ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ವಿಮಾನ ನಿಲ್ದಾಣಕ್ಕೆ 'ರನ್‌ವೇ ಅರೆಸ್ಟರ್' ಅಗತ್ಯ: ಪೂಜಾರಿ (Mangalore | Air port | Janardana Poojary | Congress)
Bookmark and Share Feedback Print
 
ಜಗತ್ತಿನಲ್ಲಿ ಕೆಲವೇ ವಿಮಾನನಿಲ್ದಾಣಗಲ್ಲಿ ಅಳವಡಿಸಿರುವ `ರನ್‌ವೇ ಅರೆಸ್ಟರ್'ನ್ನು ಸುರಕ್ಷತೆ ದೃಷ್ಟಿಯಿಂದ ಮಂಗಳೂರು ವಿಮಾನ ನಿಲ್ದಾಣದಲ್ಲೂ ಅಳವಡಿಸಬೇಕು. ಆ ನಿಟ್ಟಿನಲ್ಲಿ ರನ್‌ವೇ ದುರಂತ ಸಂಭವಿಸದಂತೆ ತಡೆಯುವಲ್ಲಿ ಈ ವ್ಯವಸ್ಥೆ ನೆರವಾಗುತ್ತದೆ ಎಂದು ಕಾಂಗ್ರೆಸ್ ನಾಯಕ ಬಿ. ಜನಾರ್ದನ ಪೂಜಾರಿ ಒತ್ತಾಯಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 8,000 ಅಡಿಯ ರನ್ವೇಯನ್ನು ಇನ್ನೂ 1,000- 2,000 ಅಡಿ ವಿಸ್ತರಿಸುವುದು ಒಳಿತು. ಈಗಿರುವ ರನ್‌ವೇ ಬೇಡ, ವಿಮಾನ ನಿಲ್ದಾಣವೂ ಬೇಡ ಎನ್ನುವ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಒಂದೊಮ್ಮೆ ಯಾರಾದರೂ ಉಚ್ಚ ನ್ಯಾಯಾಲಯ, ಸರ್ವೋಚ್ಚ ನ್ಯಾಯಾಲಯದ ಮೊರೆ ಹೋಗಿ ವಿಮಾನ ನಿಲ್ದಾಣ ಮುಚ್ಚುವಂತಾದರೆ ಎಸ್ಇಝಡ್ ಸಹಿತ ಕೈಗಾರಿಕೆಗಳ ಸ್ಥಾಪನೆಗೆ ಹಿನ್ನಡೆಯಾಗಲಿದೆ ಎಂದರು.

ಅಂತಾರಾಷ್ಟ್ರೀಯ ಒಪ್ಪಂದದಂತೆ ಪರಿಹಾರವನ್ನು ಸತ್ತ ವ್ಯಕ್ತಿಯ ವಯಸ್ಸು, ಉದ್ಯೋಗ, ಸಂಬಳ, ಅವಲಂಬಿತರ ಸಹಿತ ಎಲ್ಲವನ್ನೂ ಪರಿಗಣಿಸಿ ನೀಡಲಾಗುತ್ತಿದ್ದು ವೈಯಕ್ತಿಕ, ಕಂಪನಿಯ ವಿಮಾ ಹಣವೂ ಪ್ರತ್ಯೇಕವಾಗಿ ದೊರೆಯಲಿದೆ. ಸೂಕ್ತ ದಾಖಲೆಗಳನ್ನು ಸಂಗ್ರಹಿಸಿ ಪರಿಹಾರ ಒದಗಿಸುವ ನಿಟ್ಟಿನಲ್ಲಿ ತುರ್ತು ಕ್ರಮ ಕೈಗೊಳ್ಳಬೇಕು. ಮೃತರ ಕುಟುಂಬಕ್ಕೆ ಮಾಹಿತಿ ಕೊಡಬೇಕು ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ