ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಸೂಕ್ತ ಸಮಯದಲ್ಲಿ ಬೆಲ್ಟ್‌ ತೆಗೆದಿದ್ದರಿಂದ ಬದುಕುಳಿದೆ (Karnataka | Mangalore | Disaster | Accident | Aviation safety)
Bookmark and Share Feedback Print
 
ನಗರದ ಬಜಪೆ ವಿಮಾನ ನಿಲ್ದಾಣದಲ್ಲಿ ನಿನ್ನೆ ನಡೆದ ವಿಮಾನ ದುರಂತದಲ್ಲಿ ಬದುಕುಳಿದ ಅದೃಷ್ಟಶಾಲಿಗಳಲ್ಲಿ ಮೊಹಮ್ಮದ್ ಉಸ್ಮಾನ್(49) ಕೂಡಾ ಒಬ್ಬರು.

ಸಣ್ಣಪುಟ್ಟ ಗಾಯಗಳ ಚಿಕಿತ್ಸೆಗಾಗಿ ಯುನಿಟಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು, ತಮ್ಮ ಅನುಭವವನ್ನು ಬಿಚ್ಚಿಟ್ಟಿದ್ದಾರೆ.

ವಿಮಾನದ ಎಡಭಾಗದಲ್ಲಿರುವ 19ನೇ ಸಂಖ್ಯೆಯ ಸೀಟಿನಲ್ಲಿ ನಾನು ಕುಳಿತಿದ್ದೆ.ವಿಮಾನ ಲ್ಯಾಂಡ್ ಆಗುತ್ತಿದ್ದಂತೆ ಭಾರಿ ಸ್ಫೋಟದ ಶಬ್ದ ಕೇಳಿ ಬಂತು. ಸ್ಫೋಟದ ಕೇವಲ ಐದು ಸೆಕೆಂಡ್‌ಗಳ ನಂತರ ವಿಮಾನದಲ್ಲಿ ಬೆಂಕಿ ಆವರಿಸಲು ಆರಂಭಿಸಿತು.ನನ್ನ ಸೀಟ್‌ ಬೆಲ್ಟ್ ತೆಗೆಯಲು ಸಾಧ್ಯವಾಗುತ್ತಿರಲಿಲ್ಲ. ಆದರೆ ನಾನು ಕಷ್ಟಪಟ್ಟು ಅದನ್ನು ತೆಗೆಯುವಲ್ಲಿ ಯಶಸ್ವಿಯಾದೆ. ಎಡಭಾಗದಲ್ಲಿ ವಿಮಾನ ಬಿರುಕು ಬಿಟ್ಟಿತ್ತು. ಇಬ್ಬರು ಪ್ರಯಾಣಿಕರು ವಿಮಾನದಿಂದ ಹೊರಗೆ ಹಾರುತ್ತಿರುವುದು ನಾನು ನೋಡಿದೆ.ಮತ್ತೊಬ್ಬ ವ್ಯಕ್ತಿ ಹೊರಗೆ ಹಾರುವ ಪ್ರಯತ್ನ ಮಾಡಿ ವಿಫಲವಾದ. ವಿಮಾನದಲ್ಲಿದ್ದ ಪ್ರಯಾಣಿಕರಿಗೆ ಬೆಲ್ಟ್ ತೆಗೆಯುವ ಸಮಯ ಕೂಡಾ ದೊರೆಯಲಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

ಆದರೆ ನಾನು ಹೊರಗೆ ಹಾರುವಲ್ಲಿ ಯಶಸ್ವಿಯಾದೆ. ಹೊರಬಂದ ನಂತರ ವಿಮಾನದ ಇಂಧನ ಟ್ಯಾಂಕ್ ಸ್ಫೋಟಿಸುವ ಸಾಧ್ಯತೆಗಳಿಂದಾಗಿ ಆದಷ್ಟು ದೂರ ಓಡಲು ಪ್ರಯತ್ನಿಸಿದೆ. ಸುಮಾರು ಅರ್ಧ ಕಿ.ಮಿ. ದೂರ ಓಡಿದ ನಂತರ ರೈಲ್ವೆ ಹಳಿ ದೊರೆಯಿತು. ಕೆಲ ಗ್ರಾಮಸ್ಥರು ನನಗೆ ಮೊಬೈಲ್ ಹ್ಯಾಂಡ್‌ಸೆಟ್‌ ನೀಡಿ ನನ್ನ ಪತ್ನಿಗೆ ಕರೆ ಮಾಡಲು ಸಹಕರಿಸಿದರು. ಪತ್ನಿಯೊಂದಿಗೆ ಮಾತನಾಡಿದ ನಂತರ ನೇರವಾಗಿ ಆಸ್ಪತ್ರೆಗೆ ದಾಖಲಾದೆ. ಸೂಕ್ತ ಸಮಯದಲ್ಲಿ ಬೆಲ್ಟ್ ತೆಗೆಯುವಲ್ಲಿ ಯಶಸ್ವಿಯಾಗಿದ್ದರಿಂದ ನಾನು ಬದುಕುಳಿದೆ ಎಂದು ಮೊಹಮ್ಮದ್ ನಿಟ್ಟುಸಿರು ಬಿಟ್ಟಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ