವರು ಮಾಹಿತಿ ನೀಡಿದರು.
ಸಂಬಂಧಿತ ಮಾಹಿತಿ ಹುಡುಕಿ