ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಹಾಲಪ್ಪ ದೋಷಮುಕ್ತರಾಗಿ ಹೊರಬರಲಿದ್ದಾರೆ: ರಾಘವೇಂದ್ರ ಭವಿಷ್ಯ (B.Y.Raghavendra | Yadyurappa | Haratal Halappa | Sex Scandal)
Bookmark and Share Feedback Print
 
NRB
ರಾಜಕೀಯ ಕುತಂತ್ರಕ್ಕೆ ಸಿಲುಕಿ ಬಲಿಪಶುವಾಗಿರುವ ಮಾಜಿ ಸಚಿವ ಹರತಾಳು ಹಾಲಪ್ಪ ಅವರು ಸತ್ಯ ನಿರೂಪಿಸಿ ಪ್ರಕರಣದಿಂದ ದೋಷಮುಕ್ತರಾಗಿ ಹೊರಬರಲಿದ್ದಾರೆ ಎಂದು ಸಂಸದ ಬಿ.ವೈ. ರಾಘವೇಂದ್ರ ಭವಿಷ್ಯ ನುಡಿದಿದ್ದಾರೆ.

ದಂಡಾವತಿ ಯೋಜನೆ ಆಗದಂತೆ ತಡೆಯಲು ಪರ ರಾಜ್ಯದ ರಾಜಕಾರಣಿಗಳ ಮುಖಾಂತರ ತಡೆಯೊಡ್ಡುವ ಪ್ರಯತ್ನ ಹಾಗೂ ಹಾಲಪ್ಪ ಪ್ರಕರಣದ ವಿಚಾರದಲ್ಲಿ ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಕುಟುಂಬದವರು ವಿಫಲರಾಗಲಿದ್ದಾರೆ. ಹಾಲಪ್ಪ ಕಳಂಕ ಮುಕ್ತರಾಗುವುದು ಹಾಗೂ ದಂಡಾವತಿ ಯೋಜನೆ ಅನುಷ್ಠಾನಗೊಳ್ಳುವುದು ಶತಸಿದ್ಧ ಎಂದರು.

ತಾಲೂಕಿನ 39 ಗ್ರಾ.ಪಂ.ಗಳಲ್ಲಿ 23 ಬಿಜೆಪಿ ವಶವಾಗಿದ್ದು, 250 ಸದಸ್ಯರು ಜಯಗಳಿಸಿದ್ದಾರೆ. ತಾಲೂಕನ್ನು ನಂಜುಂಡಪ್ಪ ವರದಿಯಿಂದ ಹೊರತರಲು ಪಕ್ಷ ಸಂಪೂರ್ಣವಾಗಿ ತೊಡಗಿಸಿಕೊಂಡಿದೆ. ಸರಕಾರದಿಂದ ಬರುವ ಎಲ್ಲ ಸವಲತ್ತುಗಳನ್ನು ಪ್ರಥಮ ಆದ್ಯತೆ ನೀಡಿ ತಾಲೂಕಿಗೆ ತರಲಾಗುತ್ತದೆ. ಇದಕ್ಕಾಗಿ ಉತ್ತಮವಾಗಿ ಕಾರ್ಯ ನಿರ್ವಹಿಸಬೇಕೆಂದು ನೂತನ ಗ್ರಾ.ಪಂ.ಸದಸ್ಯರಿಗೆ ಕಿವಿ ಮಾತು ಹೇಳಿದರು.

ರಾಜ್ಯ ಸರಕಾರದಿಂದ ಅಭಿವೃದ್ದಿ ಅನುದಾನಗಳ ಸುರಿಮಳೆಯಾಗುತ್ತಿದ್ದು, ಅವುಗಳನ್ನು ಸಮರ್ಪಕವಾಗಿ ಜನತೆಗೆ ತಲುಪಿಸಿ ರಾಮರಾಜ್ಯ ನಿರ್ಮಾಣ ಮಾಡುವ ಹೊಣೆ ಸದಸ್ಯರ ಮೇಲಿದೆ ಎಂದರು.
ಸಂಬಂಧಿತ ಮಾಹಿತಿ ಹುಡುಕಿ