ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಬಿಜೆಪಿ ಕನ್ನಡಿಗರ ಪರ ಸರಕಾರ: ಸುರೇಶ್ ಕುಮಾರ್ (BJP | Suresh kumar | Dharwad | Bangalore)
Bookmark and Share Feedback Print
 
ಹೊರನಾಡ ಕನ್ನಡಿಗರ ಸ್ಥಿತಿ-ಗತಿ ಅರಿತು ಅವರಿಗೆ ಯಾವುದೇ ತೊಂದರೆ ಬಾರದಂತೆ ನೋಡಿಕೊಳ್ಳಲು ರಾಜ್ಯ ಸರಕಾರ ಬದ್ಧವಾಗಿದೆ ಎಂದು ನಗರಾಭಿವೃದ್ದಿ ಸಚಿವ ಎಸ್.ಸುರೇಶ ಕುಮಾರ ಭರವಸೆ ನೀಡಿದ್ದು, ತಮ್ಮದು ಕನ್ನಡಿಗಪರ ಸರ್ಕಾರ ಎಂದು ಬಣ್ಣಿಸಿದರು.

ಹೊರನಾಡ ಕನ್ನಡಿಗರ ಸಮಸ್ಯೆಗಳಿಗೆ ಸರಕಾರ ಅಗತ್ಯ ಸ್ಪಂದನೆ ನೀಡುತ್ತದೆ. ಇನ್ನು ಮುಂದೆ ಅಕಾಡೆಮಿ ಸದಸ್ಯರ ಆಯ್ಕೆ ಸಂದರ್ಭದಲ್ಲಿ ಹೊರನಾಡ ಕನ್ನಡಿಗರ ನೇಮಕ ಮಾಡಿಕೊಳ್ಳುವತ್ತ ಸೂಕ್ತ ಗಮನ ನೀಡಲಾಗುವುದು ಎಂದರು.

ಹೊರನಾಡ ಕನ್ನಡ ಸಂಘಗಳು ತೀರ ಗಟ್ಟಿಯಾಗಿವೆ. ಅವುಗಳು ನಮ್ಮ ವ್ಯಾಪ್ತಿಗೆ ಮೀರಿದ ಸಾಧನೆ ಮಾಡುತ್ತಿವೆ ಎಂದು ಪ್ರಶಂಸಿಸಿದರು. ಬೆಂಗಳೂರು ಮತ್ತು ಇನ್ನಿತರ ಕಡೆಗೆ ನಡೆಯುವ ಕಾರ್ಯಕ್ರಮಗಳಿಗೆ ಹೊರನಾಡ ಕನ್ನಡ ಕಲಾವಿದರನ್ನು ಕರೆಸಿಕೊಂಡು ಅವರಲ್ಲಿರುವ ಪ್ರತಿಭೆಯನ್ನು ಪ್ರದರ್ಶಿಸುವುದಕ್ಕೆ ಸರಕಾರ ಪ್ರೋತ್ಸಾಹ ನೀಡಲಿದೆ. ಇನ್ನು ಮುಂದೆಯೂ ಹೊರನಾಡಿನಲ್ಲಿ ಅನೇಕ ಕಾರ್ಯಕ್ರಮ ಹಾಕಿಕೊಳ್ಳಲಾಗುವುದು. ಅಲ್ಲಿ ಗ್ರಂಥಾಲಯ ಸ್ಥಾಪಿಸುವುದಕ್ಕೆ ಸರಕಾರ ಎಲ್ಲ ರೀತಿಯ ಕ್ರಮ ತೆಗೆದುಕೊಳ್ಳುತ್ತದೆ ಎಂದು ತಿಳಿಸಿದರು.

ಹೊರನಾಡ ಕನ್ನಡಿಗರನ್ನು ಒಂದುಗೂಡಿಸಿ ಅವರ ಸಮಸ್ಯೆಗಳನ್ನು ಆಲಿಸುವ ಕಾರ್ಯಕ್ರಮ ಸರಕಾರ ಮಾಡಬೇಕಿದೆ. ಆದರೆ ಇದನ್ನು ಪಾಟೀಲ ಪುಟ್ಟಪ್ಪ ಅವರು ಮಾಡುತ್ತಿದ್ದಾರೆ ಎಂದರು. ಕನ್ನಡ ನಾಡು ಎಂದರೆ ಕೇವಲ ಭಾಷೆ ಅಲ್ಲ. ಇದು ಸಂಸ್ಕೃತಿ. ಇಂಥ ಸಂಸ್ಕೃತಿಯನ್ನು ನೆನಪಿಸಿಕೊಡುವುದಕ್ಕೆ, ವಿನಿಮಯ ಮಾಡಿಕೊಳ್ಳುವುದಕ್ಕೆ ಈ ಮಹಾ ಮೇಳ ಅತ್ಯಂತ ಅನುಕೂಲವಾಗಿದೆ ಎಂದು ಹೇಳಿದರು.
ಸಂಬಂಧಿತ ಮಾಹಿತಿ ಹುಡುಕಿ