ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಭೂ ಕಬಳಿಕೆಗಾಗಿ ಹೂಡಿಕೆದಾರರ ಸಮಾವೇಶ: ಸಿದ್ದರಾಮಯ್ಯ (Siddaramaiah | Congress | BJP | Yeddyurappa | KPCC)
Bookmark and Share Feedback Print
 
ಬೆಂಗಳೂರು ಸುತ್ತ ಮುತ್ತ ಕೈಗಾರಿಕೆ ಹೆಸರಿನಲ್ಲಿ ಭೂಮಿ ಕಬಳಿಸಲು ಸರಕಾರ ಹೊರಟಿದ್ದು, ಇದಕ್ಕಾಗಿ ವಿಶ್ವ ಬಂಡವಾಳ ಹೂಡಿಕೆ ಸಮಾವೇಶವನ್ನು ಆಯೋಜಿಸಿದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಗಂಭೀರವಾಗಿ ಆರೋಪಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಭೂಮಿಗೆ ಚಿನ್ನದ ಬೆಲೆ ಇರುವುದರಿಂದ ಸರಕಾರ ಇಂಥ ಹುನ್ನಾರ ನಡೆಸುತ್ತಿದೆ. ಬಂಡವಾಳ ಹೂಡಿಕೆ ಸಮಾವೇಶ ಮಾಡುವ ಮೊದಲು ಮೂಲ ಸೌಕರ್ಯ ಒದಗಿಸಬೇಕು. ಈ ಕಾರ್ಯವನ್ನು ಇನ್ನೂ ಪೂರ್ಣಗೊಳಿಸದೇ ಸಮಾವೇಶ ನಡೆಸಿದ್ದಾರೆ ಎಂದರು.

ಸೌಕರ್ಯ ಎಲ್ಲಿದೆ ?: ಕಳೆದ ಎರಡು ವರ್ಷದಲ್ಲಿ ಸರಕಾರದ ಸಾಧನೆ ಶೂನ್ಯವಾಗಿದೆ. ಹಣ ಮಾಡುವ ಉದ್ದೇಶದಿಂದ ಈ ಸಮಾವೇಶ ಆಯೋಜಿಸಿದೆ. ಇದರಿಂದ ಜನರಿಗೆ ಎಳ್ಳಷ್ಟು ಲಾಭವಿಲ್ಲ ಎಂದರು. ರಾಜ್ಯ ಸರಕಾರ ವಿಶ್ವ ಬಂಡವಾಳ ಹೂಡಿಕೆ ಸಮಾವೇಶ ಮಾಡುತ್ತಿದೆ ನಿಜ. ಆದರೆ, ವಿದೇಶಿ ಕಂಪನಿಗಳು-ಕಾರ್ಖಾನೆಗಳು ಬಂದರೆ ಅವುಗಳಿಗೆ ಕೊಡಲು ವಿದ್ಯುತ್ ಎಲ್ಲಿದೆ. ರೈತರಿಗೆ ಬೆಳೆ ಬೆಳೆಯಲು ಅಣೆಕಟ್ಟುಗಳಿಂದ ನೀರು ಸಿಗದಂತಾಗಿದೆ. ಅಂತಹದರಲ್ಲಿ ಕಾರ್ಖಾನೆಗಳಿಗೆ ನೀರು ಎಲ್ಲಿಂದ ತಂದುಕೊಡುತ್ತಾರೆ. ರಾಜ್ಯದಲ್ಲಿ ರಸ್ತೆಗಳು ಹದಗೆಟ್ಟಿವೆ. ಆದರೂ, ರಾಜ್ಯ ಸರಕಾರ ಈ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಉತ್ತಮ ಸೇವೆಗಳಿಲ್ಲದೇ ಬಂಡವಾಳ ಹೂಡಿ ಎಂದು ಕರೆದರೆ ಯಾರು ಬಂದು ಹೂಡುತ್ತಾರೆ ಎಂದು ಪ್ರಶ್ನಿಸಿದರು.

ರಾಜ್ಯದಲ್ಲಿ ಕಳೆದ 2 ವರ್ಷದಲ್ಲಿ ಎಷ್ಟು ಕಂಪನಿಗಳು ಬಂದಿವೆ. ಎಷ್ಟು ಜನರಿಗೆ ಉದ್ಯೋಗ ನೀಡಲಾಗಿದೆ ಎಂಬುದನ್ನು ಬಹಿರಂಗಪಡಿಸಲಿ ಎಂದು ಸಿದ್ದರಾಮಯ್ಯ ಸವಾಲು ಹಾಕಿದರು.

ರಾಜ್ಯದ 15 ಜಿಲ್ಲೆಯಲ್ಲಿ ನೆರೆ ಸಂತ್ರಸ್ತರಿದ್ದಾರೆ. ಇಲ್ಲಿವರೆಗೆ ಸರಕಾರ ಅವರಿಗೆ ಸಹಾಯಹಸ್ತ ಚಾಚಿಲ್ಲ. ಅದರ ಬದಲಿಗೆ ಸಮಾವೇಶದ ಪ್ರಚಾರಕ್ಕಾಗಿ ಮಾಧ್ಯಮಗಳಿಗೆ ನೂರಾರು ಕೋಟಿ ರೂ. ಜಾಹೀರಾತು ನೀಡುತ್ತಿದೆ. ಅದರ ಬದಲಿಗೆ ನೆರೆ ಸಂತ್ರಸ್ತರಿಗೆ ಮನೆ ನೀಡಿ, ಕುಡಿವ ನೀರಿನ ಸಮಸ್ಯೆ ಬಗೆಹರಿಸಬಹುದಿತ್ತು ಎಂದರು.
ಸಂಬಂಧಿತ ಮಾಹಿತಿ ಹುಡುಕಿ