ಸರಕಾರಿ ಇಲಾಖೆ ಹುದ್ದೆಗಳ ನೇಮಕದ ವೇಳೆ ರಂಗಭೂಮಿಯಲ್ಲಿ ತರಬೇತಿ ಹೊಂದಿದವರಿಗೆ ಮೀಸಲು ನೀಡಬೇಕು ಎಂದು ಸಾಣೇಹಳ್ಳಿ ಮಠದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಒತ್ತಾಯಿಸಿದ್ದಾರೆ.
ರಂಗಭೂಮಿಯಲ್ಲಿ ತರಬೇತಿ ಪಡೆದವರನ್ನು ಸರಕಾರದ ಕನ್ನಡ ಮತ್ತು ಸಂಸ್ಕ್ಕತಿ ಇಲಾಖೆ ಹಾಗೂ ಪ್ರಾಥಮಿಕ ಶಾಲೆಗಳಲ್ಲಿ ನೇಮಿಸಿಕೊಳ್ಳಲು ಸರಕಾರ ಕ್ರಮ ಕೈಗೊಳ್ಳಬೇಕು. ಮುಖ್ಯವಾಗಿ ಪ್ರಾಥಮಿಕ ಶಾಲೆಗಳಲ್ಲಿ ರಂಗ ತರಬೇತಿ ಪಡೆದ ಶಿಕ್ಷಕರನ್ನು ನೇಮಿಸಬೇಕು. ಆಂಗಿಕ ಅಭಿನಯ, ಸಂಗೀತ, ವಿನ್ಯಾಸ ಮುಂತಾದ ರಂಗ ತಂತ್ರಗಳ ಮೂಲಕ ಕಠಿಣವಾದ ಪಠ್ಯವನ್ನೂ ಶಿಕ್ಷಕ ಸುಲಭವಾಗಿ ಹೇಳಲು ಸಾಧ್ಯ. ರಂಗತರಬೇತಿ ಪಡೆದ ಕಲಾವಿದ ಶ್ರೇಷ್ಠ ಶಿಕ್ಷಕನಾಗುವುದರಲ್ಲಿ ಅನುಮಾನವಿಲ್ಲ ಎಂದು ಅಭಿಪ್ರಾಯಪಟ್ಟರು.
ಯಾವ ಕಲೆಗಳೂ ಶೂನ್ಯದಲ್ಲಿ ಸಂಭವಿಸಲು ಸಾಧ್ಯವಿಲ್ಲ. ಅವೆಲ್ಲವೂ ಒಂದು ಸಂದರ್ಭದಲ್ಲಿ ನಡೆಯುತ್ತವೆ. ಸರ್ವಾಕಾರದ ಸಂದರ್ಭದಲ್ಲಿ ಕಲೆ ಕೇವಲ ಮನೋರಂಜನೆಗೆ ಸೀಮಿತವಾಗಿತ್ತು. ಈಗ ಪ್ರಜಾಪ್ರಭುತ್ವ ವ್ಯವಸ್ಥೆ ಇರುವುದರಿಂದ ವ್ಯವಸ್ಥೆ ಬಿಂಬಿಸುವ ಮತ್ತು ಬಲಪಡಿಸುವ ನಾಟಕಗಳು ಜನರಿಗಾಗಿ ಮೂಡಿಬರಬೇಕು ಎಂದರು.