ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಕಾಂಗ್ರೆಸ್ ರಾಜ್ಯದಲ್ಲಿ ನೆಲಕಚ್ಚುತ್ತಿದೆ: ಧರಂಸಿಂಗ್ (Congress | KPCC | Dharam singh | Sonia gandhi | BJP)
Bookmark and Share Feedback Print
 
ಕರ್ನಾಟಕದಲ್ಲಿ ಕಾಂಗ್ರೆಸ್ ದುಸ್ಥಿತಿಗೆ ಇಳಿಯುತ್ತಿದೆ. ನಾನಂತೂ ಈ ವಾದ ಒಪ್ಪಿಕೊಳ್ಳುತ್ತೇನೆ. ಈ ಸ್ಥಿತಿಗೆ ಹೊರಗಿನವರಿಗಿಂತ ನಮ್ಮವರ ಕೊಡುಗೆಯೇ ಹೆಚ್ಚು. ಕಾಂಗ್ರೆಸಿಗರ ಮೇಲೆ ಮುಖ್ಯಮಂತ್ರಿ ಸವಾರಿ ಮಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎನ್.ಧರಂಸಿಂಗ್ ಅಭಿಪ್ರಾಯಪಟ್ಟಿದ್ದಾರೆ.

ರಾಜ್ಯದ ಕಾಂಗ್ರೆಸ್ ವಿದ್ಯಮಾನದ ಬಗ್ಗೆ ಈಗಾಗಲೇ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಸುದೀರ್ಘವಾಗಿ ವಿವರಿಸಿದ್ದೇನೆ. ರಾಜ್ಯದಲ್ಲಿ ಪಕ್ಷದ ಪುನಶ್ಚೇತನಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಕುರಿತೂ ಗಮನ ಸೆಳೆಯಲಾಗಿದೆ. ಪ್ರತಿಪಕ್ಷವಾಗಿ ಕಾಂಗ್ರೆಸ್ ಸಮರ್ಥವಾಗಿದ್ದರೂ ಕೆಲಸ ಮಾಡುವ ರೀತಿ ಹೆಚ್ಚು ಕಡಿಮೆ ಆಗಿರುವ ಸಾಧ್ಯತೆಗಳಿವೆ. ಇದು ಹೈಕಮಾಂಡ್ ಗಮನಕ್ಕೂ ಬಂದಿದೆ. ಅಧ್ಯಕ್ಷರು, ಕಾರ್ಯಾಧ್ಯಕ್ಷರು ಉತ್ತಮ ಕೆಲಸ ಮಾಡುತ್ತಿದ್ದಾರೆ. ಆದರೂ ಪಕ್ಷವನ್ನು ಇನ್ನಷ್ಟು ಗಟ್ಟಿಗೊಳಿಸುವ ಅಗತ್ಯವಿದೆ. ಪಕ್ಷದಲ್ಲಿ ಸಾಂಸ್ಥಿಕ ಚುನಾವಣೆ ನಡೆಯುತ್ತಿದ್ದು, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಆಗುವುದಾದರೆ ಇನ್ನು ಮುಂದೆ ಇಬ್ಬರ ಬದಲು ಒಬ್ಬರನ್ನು ನೇಮಿಸುವುದು ಸೂಕ್ತ ಎಂದರು.

ರಾಜ್ಯದಲ್ಲಿ ಕಾಂಗ್ರೆಸ್ ಬಲ ಕ್ಷೀಣಿಸುತ್ತಿದೆಯೇ ಎಂಬ ಪ್ರಶ್ನೆಗೆ, ಅಂಥದ್ದೊಂದು ಅಭಿಪ್ರಾಯ ಕೇಳಿಬರುತ್ತಿದೆ. ಅದು ವಾಸ್ತವವೂ ಹೌದು. ನಾನದನ್ನು ಒಪ್ಪಿಕೊಳ್ಳುತ್ತೇನೆ. ಪಕ್ಷದ ದುಸ್ಥಿತಿಗೆ ನಾಯಕರ ನಡುವಿನ ಸಾಮರಸ್ಯ ಕೊರತೆ ಕಾರಣವೇ? ಸದನದಲ್ಲಿ ಸರಕಾರವನ್ನು ಪೇಚಿಗೆ ಸಿಲುಕಿಸುವಲ್ಲಿ ಕಾಂಗ್ರೆಸ್‌ಗಿಂತ ಜೆಡಿಎಸ್ ಮುಂದಿದೆ ಅಲ್ವೇ ಎಂದು ಕೇಳಿದಾಗಲೂ ಧರಂಸಿಂಗ್ ಉತ್ತರ `ಹೌದು' ಎಂಬುದೇ ಆಗಿತ್ತು.

ಕಾಂಗ್ರೆಸಿಗರ ಕೆಲ ಎಡವಟ್ಟುಗಳನ್ನು ಮುಖ್ಯಮಂತ್ರಿ ಯಡಿಯೂರಪ್ಪ ಬಿಜೆಪಿ ಪರ ಎನ್ಕ್ಯಾಶ್ ಮಾಡಿಕೊಳ್ಳುತ್ತಿದ್ದಾರೆ. ಯಥೇಚ್ಛ ಹಣ ಸುರಿದು ಬೇರೆ ಬೇರೆ ಪಕ್ಷಗಳನ್ನು ನಿರ್ನಾಮ ಮಾಡಲಾಗುತ್ತಿದೆ. ಒಂದರ್ಥದಲ್ಲಿ ಏಕಚಕ್ರಾಧಿಪತ್ಯ ಸ್ಥಾಪಿಸಲು ಹೊರಟಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದರು.
ಸಂಬಂಧಿತ ಮಾಹಿತಿ ಹುಡುಕಿ