ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಬಂಡವಾಳಶಾಹಿಗಳಿಂದ ಸರಕಾರಕ್ಕೆ ಲಾಭ: ಚಂಪಾ ಕಿಡಿ (BJP | Yeddyurappa | Champa | Karnataka | Bangalore)
Bookmark and Share Feedback Print
 
ಬಂಡವಾಳ ಹೂಡಿಕೆದಾರರ ಸಮಾವೇಶದಿಂದ ಬಂಡವಾಳಶಾಹಿಗಳಿಗೆ ಲಾಭವಾಗಲಿದೆಯೇ ಹೊರತು ರಾಜ್ಯದ ಜನತೆಗೆ ಯಾವುದೇ ಪ್ರಯೋಜನವಾಗದು ಎಂದು ಹಿರಿಯ ಸಾಹಿತಿ ಚಂದ್ರಶೇಖರ ಪಾಟೀಲ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್ಲ ಸೌಕರ್ಯಗಳನ್ನು ಒದಗಿಸಿದರೆ ಬಂಡವಾಳಶಾಹಿಗಳು ಹಣ ಹೂಡಲು ಮುಂದೆ ಬರುತ್ತಾರೆ. ಆದರೆ ರಾಜಕಾರಣಿಗಳಿಗೆ ಲಾಭವಾಗುವುದರಿಂದ ಅವರು ಇಂಥ ಸಮಾವೇಶಗಳಿಗೆ ಆಸಕ್ತಿ ತೋರುತ್ತಾರೆ ಎಂದು ಟೀಕಿಸಿದರು.

ಹೊಗೇನಕಲ್ ವಿವಾದ ಕುರಿತು ಮಾತನಾಡಿದ ಅವರು, ಮುಖ್ಯಮಂತ್ರಿ ಯಡಿಯೂರಪ್ಪ ಆಸಕ್ತಿ ವಹಿಸಿ ತಮಿಳುನಾಡು ಮುಖ್ಯಮಂತ್ರಿಯನ್ನು ಭೇಟಿ ಮಾಡಿ ಮಾತುಕತೆ ನಡೆಸುವುದು ಅವಶ್ಯ. ಕನ್ನಡಿಗರ ಹಿತಾಸಕ್ತಿ ಕಾಪಾಡಲು ಸಿಎಂ ಮುಂದಾಗಬೇಕು ಎಂದರು.

ಹೊರಗಿನ ವೈರಿಗಳಿಗಿಂತ ಹೆಚ್ಚಾಗಿ ಒಳಗಿನ ಶತ್ರುಗಳಿಂದ ತೊಂದರೆ ಎದುರಿಸುತ್ತಿರುವ ಬಿಜೆಪಿ ಸರಕಾರದ 2 ವರ್ಷಗಳ ಆಡಳಿತ ಗೊಂದಲಮಯವಾಗಿತ್ತು. ಆದರೆ ಸದ್ಯಕ್ಕೆ ಗಣಿಧಣಿಗಳ ಆರ್ಭಟ ಕಡಿಮೆಗೊಂಡಿದ್ದು, ಸರಕಾರಕ್ಕೆ ಸ್ವಲ್ಪ ಸ್ಥಿರತೆ ಬಂದಂತೆ ಗೋಚರವಾಗುತ್ತಿದೆ. ಸರಕಾರದ ಸಾಧನೆ ನಿರೀಕ್ಷಿತ ಮಟ್ಟದಲ್ಲಿಲ್ಲ. ಶಾಲೆ ಮಾಸ್ತರ್ ಆಗಿದ್ದ ನಾನು ಸರಕಾರದ 2 ವರ್ಷಗಳ ಸಾಧನೆಗೆ 34 ಅಂಕಗಳನ್ನು ನೀಡಲು ಬಯಸುತ್ತೇನೆ. ಗ್ರೇಸ್ ಅಂಕಗಳಿಲ್ಲ. ನನ್ನ ಪ್ರಕಾರ ಇದು ಅನುತ್ತೀರ್ಣವಾಗಿದೆ. ಬಿಜೆಪಿ ಸರಕಾರದ ಮುಂದಿನ 3 ವರ್ಷಗಳ ಸಾಧನೆ ಬಗ್ಗೆ ಕುತೂಹಲವಿದೆ ಎಂದರು.

ಹೆಚ್ಚಿನ ಸಾಹಿತಿಗಳು ಇಂದು ಸಮಯಸಾಧಕರಾಗಿದ್ದಾರೆ. ಅವರಿಗೆ ನಮ್ಮ ನಾಡು ನುಡಿ ಬಗ್ಗೆ ಕಳಕಳಿಯೇ ಇಲ್ಲ. ಸರಕಾರದ ಕೃಪೆಗೆ ಪಾತ್ರರಾಗುವುದು ಅವರ ಉದ್ದೇಶ. ವಿಧಾನಸೌಧವನ್ನು ಪ್ರದಕ್ಷಿಣೆ ಹಾಕಿ ಲಾಭಮಾಡಿಕೊಳ್ಳುವುದು ಅವರ ತಂತ್ರಗಾರಿಕೆಯಾಗಿದೆ. ಸಾಹಿತ್ಯ ವಲಯದಲ್ಲೂ ಉತ್ತರ ಕರ್ನಾಟಕ ಭಾಗಕ್ಕೆ ಅನ್ಯಾಯವಾಗಿರುವುದು ಕಟು ವಾಸ್ತವ. ಈ ಭಾಗದ ಹಿರಿಯ ಸಾಹಿತಿಗಳು ಗೋಕಾಕ ಮಾದರಿ ಹೋರಾಟ ಕೈಗೆತ್ತಿಕೊಳ್ಳಬೇಕಿದೆ ಎಂದು ಸಲಹೆ ನೀಡಿದರು.
ಸಂಬಂಧಿತ ಮಾಹಿತಿ ಹುಡುಕಿ