ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ನಾಲ್ಕು ಮಕ್ಕಳ ತಾಯಿ ಪ್ರಿಯಕರನ ಜೊತೆ ಪರಾರಿ! (Mangalore | Police | Wedding | Lover | Karnataka)
Bookmark and Share Feedback Print
 
ಪ್ರೀತಿಗೆ ಕಣ್ಣಿಲ್ಲ ಎಂಬ ಮಾತನ್ನು ತಾಲೂಕಿನ ಎಣ್ಮೂರು ಗ್ರಾಮದ ಮಹಿಳೆಯೊಬ್ಬಳು ನಿಜ ಮಾಡಿದ್ದು, ನಾಲ್ಕು ಮಕ್ಕಳ ತಾಯಿಯೊಬ್ಬಳು ಪ್ರಿಯತಮನೊಂದಿಗೆ ಪರಾರಿಯಾಗಿರುವ ಘಟನೆ ನಡೆದಿದೆ.

ಎಣ್ಮೂರು ಗ್ರಾಮದ ನಿಂತಿಕಲ್ ನಿವಾಸಿ ಉಮೇಶ ಮಣಿಯಾಣಿ ಎನ್ನುವವರ ಪತ್ನಿ ಚಂದ್ರಿಕಾ (29) ನಾಪತ್ತೆಯಾಗಿರುವ ಮಹಿಳೆ. ಈ ದಂಪತಿಗೆ ನಾಲ್ವರು ಮಕ್ಕಳಿದ್ದಾರೆ. ಆದರೆ ಪ್ರೀತಿಯ ಪಾಶಕ್ಕೆ ಸಿಲುಕಿದ ಚಂದ್ರಿಕಾ ಮೇ 22ರಂದು ಸುಳ್ಯದ ಅಕ್ಕನ ಮನೆಗೆ ಹೋಗುವುದಾಗಿ ತಿಳಿಸಿ ಹೋದಾಕೆ ನಾಪತ್ತೆಯಾಗಿದ್ದಳು.

ತನ್ನ ಪತ್ನಿಗೆ ಅಜ್ಜಾವರ ಗ್ರಾಮದ ನಿವಾಸಿ ಜಯರಾಂ (30) ಎಂಬಾತನ ಜೊತೆ ಅನೈತಿಕ ಸಂಬಂಧವಿದ್ದು, ಅದರ ವಿರುದ್ಧ ತಾನು ಎಚ್ಚರಿಕೆ ನೀಡಿದ್ದೆ. ಈ ಹಿನ್ನೆಲೆಯಲ್ಲಿ ಆಕೆ ಜಯರಾಮನ ಜೊತೆ ಪರಾರಿಯಾಗಿರಬಹುದು ಎಂದು ಪತಿ ಎಂ.ಕೆ.ಉಮೇಶ್ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಈ ಪ್ರಕರಣವನ್ನು ದಾಖಲಿಸಿಕೊಂಡಿರುವ ಸುಳ್ಯ ಠಾಣಾ ಪೊಲೀಸರು ಮುಂದಿನ ತನಿಖೆ ನಡೆಸುತ್ತಿರುವುದಾಗಿ ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ