ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಗೆಲುವಿನಲ್ಲಿ ಮೈಮರೆತರೆ ಪಕ್ಷಕ್ಕೆ ಅಪಾಯ: ಕಾರಜೋಳ (BJP | Yeddyurappa | Bagalakote | Zilla panchayath | Election)
Bookmark and Share Feedback Print
 
ಗೆಲುವಿನ ಸಂಭ್ರಮದಲ್ಲಿ ಮೈಮರೆತರೆ ಅಪಾಯ ಕಟ್ಟಿಟ್ಟ ಬುತ್ತಿ. ಕಾರ್ಯಕರ್ತರು ಪಕ್ಷ ಸಂಘಟನೆಗೆ ಸಜ್ಜಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಕಾರ್ಯಕರ್ತರಿಗೆ ಸಲಹೆ ನೀಡಿದ್ದಾರೆ.

ಅಧಿಕಾರವಿಲ್ಲದಿದ್ದಾಗ ಹೋರಾಟ ಕೈಗೊಂಡ ನಾವು ಅಧಿಕಾರ ದೊರೆತ ತಕ್ಷಣ ಸಂಭ್ರಮದಲ್ಲೇ ಮುಳುಗುವಂತಿಲ್ಲ. ತಾಪಂ, ಜಿಪಂ ಹಾಗೂ ಗ್ರಾಮ ಮಟ್ಟದಲ್ಲಿ ಪಕ್ಷದ ಸಂಘಟನೆಗೆ ಆದ್ಯತೆ ದೊರೆಯಬೇಕು ಎಂದರು.

ಗ್ರಾಪಂ ಚುನಾವಣೆಯಲ್ಲಿ ಶೇ.30ರಷ್ಟು ಸ್ಥಾನಗಳನ್ನು ಪಕ್ಷ ಕಳೆದುಕೊಂಡಿತು. ನಮ್ಮವರೇ ಕೆಲವೆಡೆ ಅಭ್ಯರ್ಥಿಗಳ ವಿರುದ್ಧ ಚುನಾವಣೆಗೆ ಸ್ಪರ್ಧಿಸಿದ್ದು ಶಾಸಕರಿಗೆ ಮುಜುಗರ ಉಂಟುಮಾಡಿತು. ಬೆಳಗಾವಿ ಜಿಲ್ಲೆಯ ಬಾಗೇವಾಡಿ ಹಾಗೂ ಮುಧೋಳ ತಾಪಂ ಗಳಲ್ಲಿ ಮಾತ್ರ ಬಿಜೆಪಿ ಅಧಿಕಾರದಲ್ಲಿದೆ. ಈ ಬಾರಿಯ ಚುನಾವಣೆಗಳಲ್ಲಿ ಎಲ್ಲ ತಾಪಂಗಳಲ್ಲೂ ಬಿಜೆಪಿ ಅಧಿಕಾರ ಪಡೆಯುವಂತಾಗಬೇಕು ಎಂದರು.

ಜಿ.ಪಂಗಳಲ್ಲಿ ನಿರೀಕ್ಷಿತ ಮಟ್ಟದ ಕೆಲಸವಾಗಿಲ್ಲ. ಆಡಳಿತ ಬಿಗಿಯಾಗಿಲ್ಲ ಎಂಬ ಆರೋಪಗಳೂ ಕೇಳಿ ಬಂದಿವೆ. ಶಾಸಕರನ್ನು ಗಣನೆಗೆ ತೆಗೆದುಕೊಳ್ಳದೇ ನಿರ್ಧಾರ ಕೈಗೊಳ್ಳುವಂತಾಗಬಾರದು. ಮುಂದಿನ ಚುನಾವಣೆಗಳಲ್ಲಿ ಹಾಗೂ ನಾಮ ನಿರ್ದೇಶನದ ಸಂದರ್ಭಗಳಲ್ಲಿ ಎಲ್ಲ ಶಾಸಕರು ಹಾಗೂ ಸಂಸದರು ಸೇರಿ ಅರ್ಹರ ಆಯ್ಕೆಗೆ ನಿರ್ಧಾರ ಕೈಗೊಳ್ಳಲಿದ್ದಾರೆಂದು ಘೋಷಿಸಿದರು.
ಸಂಬಂಧಿತ ಮಾಹಿತಿ ಹುಡುಕಿ