ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಪ್ರೌಢಶಾಲೆ ಶಿಕ್ಷಕರ ಬಗ್ಗೆ ತಾರತಮ್ಯ ಸಲ್ಲ: ಹೊರಟ್ಟಿ (Congress | BJP | Horatti | Karnataka | Teacher)
Bookmark and Share Feedback Print
 
ಶಿಕ್ಷಕರ ಮತ್ತು ನೌಕರರ ಸಂಘಟನೆಗಳ ಕುಲುಮೆಯಿಂದ ಹೊರಬಂದವರಿಗೆ ಮಾತ್ರ ಶಿಕ್ಷಕ ಸಮುದಾಯದ ನೋವು ನಲಿವುಗಳ ಕಲ್ಪನೆ ಇರುತ್ತದೆ ಎಂದು ಮಾಧ್ಯಮಿಕ ಶಾಲಾ ನೌಕರರ ಸಂಘದ ರಾಜ್ಯಾಧ್ಯಕ್ಷ, ಮಾಜಿ ಶಿಕ್ಷಣ ಸಚಿವ ಬಸವರಾಜ ಹೊರಟ್ಟಿ ಹೇಳಿದ್ದಾರೆ.

ಓದುತ್ತಿರುವ ಮಕ್ಕಳಲ್ಲಿ ಮತ್ತು ಸರಕಾರಿ, ಖಾಸಗಿ ಪ್ರೌಢಶಾಲೆಗಳ ಶಿಕ್ಷಕರಲ್ಲಿ ತಾರತಮ್ಯ ಮಾಡುತ್ತಿರುವುದು ಅವೈಜ್ಞಾನಿಕ. ಪಠ್ಯಪುಸ್ತಕ ವಿಷಯದಲ್ಲಿ, ಶಿಕ್ಷಕರ ಸೇವಾ ನಿಯಮಗಳಲ್ಲಿ ಹಾಗೂ ಶಿಕ್ಷಕರ ನೇಮಕದಲ್ಲಿ ಅನ್ಯಾಯ ಉಂಟಾಗಿದೆ ಎಂದರು.

ಜೂ.21ರಂದು ನಡೆಯುವ ವಾಯವ್ಯ ಶಿಕ್ಷಕರ ಹಾಗೂ ಪದವೀಧರರ ಕ್ಷೇತ್ರಗಳಲ್ಲಿ ಹೋರಾಟದ ಹಿನ್ನೆಲೆ ಇರುವ ಸಹಜಾನಂದ ದಂಧರಗಿ ಹಾಗೂ ಮಲ್ಲಯ್ಯ ಮಠಪತಿಯವರನ್ನು ಆರಿಸುವ ಮೂಲಕ ಶಿಕ್ಷಕರು ಮತ್ತು ಪದವೀಧರರು ಸಮಸ್ಯೆಗಳಿಗೆ ಸ್ಪಂದಿಸುವ ಪ್ರತಿನಿಧಿಗಳನ್ನು ಹೊಂದಬೇಕು ಎಂದು ಮನವಿ ಮಾಡಿಕೊಂಡರು.

ಶಿಕ್ಷಕ ಸಮಾವೇಶದಲ್ಲಿ ಪ್ರಸ್ತುತ ಶೈಕ್ಷಣಿಕ ವಿಷಯಗಳ ಕುರಿತು ಚರ್ಚಿಸಿದ ಅವರು ಜಿಲ್ಲೆಯ ಎಲ್ಲ ತಾಲೂಕುಗಳಿಂದ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ ಶಿಕ್ಷಕರ ಜೊತೆ ನೇರ ಸಂವಾದ ನಡೆಸಿದರು.ಒಟ್ಟಾರೆ ಶಿಕ್ಷಣ ನೀಡಿಕೆ ವಿಷಯದಲ್ಲಿ ಇಂದು ಎಲ್ಲವೂ ಸಮರ್ಪಕವಾಗಿ ಆಗುತ್ತಿಲ್ಲ. ಸರಕಾರ ಈ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ಶಿಕ್ಷಣ ನೀಡಿಕೆ ಗಣನೆಗೆ ಬಾರದ ವಿಷಯವಾಗಿ ಬಿಂಬಿತವಾಗುತ್ತಿದೆ ಎಂದರು.
ಸಂಬಂಧಿತ ಮಾಹಿತಿ ಹುಡುಕಿ