ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಆಂಟಿ ಜೊತೆ 'ಸಂಬಂಧ' ಇಟ್ಟುಕೊಳ್ಬೇಡಿ ಹುಷಾರ್! (Bangalore | Court | Karnataka | Police | Wedding)
Bookmark and Share Feedback Print
 
ಯುವತಿಯನ್ನು ಅಪಹರಿಸುವುದು, ವಂಚಿಸುವುದು,ಅತ್ಯಾಚಾರ ಎಸಗುವುದು, ಬೇರೊಬ್ಬರ ಹೆಂಡತಿ ಜೊತೆ ಪರಾರಿಯಾಗುವುದು ಅಪರಾಧ...ಆದರೆ ಇನ್ಮುಂದೆ ಮತ್ತೂ ಹುಷಾರಾಗಿರಿ...ವಿವಾಹಿತ ಮಹಿಳೆ ಜೊತೆ 'ಸಂಬಂಧ' ಇಟ್ಟುಕೊಂಡ ಗುಟ್ಟು ರಟ್ಟಾಗಿ ಬಾಯ್‌ಫ್ರೆಂಡ್ ಸಿಕ್ಕಿಬಿದ್ರೆ ಕಂಬಿ ಎಣಿಸಬೇಕಾಗುತ್ತೆ ಎಚ್ಚರ!

ಘಟನೆ ವಿವರ: ತನ್ನ ಪತ್ನಿ ಲಟಿಶಾ ಜೊತೆ ಇಬ್ರಾಹಿಂ ಎಂಬಾತ ಅಕ್ರಮ ಸಂಬಂಧ ಹೊಂದಿದ್ದು, ಆತನ ವಿರುದ್ಧ ಚಾರ್ಜ್‌ಶೀಟ್ ದಾಖಲಿಸಲು ಪೊಲೀಸರಿಗೆ ಸೂಚನೆ ನೀಡಬೇಕೆಂದು ಕೋರಿ ಪತಿ ನವೀನ್ ಕೋರ್ಟ್ ಮೆಟ್ಟಿಲೇರಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ನಗರದ 10ನೇ ಎಸಿಎಂಎಂ ಕೋರ್ಟ್, ಇಬ್ರಾಹಿಂ ವಿರುದ್ಧ ಐಪಿಸಿ 497ರ ಅಡಿಯಲ್ಲಿ ಚಾರ್ಜ್‌ಶೀಟ್ ದಾಖಲಿಸುವಂತೆ ಆದೇಶ ನೀಡುವ ಮೂಲಕ ಅಕ್ರಮ ಸಂಬಂಧ ಇಟ್ಟುಕೊಳ್ಳುವ ಬಾಯ್‌ಫ್ರೆಂಡ್‌ಗಳಿಗೆ ಎಚ್ಚರಿಕೆಯ ಕರೆಗಂಟೆ ನೀಡಿದಂತಾಗಿದೆ.

ಲಟಿಶಾ ಮತ್ತು ನವೀನ್ ಮದುವೆಯಾಗಿ ಎಂಟು ವರ್ಷವಾಗಿತ್ತು. ಆದರೆ ತನ್ನ ಪತ್ನಿ ಇಬ್ರಾಹಿಂ ಎಂಬಾತನ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿರುವುದು ಗಮನಕ್ಕೆ ಬಂದಿತ್ತು. ಆದರೆ ಆ ಬಗ್ಗೆ ಸಾಕ್ಷ್ಯದ ಅಗತ್ಯವಿತ್ತು. ನವೀನ್ ಹತ್ತಿರ ದೂರವಾಣಿ ಸಂಭಾಷಣೆಯ ದಾಖಲೆ ಕೂಡ ಇರಲಿಲ್ಲವಾಗಿತ್ತು. ಕೊನೆಗೂ ಕೋರ್ಟ್ ಮೆಟ್ಟಿಲೇರಿದ್ದ ನವೀನ್‌ಗೆ, ಪತ್ನಿಯ ಬಾಯ್‌ಫ್ರೆಂಡ್ ವಿರುದ್ಧ ದೂರು ದಾಖಲಿಸಲು ಗ್ರೀನ್ ಸಿಗ್ನಲ್ ಸಿಕ್ಕಂತಾಗಿದೆ. ಒಂದು ವೇಳೆ ಪೊಲೀಸ್ ತನಿಖೆಯ ವೇಳೆ ಆರೋಪ ಸಾಬೀತಾದರೆ ಐದು ವರ್ಷಗಳ ಜೈಲುಶಿಕ್ಷೆಯನ್ನು ಇಬ್ರಾಹಿಂ ಅನುಭವಿಸಬೇಕಾಗುತ್ತದೆ. ಅದೇ ರೀತಿ ಪತಿಗೆ ಮೋಸಮಾಡಿದ ಲಟಿಶಾ ಕೂಡ ಶಿಕ್ಷೆ ಅನುಭವಿಸಬೇಕಾಗುತ್ತೆ.
ಸಂಬಂಧಿತ ಮಾಹಿತಿ ಹುಡುಕಿ