ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ವಿಮಾನ ದುರಂತ: ಬ್ಲ್ಯಾಕ್ ಬಾಕ್ಸ್ ಹುಡುಕಾಟ ಯಶಸ್ವಿ (Black box | Plane crash)
Bookmark and Share Feedback Print
 
ವಿಮಾನ ದುರಂತದ ಬಗ್ಗೆ ಸಂಪೂರ್ಣ ಮಾಹಿತಿಗಳನ್ನು ಒಳಗೊಂಡಿರುವ ಬ್ಲ್ಯಾಕ್ ಬಾಕ್ಸ್‌ಗಾಗಿ ನಿನ್ನೆಯಿಂದ ಹರಸಾಹಸ ಪಡುತ್ತಿರುವ ತಜ್ಞರಿಗೆ ಇದೀಗ ಬ್ಲ್ಯಾಕ್ ಬಾಕ್ಸ್ ಪತ್ತೆಯಾಗಿರುವುದು ನಿರಾಳತೆಯನ್ನು ತಂದಿದೆ.

ಅಪಘಾತವಾಗುವ ಕೆಲ ನಿಮಿಷಗಳ ಮುಂಚೆ ಸಹ ಪೈಲೆಟ್‌ನೊಂದಿಗೆ ನಡೆಸಿದ ಸಂವಾದಗಳು ಹಾಗೂ ವಾಯ್ಸ್ ರೆಕಾರ್ಡರ್‌ಗಳು ಬ್ಲ್ಯಾಕ್ ಬಾಕ್ಸ್‌ನಲ್ಲಿ ದಾಖಲಾಗಿರುತ್ತವೆ.ವಿಮಾನ ಅಪಘಾತ ಸಂಭವಿಸಿದರೂ ಬ್ಲ್ಯಾಕ್‌ ಬಾಕ್ಸ್‌ಗೆ ಯಾವುದೇ ಹಾನಿಯಾಗುವುದಿಲ್ಲ.

ದುರಂತದಲ್ಲಿ ಮೃತರಾದವರ ಎಲ್ಲಾ ಶವಗಳನ್ನು ಸಾಗಿಸಿದ ನಂತರ ಬ್ಲ್ಯಾಕ್‌ಬಾಕ್ಸ್‌ಗಾಗಿ ಹುಡುಕಾಟ ಆರಂಭಿಸಲಾಯಿತು ಎಂದು ಅದಿಕಾರಿಗಳು ತಿಳಿಸಿದ್ದಾರೆ.

ನಿನ್ನ ಸಾಯಂಕಾಲದಿಂದ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದ್ದು,ಇಂದು ಬೆಳಿಗ್ಗೆ ಮತ್ತೆ ಕಾರ್ಯಾಚರಣೆಯನ್ನು ಆರಂಭಿಸಿದಾಗ ಬ್ಲ್ಯಾಕ್ ಬಾಕ್ಸ್ ಪತ್ತೆಯಾಗಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ