ದೇಶದ ಮೊದಲ ಪ್ರಧಾನಿಯಾದ ನೆಹರು ಕುಟುಂಬ ತ್ಯಾಗ, ಬಲಿದಾನದ ಸಂಕೇತವಾಗಿದೆ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ಭಾರತರತ್ನ ರಾಜೀವ್ ಗಾಂಧಿ ಜ್ಯೋತಿ ಸಮಿತಿಯು ರಾಜೀವ್ ಗಾಂಧಿಯವರ 19ನೆ ಪುಣ್ಯ ತಿಥಿ ಅಂಗವಾಗಿ ಶೇಷಾದ್ರಿಪುರಂ ರಾಜೀವ್ ಗಾಂಧಿ ವೃತ್ತದಿಂದ ಶ್ರೀಪೆರಂಬುದೂರಿಗೆ ಗುರುವಾರ ಹಮ್ಮಿಕೊಂಡಿದ್ದ ಜ್ಯೋತಿಯಾತ್ರೆ ಉದ್ಘಾಟಿಸಿ ಅವರು ಮಾತನಾಡಿದರು.
ಜವಾಹರಲಾಲ್ ನೆಹರು ಅವರು ದೇಶಕ್ಕೆ ಮಾಡಿದ ಸೇವೆ, ಇಂದಿರಾಗಾಂಧಿಯ ಪ್ರಾಣಾರ್ಪಣೆ, ರಾಜೀವ್ ಗಾಂಧಿಯವರ ಬಲಿದಾನ ನಿಜಕ್ಕೂ ದೇಶಕ್ಕೆ ಮಾಡಿದ ತ್ಯಾಗವಾಗಿದೆ ಎಂದರು. ಅವರ ಆದರ್ಶಗಳು ಪಾದರಸದಂತಹ ವೇಗ ನಮಗೆಲ್ಲ ಮಾದರಿಯಾಗಿದೆ. ಅಂತಹವರನ್ನು ಪ್ರತಿವರ್ಷ ಸ್ಮರಿಸಿ ಜ್ಯೋತಿ ಯಾತ್ರೆ ಮಾಡುವ ಮೂಲಕ ಜಾಗೃತಿ ಮೂಡಿಸುತ್ತಿರುವ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದರು.